ಸ್ಟಾರ್ ಆಫ್ ಮೈಸೂರು ಸಂಪಾದಕ ಗಣಪತಿಯವರ ನಿಧನ

ಸ್ಟಾರ್ ಆಫ್ ಮೈಸೂರು ಸಂಪಾದಕ ಗಣಪತಿಯವರ ನಿಧನ

ಸ್ಟಾರ್ ಆಫ್ ಮೈಸೂರು ಸಂಪಾದಕ ಗಣಪತಿಯವರ ನಿಧನ: ಮಾಧ್ಯಮ  ಸಂತಾಪ

ಕಲ್ಯಾಣ ಕಹಳೆ ವಾರ್ತೆ

ಮೈಸೂರು: ಪ್ರಸಿದ್ಧ ದಿನಪತ್ರಿಕೆ *ಸ್ಟಾರ್ ಆಫ್ ಮೈಸೂರು* ಸ್ಥಾಪಕ ಸಂಪಾದಕರಾಗಿದ್ದ ಹಿರಿಯ ಪತ್ರಿಕೋದ್ಯಮಿ ಶ್ರೀ ಕೆ.ಬಿ. ಗಣಪತಿ (85) ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 50 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಗಣಪತಿ ಕೊಡಗಿನವರು ತಮ್ಮದೇ ಅಂಕಣದ ಮೂಲಕ ಅವರು ಸುದ್ದಿ ಮನೆಯಲ್ಲಿ ಕ್ರೀಯಾಶೀವಾಗಿದ್ದವರು

 ಅವರು ನಿಧನರಾಗಿರುವ ಸುದ್ದಿ ಮಾಧ್ಯಮ ವಲಯಕ್ಕೆ ಆಘಾತವನ್ನುಂಟುಮಾಡಿದೆ. ಅವರ ನಿಧನಕ್ಕೆ  ಕರ್ನಾಟಕ ರಾಜ್ಯ ಪತ್ರಕರ್ತರು, ಕರ್ನಾಟಕ ಕಾರ್ಯನಿರತ ಪತಕರ್ತರ ಸಂಘದ ಅಧ್ಯಕ್ಷ  ಶಿವಾನಂದ ತಗಡೂರು ಶೋಕವನ್ನು ವ್ಯಕ್ತಪಡಿಸಿದರು.

ಅವರು ಹಲವು ದಶಕಗಳ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ನಿಷ್ಠೆ, ನೈತಿಕತೆ ಮತ್ತು ಸಮಗ್ರತೆಗಾಗಿ ಪ್ರಸಿದ್ಧರಾಗಿದ್ದರು. ಸ್ಟಾರ್ ಆಫ್ ಮೈಸೂರು ಪತ್ರಿಕೆಯನ್ನು ಪ್ರಾಮಾಣಿಕ ಸುದ್ದಿಯ ನಿಲುಕಣೆಯಾಗಿ ಅವರು ರೂಪಿಸಿದ್ದನ್ನು ಮಾಧ್ಯಮ ಲೋಕ ಸದಾ ಸ್ಮರಿಸಲಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯು ನೀಡಿದ ಶೋಕಸಂದೇಶದಲ್ಲಿ, "ಶ್ರೀ ಗಣಪತಿ ಅವರು ಪತ್ರಿಕೋದ್ಯಮಕ್ಕೆ ನೀಡಿದ ಅಮೂಲ್ಯ ಕೊಡುಗೆ ಸದಾ ಅಕಾಡೆಮಿಯ ನೆನಪಿನಲ್ಲಿ ಉಳಿಯುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಹಾಗೂ ಬಂಧುಗಳಿಗೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇವೆ" ಎಂದು ತಿಳಿಸಿದೆ.