ಸದೃಢ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯ ಪ್ರೊ.ದಯಾನಂದ ಅಗಸರ್.

ಸದೃಢ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯ ಪ್ರೊ.ದಯಾನಂದ ಅಗಸರ್.

ಸದೃಢ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯ ಪ್ರೊ.ದಯಾನಂದ ಅಗಸರ್.

ಕಲಬುರಗಿ ಸೆ 16 : ನಾವು ಸದೃಢ ಆರೋಗ್ಯ ವನ್ನು ಹೊಂದಬೇಕಾದರೆ ಪೌಷ್ಠಿಕ ಆಹಾರ ಅಗತ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊದಯಾನಂದ ಅಗಸರ್ ಅವರು ಹೇಳಿದರು ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಿ.ಎನ್.ಡಿ.ವಿಭಾಗದ ವತಿಯಿಂದ ರಾಷ್ರ್ಟೀಯ ಪೋಷಣಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ " ದೇಹದ ದ್ರವ್ಯರಾಶಿ ಸೂಚ್ಯಂಕ ( Body mass Index) , ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .ಮುಂದುವರೆದು ಮಾತನಾಡಿದ ಅವರು ಇಂದಿನ ಒತ್ತಡದ ಬದುಕಿನಲ್ಲಿ ನಾವುಗಳು ನಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸುವುದು ಬಹಳ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳು ಪೌಷ್ಠಿಕ ಆಹಾರ ಸೇವಿಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಚತೆಯನ್ನು ವಹಿಸಿಕೊಂಡು ಮಾತನಾಡಿದ ಹೈದ್ರಾಬಾದ್ ಕರ್ನಾಟಕ ಶಿಕ್ಚಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಸಿ.ಸಿ‌. ಪಾಟೀಲ ಸರ್ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಆಹಾರದ ಮಹತ್ವ ಕುರಿತು ಅರೀವು ಮೂಡಿಸುತ್ತಿರುವುದು ನಿಜಕ್ಕೂ ಈ ವಿಭಾಗದವರ ಶ್ಲಾಘನೀಯ ಕೆಲಸ ಎಂದು ಹೇಳಿ ಇದರ ಬಗ್ಗೆ ಸಾಮಾನ್ಯ ಜನರಿಗೂ ತಿಳುವಳಿಕೆ ಮೂಡಿಸುವಂತೆ ಕರೆಕೊಟ್ಟರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿದ್ದಭಾರತಿ ವಿದ್ಯಾಮಂದಿರದ ಕಾರ್ಯದರ್ಶಿಗಳಾದ ಕಲ್ಯಾಣರಾವ್ ಬುಜುರ್ಕೆ,ನಿರ್ದೇಶಕರಾದ ಸುಶೀಲಕುಮಾರ ಮಾಮಡೆ,ಸಂಯೋಜಕರಾದ ಶ್ರೀಮತಿ.ಅರುಣಾ ಹಳ್ಳಿಖೇಡ ಉಪಸ್ತಿತರಿದ್ದರು.

ವಿಭಾಗದ ಮುಖ್ಯಸ್ತರಾದ ಶ್ರೀಮತಿ ರೇಖಾ ಪಾಟೀಲ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶ ಗಂವ್ಹಾರ ಗಣ್ಯರನ್ನು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಅಂತಿಮ ವರ್ಷದ ವಿದ್ಯಾರ್ಥಿನಿ ಕುಮಾರಿ ರಂಶಾ ವಂದಿಸಿದರು.ಕಾರ್ಯಕ್ರಮದಲ್ಲಿ ವಿಭಾಗದ ಉಪನ್ತ್ಯಾಸಕಿ ವೈಷ್ಣವಿ ತಿವಾರಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರೇಮಚಂದ್ ಚವ್ಹಾಣ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಎಂದು ಕಾಲೇಜಿನ ಮಾಧ್ಯಮ ವಿಭಾಗದ ಡಾ ಮಹೇಶ್ ಗಂವ್ಹಾರ ತಿಳಿಸಿದ್ದಾರೆ