ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನ: ವಿದ್ಯಾನಗರ ಯುವಕರಿಂದ ಕೃತಜ್ಞತಾ ನಮನ

ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನ: ವಿದ್ಯಾನಗರ ಯುವಕರಿಂದ ಕೃತಜ್ಞತಾ ನಮನ

ದೇಶದ ಏಳಿಗೆಗೆ ಶ್ರಮಜೀವಿ ಮೋದಿ: ವಿದ್ಯಾನಗರ ಯುವಕರಿಂದ ಹುಟ್ಟುಹಬ್ಬ ಸಂಭ್ರಮ

ಕಲಬುರಗಿ: ನಗರದ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಇಂದು (ಸೆಪ್ಟೆಂಬರ್ 17) ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ 75ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿ, “ಮೋದಿಜಿ ದೇಶದ ಏಕತೆ ಮತ್ತು ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದು, ಕುಟುಂಬ ವ್ಯಾಮೋಹ ಬಿಟ್ಟು ರಾಷ್ಟ್ರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. 75ರ ಹರೆಯದಲ್ಲೂ ಯೋಗ, ವ್ಯಾಯಾಮ, ಕಡಿಮೆ ನಿದ್ರೆ ಮತ್ತು 24 ಗಂಟೆ ದೇಶ ಸೇವೆಯ ಹಾದಿಯಲ್ಲಿ ಸಾಗುತ್ತಿರುವುದು ಯುವಕರಿಗೆ ಮಾದರಿಯಾಗುವಂತಾಗಿದೆ. ಅನೇಕ ಯೋಜನೆಗಳ ಮೂಲಕ ಯುವ ಸಬಲೀಕರಣಕ್ಕೆ ಮಾರ್ಗದರ್ಶನ ನೀಡಿದ್ದಾರೆ,” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷರೊಂದಿಗೆ ಸಂಘದ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಶಶಿಧರ ಪ್ಯಾಟಿ, ಅಮಿತ್ ಸಿಕೇದ, ಸಂತೋಷ ನಿಂಬೂರ, ಶರಣಯ್ಯ ಸ್ವಾಮಿ ಮಠಪತಿ, ರೇಖಾ ಅಂಡಗಿ, ಪ್ರೀಯಾ ನಾಗಶೆಟ್ಟಿ, ಅಶ್ವಿನಿ ಸಿಕೇದ ಹಾಗೂ ರಶ್ಮೀ ನಿಂಬೂರ ಉಪಸ್ಥಿತರಿದ್ದರು.