ಸಂವಿಧಾನ ದಿನ ಡಾ. ಅಂಬೇಡ್ಕರ್ ಭಾವಚಿತ್ರವಿಡದೆ ಅವಮಾನ ಖಂಡಿಸಿ ದೂರು
ಸಂವಿಧಾನ ದಿನ ಡಾ. ಅಂಬೇಡ್ಕರ್ ಭಾವಚಿತ್ರವಿಡದೆ ಅವಮಾನ ಖಂಡಿಸಿ ದೂರು
ಶಹಾಬಾದ : - ತಾಲೂಕಿನ ಹೊನ್ನಗುಂಟಾ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನದಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಪೂಜೆ ಸಲ್ಲಿಸದೆ, ಸಂವಿಧಾನದ ಪೀಠಿಕೆ ಭೋದಿಸಿದ್ದಾರೆ ಎಂದು ದವಿಒ ತಾಲ್ಲೂಕ ಸಂಚಾಲಕರಾದ ಪಿ. ಎಸ ಮೇತ್ರಿ ಆರೋಪಿಸಿ ದೂರು ಸಲ್ಲಿಸಿದ್ದಾರೆ.
ಹೊನ್ನಗುಂಟಾ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ನವಂಬರ್ 26 ಸಂವಿಧಾನ ಸಮರ್ಪಣ ದಿನದಂದು ಶಾಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೆ, ಗೌರವ ನಮನ ಸಲ್ಲಿಸದೆ ಅವರಿಗೆ ಅವಮಾನ ಮಾಡಿರುತ್ತಾರೆ ಎಂದು ದೂರಿದರು.
ಡಾ. ಬಾಬಾಸಾಹೇಬರ ಭಾವಚಿತ್ರ ವಿಡದೆ ವಿಧ್ಯಾರ್ಥಿಗಳ ಸಮ್ಮುಖದಲ್ಲಿ ತಾರತಮ್ಯ ಮಾಡಿ, ಅವಮಾನಿಸಲಾಗಿದೆ, ಅದಕ್ಕಾಗಿ ಕೂಡಲೆ ಸರಕಾರದ ಆದೇಶದ ಪ್ರಕಾರ ಶಾಲೆಯ ಮುಖ್ಯಗುರುಗಳನ್ನು ಹಾಗೂ ಸಹ ಶಿಕ್ಷಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಅವರನ್ನು ಸೇವೆ ಯಿಂದ ವಜಾಗೊಳಿಸಬೇಕು, ವಿಳಂಬವಾದರೆ ದವಿಒ ದ ಸಂಘಟನೆಯು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುತ್ತದೆ ಎಂದು
ಫೋಟೋ ಸಮೇತ ಚಿತ್ತಾಪುರ ತಾಲೂಕ ಕ್ಷೇತ್ರ ದೈಹಿಕ ಶಿಕ್ಷಣ ಪರಿ ವೀಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಮತ್ತು ಶಿಕ್ಷಣ ಸಂಯೋಜಕರಾದ ಶರಣಪ್ಪ ಅಪ್ಪುಗೇರೆ ರವರಿಗೆ ಶಹಾಬಾದ ತಾಲೂಕ ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾದ ಪಿ.ಎಸ್ ಮೇತ್ರಿ ಯವರು ಘಟನೆ ಖಂಡಿಸಿ, ದೂರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕೋಲಿ ಸಮಾಜದ ಮಾಜಿ ಅಧ್ಯಕ್ಷ ದೇವೇಂದ್ರ ಕಾರೋಳಿ, ರಾಜು ಆಡಿನ ಮಲ್ಲಿಕಾರ್ಜುನ ಕಟ್ಟಿಮನಿ, ಶಿವು ಬುರ್ಲಿ, ಮಹಾದೇವ ಮೇತ್ರಿ ಸೇರಿದಂತೆ ಅನೇಕರು ಇದ್ದರು.