ಸಂವಿಧಾನ ಪಾಲನೆಯಿಂದ ದೇಶದ ಸಾರ್ಥಕತೆ: ಗುತ್ತೇದಾರ

ಸಂವಿಧಾನ ಪಾಲನೆಯಿಂದ ದೇಶದ ಸಾರ್ಥಕತೆ: ಗುತ್ತೇದಾರ

ಸಂವಿಧಾನ ಪಾಲನೆಯಿಂದ ದೇಶದ ಸಾರ್ಥಕತೆ: ಗುತ್ತೇದಾರ 

ಆಳಂದ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಪಾಲನೆಯಿಂದ ದೇಶದ ಸಾರ್ಥಕತೆ ಅಡಗಿದೆ ಎಂದು ಮಾಜಿ ಶಾಸಕರೂ ಆದ ಹಿರಿಯ ಬಿಜೆಪಿ ಮುಖಂಡ ಸುಭಾಷ ಗುತ್ತೇದಾರ ಅವರು ಅಭಿಪ್ರಾಯಪಟ್ಟರು. 

ಪಟ್ಟಣದ ತಮ್ಮ ನಿವಾಸದ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.  

ಡಾ ಬಾಬಾಸಾಹೇಬ ಅಂಬೇಡ್ಕರ ರಚಿಸಿದ ಸಂವಿಧಾನ ವಿಶ್ವದಲ್ಲೇ ಭಾರತದ ಸಂವಿಧಾನ ಶ್ರೇಷ್ಟವಾಗಿದೆ ಎಂದು ಹೇಳಿದರು. ಈ ಸಂಮದರ್ಭದಲ್ಲಿ ಸರ್ವರು ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡುವ ಮೂಲಕ ಸಂವಿಧಾನದ ದಿನವನ್ನು ಆಚರಿಸಿದರು. 

ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಸುನಿಲ ಹಿರೋಳಿಕರ, ಸಂವಿದಾನ ಪೀಠಿಕೆ ಓದಿದರು. ತಾಲೂಕು ಎಸ್‌ಸಿ ಮೊರ್ಚಾ ಅಧ್ಯಕ್ಷ ರಾಜಕುಮಾರ ಗೋಳೆ, ಮಂಡಲ ಮಾಜಿ ಅಧ್ಯಕ್ಷ ಅನಂದರಾವ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಮುಖಂಡರಾದ ಶ್ರೀಶೈಲ ಖಜೂರಿ, ನಗರ ಅಧ್ಯಕ್ಷ ಬಸವರಾಜ ಹತ್ತರಕಿ, ತಾಪಂ ಮಾಜಿ ಸದಸ್ಯ ಬಸವರಾಜ ಸಾಣಕ, ಕಿಟ್ಟಿ ಸಾಲೇಗಾಂವ, ಸಂದೀಪ ನಾಯಕ, ಪ್ರಕಾಶ ಜೋಶಿ, ವಿಜಯಕುಮಾರ ಕೋಥಳಿಕರ, ಉಮೆಶ ಮಠಪತಿ ಸೇರಿದಂತೆತ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.