ಗೋರಸೇನಾ" ರಾಷ್ಟ್ರೀಯ ಸಂಘಟನೆ ಯಿಂದ ಒಳ ಮೀಸಲಾತಿ' ಕುರಿತು ಸಂಸದರಿಗೆ, ಸಚಿವರಿಗೆ, ಶಾಸಕರಿಗೆ, ಮನವಿ
ಗೋರಸೇನಾ" ರಾಷ್ಟ್ರೀಯ ಸಂಘಟನೆ ಯಿಂದ ಒಳ ಮೀಸಲಾತಿ' ಕುರಿತು ಸಂಸದರಿಗೆ, ಸಚಿವರಿಗೆ, ಶಾಸಕರಿಗೆ, ಮನವಿ
ಕಲಬುರಗಿ: ದಿನಾಂಕ.೨೮-೧೦-೨೦೨೪ ರಂದು ರಾಜ್ಯ ಸರ್ಕಾರವು 'ಒಳ ಮೀಸಲಾತಿ' ಕುರಿತು 'ಸಚಿವ ಸಂಪುಟ ಸಭೆಯಲ್ಲಿ' ನಿಧ೯ರಿಸಬೇಕೆಂದು "ಗೋರಸೇನಾ" ರಾಷ್ಟ್ರೀಯ ಸಂಘಟನೆ ವತಿಯಿಂದ ಸಂಸದರು, ಸಚಿವರು, ಶಾಸಕರು, ಎಂಎಲ್‌ಸಿ ಅವರಿಗೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದ ಲಂಬಾಣಿ ಬಂಜಾರಾ ಸಮುದಾಯಕ್ಕೆ ಮಾರಕವಾಗಿ ಕಾಡುತ್ತಿರುವ ಒಳಮೀಸಲಾತಿ ಮತ್ತು ವರ್ಗೀಕರಣ ವನ್ನ "ಗೋರಸೇನಾ" ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ವಿರೋಧಿಸುತ್ತದೆ.
ಈ ವಿಚಾರವಾಗಿ ರಾಜ್ಯ ಸರ್ಕಾರವು 'ಒಳ ಮೀಸಲಾತಿ' ಕುರಿತು ದಿ.೨೮-೧೦-೨೦೨೪ ರಂದು 'ಸಚಿವ ಸಂಪುಟ ಸಭೆಯಲ್ಲಿ' ನಿರ್ಧರಿಸಲು ತಯಾರಿ ನಡೆಸಿರುವುದನ್ನು ಸಹ ಖಂಡಿಸುತ್ತದೆ.
ರಾಜ್ಯದ ಲಂಬಾಣಿ, ಕೋರಚ, ಕೋರಮ ಮತ್ತು ಭೋವಿ ಸಮುದಾಯಗಳನ್ನು ಒಂದು ಗುಂಪಿನಲ್ಲಿ ಸೇರಿಸಿ, ಈ ಸಮುದಾಯಗಳನ್ನ ಸಮಾಜದ ಮುಖ್ಯವಾಹಿನಿಯಿಂದ ಹಿಂದ್ದಿಕ್ಕ ಬೇಕೆಂಬ ಹುನ್ನಾರವನ್ನ ಎಂದಿಗೂ ಸಹಿಸಲು ಸಾಧ್ಯವಿಲ್ಲ.
'ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್' ರವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು, ಅಸಂವಿಧಾನಾತ್ಮಕ ಮತ್ತು ಅವೈಜ್ಞಾನಿಕ ವಾಗಿ ವರ್ಗೀಕರಣ ಸರ್ಕಾರ ಮಾಡಕೂಡದು.
ಮೀಸಲಾತಿ ವರ್ಗೀಕರಣ, ರಾಜ್ಯದಲ್ಲಿ ಇರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮಾಡಕೂಡದು.
ಪರಿಶಿಷ್ಟರ ಜಾತಿಪಟ್ಟಿ ಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿ, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೆ ಒಳಮೀಸಲು ಹಂಚಿಕೆ ನಿರ್ಧಾರ ಸಮಂಜಸವಾದ ನಡೆಯಲ್ಲ.
ಕರ್ನಾಟಕ ರಾಜ್ಯದ ಎಲ್ಲ ಲಂಬಾಣಿ, ಕೋರಚ, ಕೋರಮ ಮತ್ತು ಭೋವಿ ಸಮುದಾಯಗಳ ಪರವಾಗಿ, 'ಗೋರಸೇನಾ' ಸಂಘಟನೆ ಮತ್ತು ಸ್ವಾಭಿಮಾನಿ ಗೋರ ಬಂಜಾರಾ ಜನಾಂಗ ರಾಜ್ಯ ಸರ್ಕಾರವು 'ಒಳ ಮೀಸಲಾತಿ' ಕುರಿತು ದಿ.೨೮-೧೦-೨೦೨೪ ರಂದು 'ಸಚಿವ ಸಂಪುಟ ಸಭೆಯಲ್ಲಿ' ನಿರ್ಧರಿಸಲು ತಯಾರಿ ನಡೆಸಿರುವುದನ್ನು ಸಹ ಖಂಡಿಸುತ್ತದೆ.
