ಕನ್ನಡ ವಿಭಾಗಗಳ ತಿಳುವಳಿಕೆ ಪತ್ರಕ್ಕೆ ಸಹಿ

ಕನ್ನಡ ವಿಭಾಗಗಳ ತಿಳುವಳಿಕೆ ಪತ್ರಕ್ಕೆ ಸಹಿ
ಕಲಬುರಗಿ: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತದ ಕನ್ನಡ ವಿಭಾಗಗಳ ಮಧ್ಯೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಎರಡು ಪ್ರತಿಷ್ಠಿತ ಸಂಸ್ಥೆಗಳ ಮಧ್ಯೆ ತಿಳುವಳಿಕೆ ಒಡಂಬಡಿಕೆ ಈ ಎರಡು ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಸವಿತಾ ತಿವಾರಿ ಅವರು ಹೇಳಿದರು.
ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಕೂಲಕ್ಕಾಗಿ ಈ ರೀತಿಯ ಒಡಂಬಡಿಕೆ ಮಾಡಿಕೊಳುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯ ಎಂದು ನುಡಿದರು.
ತಿಳುವಳಿಕೆ ಪತ್ರ ಸಹಿ ಸಂದರ್ಭದಲ್ಲಿ ಸರಕಾರಿ ಮಹಾವಿದ್ಯಾಲಯ ಸ್ವಾಯತ್ತದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಶಾರದಾದೇವಿ ಜಾಧವ, ಡಾ. ನಾಗಪ್ಪ ಗೋಗಿ ಮತ್ತು ಪ್ರೊ. ಶ್ರೀದೇವಿ ರಾಠೋಡ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಕವಿತಾ ಅಶೋಕ, ದಾನಮ್ಮ ಕೋರವಾರ ಹಾಗೂ ಬಸಮ್ಮ ಬಿರಾದಾರ ಅವರು ಉಪಸ್ಥಿತರಿದ್ದರು.