ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ಸ್ವಾತಂತ್ರ‍್ಯೋತ್ಸವ
ಜೈ ಭಾರತ ಮಾತಾ ಸೇವಾ ಸಮಿತಿ ( ರಿ ) ನವದೆಹಲಿ ವತಿಯಿಂದ ಸ್ವಾತಂತ್ರ‍್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ
ಕಲಬುರಗಿ: ಆಳಂದ ತಾಲೂಕಿನ ಲಾಡ ಚಿಂಚೊಳಿಯ ಭಾರತ ಮಾತಾ ಮಂದಿರದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ( ರಿ ) ನವದೆಹಲಿ ವತಿಯಿಂದ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ‍್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ ಉತ್ಸವದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲಾಗಿರುವ ಸ್ವಾತಂತ್ರ‍್ಯ ಹೋರಾಟಗಾರ ಭಗತಸಿಂಗ, ಸಂವಿಧಾನ ಶಿಲ್ಪಿ ಡಾ.ಬಿ ಆರ್. ಅಂಬೇಡ್ಕರ್ ಹಾಗೂ ಕ್ರಾಂತಿ ವಿರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಹಾಗೂ ಆಳಂದ ತಾಲೂಕಿನ ಶಾಸಕರಾದ ಬಿ.ಆರ್.ಪಾಟಿಲ ಅವರು ದೇವಸ್ಥಾನದ ಆವರಣದಲ್ಲಿ ಕೆಎಂಎಫ್‌ನ ಅಧ್ಯಕ್ಷರಾದ ಆರ್.ಕೆ.ಪಾಟೀಲ ಅವರು ನಿರ್ಮಿಸಿರುವ 100 ಅಡಿ ಎತ್ತರದ ಧ್ವಜ ಸ್ಥಂಬದ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದರು, ಈ ಸಂದರ್ಭದಲ್ಲಿ ಪರಮ ಪೂಜ್ಯರು ಮಾನ್ಯ ಶಾಸಕರಿಗೆ ಹೂ ಮಾಲೆ ಹಾಕಿ ಸತ್ಕರಿಸಿದರು, ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಹೆಚ ಎಮ ಪಟೆಲ, ಬಿ.ಡಿ.ಹಂಗರಗಿ, ಮುಖಂಡರಾದ ಶಾಹಾಜಿರಾವ ಪಾಟಿಲ, ಗುರುಸಿದ್ದಪ್ಪಾ ಬೆನಕನಳ್ಳಿ, ಸಂದೇಶ ಪವಾರ, ಸಿದ್ದರಾಮ ದೇಶಮುಖ, ಮಲ್ಲಿಕಾರ್ಜುನ ಸಾರವಾಡ, ಮಂಜುನಾಥ ಬಿರಾದಾರ, ರವಿಂದ್ರ ಜಮಾದಾರ, ಪಿರದೊಷ ಅನ್ಸಾರಿ, ಪ್ರಕಾಶ ಮೂಲ ಭಾರತಿ, ನಾಮದೆವ ಬಬಲಾದ, ದಿಲಿಪ ಕ್ಷಿರಸಾಗರ, ದಯಾನಂದ ಪಾಟಿಲ, ಸಂಜಯ ನಾಯಕ, ಶ್ರೀಶೈಲ ಪಾಟಿಲ ಚಲಗೆರಿ, ಶಿವರಾಜ ವಾರದ, ದಯಾನಂದ ಇದ್ದರು.