ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲದ ಸುಳ್ಳು ಆರೋಪ ಕಲಬುರ್ಗಿ ಜಿಲ್ಲೆಗೆ ರವಿಕುಮಾರ ಅವರ ಕೊಡುಗೆ ಏನಿದೆ: ಶರಣು ಡೋಣಗಾಂವ
ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲದ ಸುಳ್ಳು ಆರೋಪ
ಕಲಬುರ್ಗಿ ಜಿಲ್ಲೆಗೆ ರವಿಕುಮಾರ ಅವರ ಕೊಡುಗೆ ಏನಿದೆ: ಶರಣು ಡೋಣಗಾಂವ
ಚಿತ್ತಾಪೂರ: ಕಳೆದ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಿಜೆಪಿಯವರು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಳ್ಳು ಆರೋಪ ಮಾಡುವಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಪಂಚ ಗ್ಯಾರೆಂಟಿ ಸದಸ್ಯ ಶರಣು ಡೋಣಗಾಂವ ಆರೋಪಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಕಲಬುರಗಿ ಜಿಲ್ಲೆಗೆ ಬರುವ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಅವರು ಬಿಟ್ಟಿ ಪ್ರಚಾರಕ್ಕೆ ಮುಂದಾಗಿ ಮಾಧ್ಯಮದವರ ಮುಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸುಳ್ಳು ಆರೋಪ ಮಾಡುವುದೇ ಅವರು ಚಾಳಿಯಾಗಿಸಿಕೊಂಡಿದ್ದಾರೆ. ಬಿಟ್ಟಿ ಪ್ರಚಾರ ಬಿಟ್ಟು ಜನಪರ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸತ್ಯಕ್ಕೆ ದೂರವಾದ ಆರೋಪ ಮಾಡುವ ರವಿಕುಮಾರ ಜಿಲ್ಲೆಗೆ ಕೊಡುಗೆ ಏನಿದೆ ಎಂದು ಹೇಳಲ್ಲಿ ಆರೋಪ ಮಾಡುವುದು ಬಿಡಿ ಸತ್ಯದ ಕುರಿತು ಮಾತನಾಡಿ ಎಂದು ಅವರು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಸಂಚು ಮಾಡಿ ಸತ್ಯಕ್ಕೆ ದೂರವಾದ ಆರೋಪ ಮಾಡಿ ಹೆಸರು ಕೆಡಿಸುವ ದುಷ್ಟ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿಯವರು ಎಷ್ಟೆ ಆರೋಪ ಮಾಡಿದರೂ ಜನರಿಗೆ ಗೊತ್ತಿದೆ ಸತ್ಯ ಮತ್ತು ಸುಳ್ಳು ಏನೆಂಬುದು ಎಂದು ಅವರು ಹೇಳಿದ್ದಾರೆ.