ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಲು ಹೇಳಿಕೆ ಕೊಟ್ಟ ರಂಭಾಪುರಿ ಶ್ರೀಗಳ ಹೇಳಿಕೆ ಖಂಡನೀಯ: ಸಂಗಮೇಶ ಎನ್ ಜವಾದಿ.

ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಲು ಹೇಳಿಕೆ ಕೊಟ್ಟ ರಂಭಾಪುರಿ ಶ್ರೀಗಳ ಹೇಳಿಕೆ ಖಂಡನೀಯ: ಸಂಗಮೇಶ ಎನ್ ಜವಾದಿ.
ಬಸವಕಲ್ಯಾಣ : ಹನ್ನೆರಡನೆಯ ಶತಮಾನದಲ್ಲಿ ಪ್ರಸಿದ್ಧಿ ಪಡೆದಿದ್ದ ತ್ರಿಪುರಾಂತ ಕೆರೆಯ ಹೆಸರನ್ನು ಬದಲಾಯಿಸಿ ರೇಣುಕಾಚಾರ್ಯರ ಹೆಸರಿಡಬೇಕು ಎಂದು ರಂಭಾಪುರಿ ಶ್ರೀಗಳು ಹೇಳಿರುವ ಹೇಳಿಕೆ ಖಂಡನೀಯ ಎಂದು ಸಾಹಿತಿ ಸಂಗಮೇಶ ಎನ್ ಜವಾದಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹನ್ನೆರಡನೆಯ ಶತಮಾನದಲ್ಲಿ ತನ್ನದೇ ಆದ ವೈಚಾರಿಕ ಹಿನ್ನೆಲೆ ಹೊಂದಿದ್ದ ತ್ರಿಪುರಾಂತ ಕೆರೆಯ ಹೆಸರು ಬದಲಾವಣೆ ಮಾಡಿ ರೇಣುಕಾಚಾರ್ಯರ ಹೆಸರಿಡಬೇಕು ಎಂದು ರಂಭಾಪುರಿ ಶ್ರೀಗಳು ಹೇಳಿರುವುದು ತೀವ್ರವಾಗಿ ವಿರೋಧಿಸುತ್ತೇವೆ. ಅನೇಕ ಶರಣರ ವಚನಗಳಲ್ಲಿ ಉಲ್ಲೇಖಗೊಂಡ ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಿದ್ದರೆ ಶರಣರ ಇತಿಹಾಸಕ್ಕೂ ಹಾಗೂ ಬಸವಕಲ್ಯಾಣ ನಗರಕ್ಕೂ ಅಪಚಾರ ಬಗೆದಂತೆ ಆಗುತ್ತದೆ, ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸಬಾರದು.
ಒಂದು ವೇಳೆ ಬದಲಾವಣೆಗೆ ಕೈ ಹಾಕಿದರೆ, ಸಂಬಂಧಪಟ್ಟವರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಗಮೇಶ ಎನ್ ಜವಾದಿಎಚ್ಚರಿಕೆ ನೀಡಿದರು.