ಡಾ. ವಿಷ್ಣುವರ್ಧನರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ – ಅಭಿಮಾನಿಗಳಿಂದ ಸರಕಾರಕ್ಕೆ ಅಭಿನಂದನೆ

ಡಾ. ವಿಷ್ಣುವರ್ಧನರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ – ಅಭಿಮಾನಿಗಳಿಂದ ಸರಕಾರಕ್ಕೆ ಅಭಿನಂದನೆ
ಕಲಬುರಗಿ: ದ್ವಿಪಾತ್ರ, ತ್ರಿಪಾತ್ರ ಪಾತ್ರಗಳಲ್ಲಿ ನಟಿಸಿ, ಸಾಹಸಿಂಹ, ಕರುನಾಡು ಕರಣ, ಅಭಿನವ ಭಾರ್ಗವ, ದಾದಾ ಎಂಬ ಬಿರುದಿನಿಂದ ಜನಮನಗಳಲ್ಲಿ ಸ್ಥಾನ ಪಡೆದ ಕನ್ನಡದ ಮೇರು ನಟ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರವು “ಕರ್ನಾಟಕ ರತ್ನ” ಪ್ರಶಸ್ತಿ ಘೋಷಿಸಿದೆ. ಈ ಘೋಷಣೆಯು ಕನ್ನಡಾಭಿಮಾನಿಗಳಿಗೆ ಹರ್ಷ ತಂದಿದ್ದು, ಅಭಿಮಾನಿಗಳ ವಲಯದಲ್ಲಿ ಸಂಭ್ರಮ ಮೂಡಿಸಿದೆ.
ನಟ ವಿಷ್ಣುವರ್ಧನ ಅವರು ೨೨೫ಕ್ಕೂ ಹೆಚ್ಚು ಚಿತ್ರಗಳಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಿ ಭಾಷೆಗಳಲ್ಲಿ ಮಿಂಚಿದ್ದು, ೨೦ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ದ್ವಿಪಾತ್ರ ಹಾಗೂ ಎರಡು ಚಿತ್ರಗಳಲ್ಲಿ ತ್ರಿಪಾತ್ರ ಪಾತ್ರದಲ್ಲಿ ಅಭಿನಯಿಸಿ ಸಿನಿರಂಗದಲ್ಲಿ ಅಪ್ರತಿಮ ಹೆಸರು ಗಳಿಸಿದ್ದರು.
ವಿಷ್ಣುವರ್ಧನ ಅವರ ೭೫ನೇ ಜನ್ಮದಿನದ ಅಂಗವಾಗಿ ವಿದ್ಯಾನಗರದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಶಶಿಧರ ಪ್ಯಾಟಿ, ಅಮಿತ ಸಿಕೇದ, ಸಂತೋಷ ನಿಂಬೂರ, ಶರಣಯ್ಯ ಸ್ವಾಮಿ ಮಠಪತಿ, ರೇಖಾ ಅಂಡಗಿ, ಪ್ರಿಯಾ ನಾಗಶೆಟ್ಟಿ, ಅಶ್ವಿನಿ ಸಿಕೇದ, ರಶ್ಮಿ ನಿಂಬೂರ ಹಾಗೂ ತರುಣ ಸಂಘದ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.