70 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಪಕ್ಷ ಸಂವಿಧಾನದ ದುರಪಯೋಗಕ್ಕೆ ಹವಣಿಸುತ್ತಿದೆ: ದೇವೇಂದ್ರ ದೇಸಾಯಿ ಕಲ್ಲೂರ
ಸದಾ ಮುಸ್ಲಿಂ ಓಲೈಕೆಯಲ್ಲಿರುವ ಕಾಂಗ್ರೆಸ್ ಇತರೆ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಏಕೆ ಶ್ರಮಿಸಲ್ಲ?
ಒಂದು ರಾಷ್ಟ್ರ ಒಂದು ಸಂವಿಧಾನಕ್ಕೆ ಸದಾ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ತನ್ನ ಇತಿಹಾಸ ತಿಳಿಯಲಿ
70 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಪಕ್ಷ ಸಂವಿಧಾನದ ದುರಪಯೋಗಕ್ಕೆ ಹವಣಿಸುತ್ತಿದೆ: ದೇವೇಂದ್ರ ದೇಸಾಯಿ ಕಲ್ಲೂರ
ಕಲಬುರಗಿ: ದೇಶದ ಸ್ವಾತಂತ್ರö್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷವು ಸದಾ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿಯೇ ಇರುತ್ತದೆ. ಸ್ವಾತಂತ್ರö್ಯದ ನಂತರ ಭಾರತದಲ್ಲಿರುವ ಎಲ್ಲಾ ನಾಗರಿಕರು ಸಮಾರು ಎಂದ ಮೇಲೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಕಾನೂನು ಹಾಗೂ ಇತರೆ ಧರ್ಮದವರಿಗೆ ಪ್ರತ್ಯೇಕ ಕಾನೂನು ತರುವುದು ಅವಶ್ಯಕತೆ ಕಾಂಗ್ರೆಸ್‌ಗೆ ಇತ್ತೇ? 60 ವರ್ಷ ದೇಶವನ್ನು ಮುನ್ನಡೆಸಿದ ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ 70 ಬಾರಿ ತಿದ್ದುಪಡಿ ಮಾಡಿ ಸಂವಿಧಾನಕ್ಕೆ ಅಗೌರವ ತೋರಿದ್ದಲ್ಲದೇ ಇಂದು ಸಂವಿಧಾನದ ರಕ್ಷಣೆಯಾಗಬೇಕು ಎಂದು ಜನರ ತಲೆಯಲ್ಲಿ ಅಪ್ರಚಾರ ಮಾಡುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಕಲಬುರಗಿ ನಗರ ಓಬಿಓ ಮೋರ್ಚಾ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಪ್ರಶ್ನಿಸಿದ್ದಾರೆ.
ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ವಿರೋಧ ಮಾಡಿರುವ ಕಾಂಗ್ರೆಸಿಗರು ಇಂದು ಸಂವಿಧಾನ ರಕ್ಷಣೆ ಮಾಡಬೇಕಾಗಿದೆ ಎಂದು ಯಾವ ನೈತಿಕತೆಯಿಂದ ಹೇಳುತ್ತಾರೆ. ಸಂವಿಧಾನವನ್ನೇ 70 ಬಾರಿ ತಮಗೆ ಬೇಕಾದ ಹಾಗೇ ತಿದ್ದುಪಡಿ ಮಾಡಿರುವ ಕಾಂಗ್ರೆಸಿಗರು ಇಂದು ಸಂವಿಧಾನ ರಕ್ಷಣೆಯ ನಾಟಕವಾಡುತ್ತಿದ್ದಾರೆ . ಕಳೆದ ಹರ್ಷದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರ ಕೇವಲ ನಾಲ್ಕು ಬಾರಿ ಮಾತ್ರ ಸಂವಿಧಾನದಲ್ಲಿ ತಿದ್ದುಪಡಿ ತಂದಿದೆ. ಅದು ಇಂದು ಎಲ್ಲರಿಗೂ ಸಮಾನವತೆಯಡೆಗೆ ತೇಗೆದುಕೊಂಡು ಹೋಗಿದೆ ಇದು ಅವರಿಗೆ ಸಹಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸದಾ ಮುಸ್ಲಿಂ ಓಲೈಕೆಯಲ್ಲಿರುವ ಅವರು