ಕುಕನೂರು ಗ್ರಾಮ ಪಂಚಾಯತಿ ಭ್ರಷ್ಟಾಚಾರ ತನಿಖೆ ಡಾ.ಮಲ್ಲಿಕಾರ್ಜುನ್ ನಾಯ್ಕೋಡಿ ಆಗ್ರಹ
ಕುಕನೂರು ಗ್ರಾಮ ಪಂಚಾಯತಿ ಭ್ರಷ್ಟಾಚಾರ ತನಿಖೆ ಡಾ.ಮಲ್ಲಿಕಾರ್ಜುನ್ ನಾಯ್ಕೋಡಿ ಆಗ್ರಹ
ಯಡ್ರಾಮಿ ತಾಲೂಕಿನ ಕುಕನೂರು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸಿನ ಕ್ರಿಯಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿ ಅವರು ಸೆರಿ ಯಾವುದೇ ಕಾಮಗಾರಿಯನ್ನು ಮಾಡದೆ ಸುಳ್ಳು ದಾಖಲೆಯನ್ನು ಸೃಷ್ಟಿ ಮಾಡಿ2023\24ನೆಯ ಸಾಲಿನಲ್ಲಿ 15.55000 ರೂಪಾಯಿಗಳು ಅದೇ ರೀತಿಯಾಗಿ2024/25ನೆಯ ಸಾಲಿನಲ್ಲಿ20.00.000 ರೂಪಾಯಿಗಳು ಸರಕಾರದ ಇಷ್ಟು ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡಿದ್ದಾರೆ.
ಅಲ್ಲದೆ ಗ್ರಾಮಸ್ಥರು ಮತ್ತು ಪಂಚಾಯತಿಯ ಸದಸ್ಯರು ಯಾವುದೇ ಕೆಲಸಕ್ಕೂ ಗ್ರಾಮ ಪಂಚಾಯತ್ ಅಧ್ಯಕ್ಷರ ಪತಿ ಅವರಿಗೆ ಕೇಳಬೇಕು ಎಲ್ಲದಕ್ಕೂ ಏಕವಚನದಲ್ಲಿ ವ್ಯವಹರಿಸುತ್ತಾರೆ ಕಾರಣ ಗ್ರಾಮ ಪಂಚಾಯತ್ ಅಧ್ಯಕ್ಷರು ಅನಕ್ಷರಸ್ಥರಾಗಿರುತ್ತಾರೆ ಅವರು ಪಂಚಾಯತಿಗೆ ಬರುವುದಿಲ್ಲ. ಅಧ್ಯಕ್ಷರ ಪತಿಯವರು ಪರೋಕ್ಷವಾಗಿ ಎಲ್ಲಾ ಕೆಲಸ ಮಾಡುತ್ತಿದ್ದಾರೆ.
ಈ ರೀತಿಯಾಗಿ ಒಬ್ಬರ ಅಧಿಕಾರ ಇನ್ನೊಬ್ಬರು ಚಲಾಯಿಸುವುದು ಕಾನೂನು ಅಡಿಯಲ್ಲಿ ಉಲ್ಲಂಘನೆ ಆಗುತ್ತದೆ ಈ ರೀತಿಯಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಪಂಚಾಯತಿಯ ಲೂಟಿಕೋರರ ವಿರುದ್ಧ ಸಂಪೂರ್ಣ ತನಿಖೆ ನಡೆಸಿ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕಾ ಖರ್ಗೆ ಅವರಿಗೆ ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಡಾ ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