ಮನೆ-ಮನೆ ವಚನ ಜ್ಯೋತಿ: ಸಾವಿರ ವಾರ ಪೂರೈಸಿದ ಶಹಾಬಾದ ವಚನೋತ್ಸವ

ಮನೆ-ಮನೆ ವಚನ ಜ್ಯೋತಿ: ಸಾವಿರ ವಾರ ಪೂರೈಸಿದ ಶಹಾಬಾದ ವಚನೋತ್ಸವ

ಮನೆ-ಮನೆ ವಚನ ಜ್ಯೋತಿ: ಸಾವಿರ ವಾರ ಪೂರೈಸಿದ ಶಹಾಬಾದ ವಚನೋತ್ಸವ

ಶಹಾಬಾದ: ಸಾವಿರ ವಾರದ ವಚನೋತ್ಸವ ಸಂಭ್ರಮ ಹಳೆ ಶಹಾಬಾದ ವಚನೋತ್ಸವ ಸಮಿತಿಯು ಪ್ರತಿ ರವಿವಾರ ಮನೆ-ಮನೆಯಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದ ವಚನೋತ್ಸವವು ಇದೇ ಸೆಪ್ಟೆಂಬರ್ 14, 2025 ರಂದು ತನ್ನ 1000ನೇ ವಾರವನ್ನು ಪೂರೈಸಿತು. ಈ ಸಂಭ್ರಮದ ಕಾರ್ಯಕ್ರಮವನ್ನು ಶಹಾಬಾದ ತಾಲೂಕಿನ ಹಡಪದ ಅಪ್ಪಣ್ಣ ಪೀಠದ ಶ್ರೀ ರಾಜಶಿವಯೋಗಿಗಳು ಸಾನ್ನಿಧ್ಯ ವಹಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ತುಪ್ಪದ ಪರಿವಾರದವರು ಬಸವ ಪ್ರಾರ್ಥನೆ ಸಲ್ಲಿಸಿದರು. ನಂತರ ಓಂಕಾರ ನಾದವನ್ನು ಬಸವರಾಜ ಶಹಾಪೂರ ರವರು ನೆರವೇರಿಸಿದರು. ಶರಣಗೌಡ ಪಾಟೀಲ ರವರು ಸಮಿತಿಯ ಹಾದಿ, ಸಾಧನೆ ಮತ್ತು ಉದ್ದೇಶಗಳನ್ನು ವಿವರಿಸಿದರು.

ಚಿತ್ತಾಪೂರ ತಾಲೂಕಿನ ಹಡಪದ ಸಮಾಜದ ಮಾಜಿ ಅಧ್ಯಕ್ಷ ಭೀಮರಾವ ಹಡಪದ ಮಾತನಾಡಿ, ಇಂದಿನ ಯುವಕರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದ್ದು, ಮೊಬೈಲ್ ಸಂಸ್ಕೃತಿಗೆ ಆಕರ್ಷಿತರಾಗಿದ್ದಾರೆ. ಆದರೂ ವಚನ ಸಾಹಿತ್ಯವು ಜೀವನಕ್ಕೆ ಮೌಲ್ಯ ತುಂಬುವುದರಿಂದ ಅದನ್ನು ಓದಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಯುವ ಸಾಹಿತಿ ಮರಲಿಂಗ ಪೂಜಾರಿ ಮಾತನಾಡಿ, 12ನೇ ಶತಮಾನದ ಬಸವರಾದಿ ಶರಣರ ವಚನ ಸಾಹಿತ್ಯವು ಕನ್ನಡಕ್ಕೆ ಹಾಗೂ ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಎಂದರು.

ಸಮಿತಿಯ ಸಂಚಾಲಕ ಗಿರಿಮಲ್ಲಪ್ಪ ವಳಸಂಗ ಅವರು 1000ನೇ ವಾರದ ವಚನವಾಗಿರುವ “ಗಂಡ ಭೇರುಂಡನೆ ಪಕ್ಷಿಗೆ ತಲೆ ಎರಡು, ದೇಹವೊಂದು” ಎಂಬ ಚನ್ನಬಸವಣ್ಣನವರ ವಚನವನ್ನು ವಿಶ್ಲೇಷಿಸಿದರು.

