ಕಲ್ಯಾಣ ಕರ್ನಾಟಕ ಉತ್ಸವ" ವನ್ನು 18" ರಂದು ಆಚರಿಸಲು ಆಗ್ರಹ

ಕಲ್ಯಾಣ ಕರ್ನಾಟಕ ಉತ್ಸವ" ವನ್ನು 18" ರಂದು ಆಚರಿಸಲು ಆಗ್ರಹ

ಕಲ್ಯಾಣ ಕರ್ನಾಟಕ ಉತ್ಸವ" ವನ್ನು18" ರಂದು ಆಚರಿಸಲು ಆಗ್ರಹ 

ಇತಿಹಾಸದ ತಪ್ಪು ತಿಳುವಳಿಕೆ ಯನ್ನು ತಿದ್ದುಪಡಿ ಗೊಳಿಸಿ ಕಲ್ಯಾಣ ಕರ್ನಾಟಕ ಉತ್ಸವ" ವನ್ನು *ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರೋತ್ಸವ ವೆಂದು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ (ರಿ), ಕಲಬುರಗಿ ಹಾಗೂ "ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿ" (ರಿ), ಕಲಬುರಗಿಯ ಸಂಯುಕ್ತವಾಗಿ ಜಂಟಿಯಾಗಿ ಆಗ್ರಹಿಸಿದೆ 

  ಈ ಹಿಂದೆ, ವಕೀಲರು ಹಾಗೂ ಕಾನೂನು ಮಂತ್ರಿಗಳಾಗಿದ್ದ ಮಾನ್ಯ ಜೆ. ಮಾದುಸ್ವಾಮಿ ಅವರು, ಮೊದಲ ಬಾರಿ ಕಲಬುರಗಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮತ್ತು, ಕಲಬುರಗಿಗೆ KAT ಪೀಠ ಉದ್ಘಾಟಿಸಲು ಆಗಮಿಸಿದ ಸಮಯದಲ್ಲಿ ನಮ್ಮ ಒಕ್ಕೂಟದ ವತಿಯಿಂದ ಮನವಿ ಮಾಡಿಕೊಂಡರು ತಿದ್ದುಪಡಿ ಮಾಡಲಿಲ್ಲ, 25 ವರ್ಷಗಳಾದರು, ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಯನ್ನು 1998 ರಲ್ಲಿ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತಪ್ಪು ನಿರ್ಣಯ ವನ್ನು ನೈಜ ಸಂಗತಿಗಳನ್ನು ಪರಿಗಣಿಸಿ, ಸತ್ಯಾಸತ್ಯತೆಯನ್ನು ಕಾನೂನಾತ್ಮಕವಾಗಿ ಸರಿಪಡಿಸಿ, ತಿದ್ದುಪಡಿಗೊಳಿಸಲು ಸಾಧ್ಯವಾಗಿಲ್ಲ, ಈ ಭಾಗದ ತಪ್ಪು ಆಚರಣೆಯ ದಿನವನ್ನು ಮರು ನಿಗದಿಗೊಳಿಸಿ ಆಚರಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರಗಳು ವಿಫಲವಾಗಿವೆ, ನಮ್ಮ ಮನವಿಗೆ ಇಲ್ಲಿಯವರೆಗೆ ಸೂಕ್ತ ಉತ್ತರವನ್ನು ನೀಡದೆ, ಈ ಭಾಗಕ್ಕೆ ಮಲತಾಯಿ ಧೋರಣೆ ಹೊಂದಿ ಅನ್ಯಾಯ ಎಸಗುತ್ತಿದೆ ಅಲ್ಲದೆ ನಮ್ಮ ಮನವಿಗೆ ಅಧಿಕೃತವಾಗಿ ಉತ್ತರವು ನೀಡದೆ ನಮ್ಮ ಭಾವನೆಗಳಿಗೆ ಸರ್ಕಾರ ಅಪಮಾನ, ಅವಮಾನ ಗೊಳಿಸುತಿದೆ ಎಂದು ಈ ಭಾಗದ ಕಲ್ಯಾಣ ಕರ್ನಾಟಕ ಯುವಜನ ಒಕ್ಕೂಟದ ರಾಜ್ಯ ಸಂಚಾಲಕರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕ.ಕ.ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ, ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ಒಕ್ಕೂಟದ ವಿಭಾಗೀಯ ಸಂಚಾಲಕ, ಉದಯಕುಮಾರ್ ಜೇವರ್ಗಿ, ಕಾರ್ಯಾಧ್ಯಕ್ಷ ಶ್ರೀ ಭೀಮರಾವ ಜಿರಗಿ, ಕರ್ನಾಟಕ ಯುವಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅನಂತ. ಜಿ. ಗುಡಿ ಹಾಗೂ ಸದಸ್ಯರು ಮತ್ತು ಇತರರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 371 j ನಂತರವೂ ಕೂಡಾ ಕಳೆದ ದಶಕಗಳಿಂದ ನಮ್ಮ ಒಕ್ಕೂಟದ ಪತ್ರಗಳಿಗೂ ಉತ್ತರ ನೀಡಿಲ್ಲ, ಸೆಪ್ಟೆಂಬರ್ 17 ರಂದೆ ಆಚರಿಸಲು ಸರ್ಕಾರದ ಬಳಿ ಇರುವ ಧಾಖಲೆಗಳು ಪ್ರಕಟಿಸಲು ಆಗ್ರಹಿಸಿದ್ದಾರೆ. ಒಬ್ಬ ನ್ಯಾಯವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ.2.7.2021 ರಂದು ಸಲ್ಲಿಸಿದ ಮನವಿಗೂ 3 ವರ್ಷಗಳಿಂದ ಉತ್ತರ ನೀಡದ ಜಿಲ್ಲಾಡಳಿತಕ್ಕೂ ಹಿಡಿ ಶಾಪದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 18 ರಂದು ಈ ಭಾಗದ ಮರು ಸ್ವಾತಂತ್ರೋತ್ಸವ ವನ್ನು ಪ್ರತ್ಯೇಕವಾಗಿ ಬೆಳ್ಳೆಗ್ಗೆ 8.30 ರಿಂದ 9 ರವರೆಗೆ ಆಚರಿಸಲಾಗುವುದು ಎಂದು ನ್ಯಾಯವಾದಿ ಜೆನವೇರಿ ವಿನೋದ ಕುಮಾರ ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಡಾ. ಅಂಬೇಡ್ಕರ್ ರ ಮಾತಿನಂತೆ, ಇತಿಹಾಸ ಅರಿಯದವರು, ಇತಿಹಾಸ ಶೃಷ್ಟಿಸಲಾರರು ಎನ್ನುವ ನಂಬಿಕೆ ಮೇಲೆ ವಿಶ್ವಾಸ ವಿಟ್ಟು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಮತ್ತು ನೈಜ ಇತಿಹಾಸಕ್ಕೆ ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲಗೊಳ್ಳಲು ಕರೆ ನೀಡಿದ್ದಾರೆ ಹಾಗೂ ಈ ನಿಲುವಿಗೆ ಸದ್ಗುರು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಯವರು ಬೆಂಬಲಿಸಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲು ಸಹಕಾರಿ ಯಾಗುತ್ತೆನೆ ಎಂದು ತಿಳಿಸಿದ್ದಾರೆ.