ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಂಡ ಶಿವ ಸಂಕೀರ್ತನೆ

ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಂಡ ಶಿವ ಸಂಕೀರ್ತನೆ
ನಗರದ ಶ್ರೀರಾಘವೇಂದ್ರ ಮಹಾಸ್ವಾಮಿಗಳ ಮಠದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ಯ 24 ಗಂಟೆ ತಂಬೂರಿ ಅಖಂಡ ಶಿವ ಸಂಕೀರ್ತನೆ ಪ್ರಾರಂಭಿಸಲಾಯಿತು.
ಬುಧವಾರ ಬೆಳಗ್ಗೆ ಶ್ರೀಮಠದಲ್ಲಿ ಗೋಪಾಲಾಚಾರ್ಯ ಜೋಶಿ ಅವರಿಂದ ರುದ್ರ ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಿತು. ಅರ್ಚಕರಾದ ವಾಸುದೇವಾಚಾರ್ಯ ಜೋಶಿ, ಋತ್ವಿಜರಾದ ದಾಮೋಧರ ಭಟ್ಟ, ವೇದವ್ಯಾಸಾಚಾರ್ಯ ಜೋಶಿ, ಪವನ ಕುಲಕರ್ಣಿ.
ನಂತರ ತಂಬೂರಿ ಪೂಜೆಯೊಂದಿಗೆ 24 ಗಂಟೆಗಳ ಅಖಂಡ ಶಿವ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ಗುರುವಾರ ಬೆಳಗ್ಗೆ 8 ಗಂಟೆಗೆ ಶಿವ ಸಂಕೀರ್ತನೆ ಮಂಗಳ.
ಶಹಾಬಾದ್ ವರದಿ :-ನಾಗರಾಜ್ ದಂಡಾವತಿ