ಈ ಸಂದರ್ಭ ಮಕ್ಕಳು, ಯುವಕರು ಹಾಗೂ ಶರಣ ಶರಣೆಯರಿಂದ ವಚನ ಪಠಣ ಮತ್ತು ವಚನಗಾನ ನಡೆಯಿತು. ನಂತರ ರಾಜಶಿವಯೋಗಿ ಸ್ವಾಮಿಗಳ ಆಶೀರ್ವಚನದೊಂದಿಗೆ, ಬಸವ ಮಂಗಳ ಹಾಡಿ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಶರಣರಾದ ದೇವೇಂದ್ರಪ್ಪ ರಾಮನ್, ಸುಭಾಶ ಡೆಂಗಿ, ಬಸವರಾಜ ಕುಂಬಾರ, ಸುಭಾಶ ತುಪ್ಪದ, ಶಿವರಾಜ ಹಡಪದ, ಬಸವ ಸಮಿತಿ ಮಹಾನಂದಿ ಪಾರಾ, ಬಸವರಾಜ ಪಾಟೀಲ್, ಶರಣಪ್ಪ ಕೊಡದೂರ, ಶರಣಪ್ಪ ಸೂರಾ, ರಮೇಶ ಜೋಗನಕರ್, ಅಣವೀರ ದ್ಯಾಮ, ಭೀಮಾಶಂಕರ ಹಡಪದ, ರಾಜಶೇಖರ ಹಡಪದ, ಸಿದ್ದು ಬೆಳಮಗಿ, ಸಂತೋಷ ಪಾಟೀಲ, ಪ್ರಕಾಶ ವಳಸಂಗ, ಮಹಾಂತಗೌಡ, ಅಣ್ಣರಾಯ ಹುಗಿ, ಸಂಜು ಪಾರಾ, ಸುಧೀರ ಪಾಟೀಲ್, ದೂಳಪ್ಪ ಹಡಪದ, ಅರುಣ ಜಾಯಿ ಹಾಗೂ ಅನೇಕ ಶರಣ ಶರಣೆಯರು ಭಾಗವಹಿಸಿದರು.

ಶರಣೆಯರಾದ ವಿಜಯಲಕ್ಷ್ಮಿ ರಾಮನ್, ಧಾನೇಶ್ವರಿ ವಳಸಂಗ, ಗುರುಬಾಯಿ ತುಪ್ಪದ, ಲಕ್ಷ್ಮಿ ತುಪ್ಪದ, ಪದ್ಮಾವತಿ ತುಪ್ಪದ, ಭವಾನಿ ಮಾಡಿಯಾಳ, ಶಾರದಾ ಪಾಟೀಲ್, ಜಯಶ್ರೀ ಪಾಟೀಲ್, ಸರಸ್ವತಿ ತುಪ್ಪದ, ವಿಜಯಲಕ್ಷ್ಮಿ ವೀರಶೆಟ್ಟಿ, ವೀರಮ್ಮಾ ದ್ಯಾಮ, ಕವಿತಾ ಜಂಬಿಗಿ, ಈರಮ್ಮಾ ಸೂರಾ ಮುಂತಾದವರು ಸಹ ಭಾಗಿಯಾಗಿದ್ದರು.

ಪ್ರಾರ್ಥನಾ ಗೀತೆ– ಶ್ರೀ ನಾಗೇಶ ತುಪ್ಪದ,ಸ್ವಾಗತ ನುಡಿ– ಶ್ರೀ ವಿಶ್ವನಾಥ ಹಡಪದ,ವಂದನಾರ್ಪಣೆ– ಶ್ರೀ ಕುಪೇಂದ್ರ ತುಪ್ಪದ