'ರಾಜ್ಯ ಸರ್ಕಾರವು' ಸರಿಯಾದ ಅಧ್ಯಯನ ಇಲ್ಲದೆ ಪರಿಶಿಷ್ಟರ ಮೀಸಲಾತಿಯನ್ನು ವರ್ಗೀಕರಿಸಬಾರದೆಂದು ಒತ್ತಾಯಿಸಿ "ಗೋರಸೇನಾ" ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ, ದಿನಾಂಕ ೦೨ ಅಕ್ಟೋಬರ್ ೨೦೨೪ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೆರವೇರಿದ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸುಮಾರು ೫೦೦ ಕ್ಕೂ ಹೆಚ್ಚು ಸತ್ಯಾಗ್ರಹಿಗಳನ್ನ ಸಾಕ್ಷಿಯಾಗಿಸಿ, ಅವರೆಲ್ಲರ ಸಮಕ್ಷಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುತ್ತದೆ.
'ಒಳ ಮೀಸಲಾತಿ' ಕುರಿತು ದಿ.೨೮-೧೦-೨೦೨೪ ರಂದು 'ಸಚಿವ ಸಂಪುಟ ಸಭೆಯನ್ನು' ವಿರೋಧಿಸಿ, ರಾಜ್ಯದ ಎಲ್ಲ ಲಂಬಾಣಿ, ಕೋರಚ, ಕೋರಮ ಮತ್ತು ಭೋವಿ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಕೂಡದು ಎಂದು "ಗೋರಸೇನಾ" ಕರ್ನಾಟಕ ರಾಜ್ಯ ಘಟಕ ಈ ಎಚ್ಚರಿಕೆ ಮನವಿ ಸಲ್ಲಿಸುತ್ತಿದೆ. ಬಿಜೆಪಿ ಹಠಾವೋ ತಾಂಡಾ ಬಚಾವೋ ಎಂಬ ಘೋಷಣೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಠಾವೋ ಎಂಬ ಘೋಷಣೆಗೆ ಬದಲಾಗದಂತೆ ನಿಗಾವಹಿಸಲು ಎಚ್ಚರಿಸುತ್ತಿದ್ದೆವೆ. ಕಲ್ಬುರ್ಗಿ ಜಿಲ್ಲಾ ಘಟಕದ ತಾಲೂಕು ಘಟಕದ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳೊಂದಿಗೆ ಸಂಸದರು, ಸಚಿವರು ಹಾಗೂ ಎಲ್ಲಾ ಶಾಸಕರುಗಳಿಗೆ ಮತ್ತು ಸಂಸದರಿಗೆ ಮನವಿ ಪತ್ರವನ್ನು ಸಲ್ಲಿಸುವುದರ ಮೂಲಕ ಎಚ್ಚರಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ, ಗೋರ ಸೇನಾ ರಾಜ್ಯ ಉಪಾಧ್ಯಕ್ಷ ರವಿ ಕಾರಭಾರಿ, ರಾಜ್ಯ ಕಾರ್ಯದರ್ಶಿ ಶ್ರೀಧರ ಚವ್ಹಾಣ, ರಾಜ್ಯ ಮಾಧ್ಯಮ ವಕ್ತಾರ ನೇಹರು ಜಾಟೋತ್, ಜಿಲ್ಲಾ ಉಪಾಧ್ಯಕ್ಷ ಯಮರಾಜ ರಾಠೋಡ್, ಕಲಬುರ್ಗಿ ನಗರ ಅಧ್ಯಕ್ಷ ವಿನೋದ್ ರಾಠೋಡ್, ಚೀತ್ತಾಪೂರ ತಾಲ್ಲೂಕು ಅಧ್ಯಕ್ಷ ಮನೋಜ ರಾಠೋಡ್, ಚಿಂಚೋಳಿ ತಾಲೂಕಿನ ಅಧ್ಯಕ್ಷ ಸಿಕಿಂದರ, ಸೇಡಂ ತಾಲ್ಲೂಕಿನ ಅಧ್ಯಕ್ಷ ತುಕಾರಾಮ ಸಭಾವಟ ಸೇರಿದಂತೆ ಇತರರು ಇದ್ದರು.