ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ ಅವರ ನೇತೃತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವರಿಗೆ ಮನವಿ

ಕಲಬುರಗಿ: ಶ್ರೀ ಶಂಕರಗೌಡ ಜಿ. ಸಹಾಯಕ ಗ್ರಂಥಪಾಲಕ ಇವರು ಹಂಪಿ ವಿಶ್ವವಿದ್ಯಾಲಯದಿಂದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾಗಿ ಬಂದ ಕುರಿತು ಸ್ಪಷ್ಟಿಕರಣ ನೀಡಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ ಅವರ ನೇತೃತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವರಿಗೆ ಮನವಿ ಸಲ್ಲಿಸಿದರು. 

 ಶ್ರೀ ಶಂಕರಗೌಡ ಜಿ, ಸಹಾಯಕ ಗ್ರಂಥಪಾಲಕ ಲಂಚ ನೀಡಿ ಅಂದಿನ ಕುಲಪತಿಗಳಾದ ಪ್ರೊ. ದಯಾನಂದ ಅಗಸರ ಇವರಿಗೆ ಶಿಫಾರಸ್ಸು ಮಾಡಿ ಯಾವುದೇ ಸ್ಪಷ್ಟ ಆದೇಶ ಇಲ್ಲದೇ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾಗಿ ಬಂದಿರುತ್ತಾರೆ ಎಂದು ತಿಳಿದುಬಂದಿದೆ.

ಇವರು ಹಂಪಿ ವಿಶ್ವವಿದ್ಯಾಲಯದಿಂದ ನಿಯುಕ್ತಿಗೊಂಡ ಆದೇಶ ಪತ್ರ ರಾಜ್ಯ ಸರಕಾರದ ಆದೇಶ ಪತ್ರ ಮತ್ತು ತಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಆದೇಶ ಎಲ್ಲವನ್ನು

ಒದಗಿಸಬೇಕೆಂದು.

ಈ ವರ್ಗಾವಣೆ ಅನಧೀಕೃತವಾಗಿದೆ. ಮತ್ತು ಪ್ರೊ. ದಯಾನಂದ ಅಗಸರ ಹಾಗೂ ಗ್ರಂಥಪಾಲಕ ಡಾ. ಸುರೇಶ ಜಂಗೆ ಅವರು ಲಂಚ ಪಡೆದಿದ್ದಾರೆ. ಈ ಕುರಿತು ತನಿಖೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಕಲ್ಯಾಣಿ ಎಸ್ ತಳವಾರ, ಜಿಲ್ಲಾ ಉಪಾಧ್ಯಕ್ಷ ಶಂಕರ ದೊಡ್ಡಮನಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಾಗರಾಜ ಮ್ಯಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ ದೊಡ್ಡಮನಿ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಟೈಗರ್, ತಾಲೂಕು ಯುವ ಘಟಕ ಅಧ್ಯಕ್ಷ ಪವನ್ ಚಿಂಚೋಳ್ಳಿ, ನಗರ 54ನೇ ವಾರ್ಡ್ ಅಧ್ಯಕ್ಷ ಸಚೀನ ತಳವಾರ, ಕಿರರಾಜ್ ವಾಡೇಕರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.