ಗಂಗಮ್ಮ ಗುರುಬಸಪ್ಪ ಯಾದಗಿರ ನಿಧನ

ಗಂಗಮ್ಮ ಗುರುಬಸಪ್ಪ ಯಾದಗಿರ ನಿಧನ
ನಿಧನ ವಾರ್ತೆ :..
ಶಹಾಬಾದ : - ನಗರದ ಜೆ.ಪಿ (ಎಚಎಂಪಿ) ಕಾಲೋನಿಯ ಗಂಗಮ್ಮ ಗುರುಬಸಪ್ಪ ಯಾದಗಿರ (62) ( ಯುವ ಸಾಹಿತಿ ಹಾಗೂ ಉಪನ್ಯಾಸಕ ಮರಲಿಂಗ ಯಾದಗಿರ ರವರ ತಾಯಿ) ಶುಕ್ರವಾರ ಸೆ. 19 ರಂದು ಬೆಳಗ್ಗೆ 10 ಗಂಟೆಗೆ ಅನಾರೋಗ್ಯ ಹಾಗೂ ವಯೋ ಸಹಜದಿಂದ ನಿಧಾನರಾಗಿದ್ದಾರೆ.
ಅವರಿಗೆ 3 ಜನ ಸುಪುತ್ರರು ಹಾಗೂ ಓರ್ವ ಸುಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದರು.
ಅವರ ಅಂತ್ಯಕ್ರಿಯೆ ಶನಿವಾರ ಸೆ. 20 ರಂದು ಬೆಳಗ್ಗೆ 10 ಗಂಟೆಗೆ ಶಹಾಬಾದ ನಗರದ ಮಡ್ಡಿ ನಂ 2 ರ ಅಜನಿ ಹಳ್ಳದ ಹತ್ತಿರ ಇರುವ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ನೇರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶೋಕ ವ್ಯಕ್ತ :..ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪೀರಮ್ಮ ಪಗಲಾಪುರ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಮಾದಿಗ ಸಮಾಜದ ಅಧ್ಯಕ್ಷ ವಿಕ್ರಮ ಮೂಲಿಮನಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ಲೋಹಿತ ಕಟ್ಟಿ, ನಾಗರಾಜ್ ದಂಡಾವತಿ ಅನಿಲ ಮೈನಾಳಕರ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