ಆಳಂದ|ಮುಟ್ಟಿನ ನೈರ್ಮಲೆ ಆರೋಗ್ಯ ಅರಿವು ತಂದುಕೊಳ್ಳಿ: ಅಮೃತ ಬೆಳವಣಿಗೆ

ಆಳಂದ|ಮುಟ್ಟಿನ ನೈರ್ಮಲೆ ಆರೋಗ್ಯ ಅರಿವು ತಂದುಕೊಳ್ಳಿ: ಅಮೃತ ಬೆಳವಣಿಗೆ

ಆಳಂದ|ಮುಟ್ಟಿನ ನೈರ್ಮಲೆ ಆರೋಗ್ಯ ಅರಿವು ತಂದುಕೊಳ್ಳಿ: ಅಮೃತ ಬೆಳವಣಿಗೆ

ಕಲಬುರಗಿ: ಆಳಂದ ತಾಲ್ಲೂಕಿನ ನರೋಣಾ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ ನರೋಣಾ ಸಂಯುಕ್ತಾಶ್ರಯದಲ್ಲಿ "ಮುಟ್ಟಿನ ನೈರ್ಮಲೆ ಮತ್ತು ಶುಚಿ ವಿಲೇವಾರಿ" ಕುರಿತ ಕಾರ್ಯಾಗಾರವನ್ನು ನಡೆಯಿತು. 

ನರೋಣಾ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಮೃತ ಬೆಳವಣಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸುವುದು ಇಂದಿನ ಅಗತ್ಯವಿದೆ. ಶಾರೀರಿಕ ಮತ್ತು ಮಾನಸಿಕ ಸದೃಢತೆಗಾಗಿ ಪೌಷ್ಠಿಕ ಆಹಾರ ಸೇವನೆ, ಸ್ವಚ್ಛತೆ ಸಮಯ ಪಾಲನೆ ಒತ್ತು ನೀಡಿ ಜೀವನದ ಗುರಿ ಸಾಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಅನ್‌ಇನ್ಸಿಬಿಟೆಡ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಲಕ್ಷ್ಮಿ, ಅತಿಥಿಗಳಾಗಿ ಡಾ. ಭೀಮ್‌ರಾವ್ ಅರಿಕೇರಿ, ಬಸವರಾಜ್ ಜೋಗುರ್, ಶಿವಕುಮಾರ್ ಕರಿಹರಿ, ಡಾ. ಯಮನಪ್ಪ, ದೇವಾನಂದ ದೊಡ್ಡಮನಿ, ಕಾಶಿನಾಥ್ ಮುಖರ್ಜಿ ಮತ್ತು ಕುಮಾರಿ ಶ್ವೇತಾ, ನರೋಣಾ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಚಂದ್ರಕಾoತ ಕೋರೆ ಕಾರ್ಯಕ್ರಮ ಕುರಿತು ಮಾತನಾಡಿದರು. 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.