ದೇಶದಲ್ಲಿನ ಇತರೆ ಹಿಂದುಳಿದ ವರ್ಗಗಳ, ಶೋಷಿತರ ಅಭಿವೃದ್ಧಿಗಾಗಿ ಯಾವು ಉತ್ತಮ ಕಾರ್ಯಮಾಡಲಿಲ್ಲ. ಬದಲಿಗೆ ಓಟ್‌ಬ್ಯಾಂಕ್ ರಾಜಕೀಯಕ್ಕೆ ಹಿಂದುಳಿದ ವರ್ಗಗಳನ್ನು ಹಾಗೂ ಶೋಷಿತರನ್ನು ಬಳಕೆ ಮಾಡಿಕೊಂಡಿದ್ದಾರೆ. ಈ ದೇಶದಲ್ಲಿನ ಪ್ರತಿಯೊಬ್ಬರು ರಾಜಕೀಯ ಹಾಗೂ ಸಾಮಾಜಿಕವಾಗಿ ಸಮಾನರು, ಎಲ್ಲರಿಗೂ ಓಟಿನ ಹಕ್ಕು ಇದೆ. ಶ್ರೀಮಂತರೆ ಇರಲಿ ಬಡವರೇ ಇರಲಿ, ಅಧಿಕಾರಿಯೇ ಇರಲಿ ಅಥವಾ ವ್ಯಾಪಾರಿಗಳೇ ಇರಲಿ ಎಲ್ಲರಿಗೂ ಸಮಾನವಾದ ಮತಹಾಕಲು ಸಂವಿಧಾನ ಹೇಳುತ್ತದೆ. ಆದರೆ ದೇಶದಲ್ಲಿ ಮುಸ್ಲಿಂ ಸಮುದಾಯಗಳಿಗೆ ಸರಿಯಾ ಕಾನೂನು ಜಾರಿಗೆ ತಂದು ಪ್ರತ್ಯೇಕವಾಗಿ ಅವರನ್ನು ಗೌರವಿಸಿದಂತಾಗಿಲ್ಲವೇ, ಈ ದೇಶದ ಮುಸ್ಲಿಂ ಸಮುದಾಯದವರು ಈ ದೇಶದವರೇ ಆಗಿದ್ದಾರೆ. ಆದರೆ ಇತರೆ ಧರ್ಮಗಳಿಗೆ ಒಂದು ಕಾನೂನು ಅವರಿಗೆಕೇ ಪ್ರತ್ಯೇಕ ಕಾನೂನು? ಎನ್ನುದುದು ಈ ದೇಶದಲ್ಲಿ ಪ್ರಸ್ತೂತ ಚರ್ಚೆಯಾಗಬೇಕಿದೆ. ಮುಸ್ಲಿಂ ಸಮುದಾಯದವರು ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಲಿ ಅದು ಅವರ ಹಕ್ಕು, ಅದನ್ನು ಸಂವಿಧಾನ ನೀಡಿದೆ. ಆದರೆ ಓಲೈಕಿಯಿಂದ ಅವರು ಇಂದು ಎಲ್ಲಾ ಸಂಮುದಾಯಗಳಿಂದ ಕ್ರಮೇಣ ದೂರವಾಗಿ ತಮ್ಮದೇ ನೀತಿ ನಿಯಮಗಳು ಸರಿ ಎಂಬ ಮನಭಾವನೆ ಅವರಲ್ಲಿ ಸಹವಾಗಿಯೇ ಮುಡುವಂತೆ ಆಗುತ್ತಿದೆ. ಒಂದು ರಾಷ್ಟ್ರ ಒಂದು ಸಂವಿಧಾನ ಜಾರಿಗೆ ತಂದರೆ ಅವರಲ್ಲಿ ದೇಶ ಭಕ್ತಿ, ಇದು ನಮ್ಮ ದೇಶ, ನಾವೂ ಈ ದೇಶದ ನಾಗರೀಕರು, ದೇಶ ಮೊದಲು ನಂತರ ಧರ್ಮ ಎನ್ನವು ಸತ್ಯ ತಿಳಿಯುತ್ತದೆ. ಇಲ್ಲವಾದಲ್ಲಿ ದೇಶದಲ್ಲಿ ಸದಾ ಅಶಾಂತಿ ಹುಟ್ಟಿಸುವ ಕ್ರಿಮಿಗಳು ಬೆಳೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಎಲ್ಲಾ ನಾಗರಿಕರಿಗೆ ಅವರ ವಿಚಾರ, ಅಭಿವ್ಯಕ್ತಿ ಮತ್ತು ಆರಾಧನಾ ಸ್ವಾಂತಂತ್ರ್ಯ ಸಮಾನವಾದ ಸ್ವಾನಮಾನ, ವ್ಯಕ್ತಿ ಗೌರವ, ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಪ್ರಭುತ್ವವನ್ನು ಬೇಳೆಸುಉದು ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದೆ. ಆದರೆ ಇಂದು ಭಾರತದಲ್ಲಿ ಧರ್ಮಗಳ ಹೆಸರಲ್ಲಿ ದ್ವೀನಾಗರಿಕತೆಯಾಗುವುದನ್ನು ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಬೆಂಬಲಿಸುತ್ತಿದೇಯೇ, ಸಂವಿಧಾನದ ಪ್ರತಿಯನ್ನು ತೋರಿಸಿ ಅದರ ರಕ್ಷಣೆ ಎಂಬ ನಾಟಕವಾಡಿ ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಠಿ ಮಾಡುತ್ತಿದೆಯೇ ಎಂಬ ಅನುಮಾನ ಸಹಜವಾಗಿಯೇ ಕಾಣುತ್ತದೆ.
ಕೂಡಲೇ ಕೇಂದ್ರ ಸರ್ಕಾರದಿಂದ ಸಮಾನ ನಾಗರಿಕ ಹಕ್ಕು ಜಾರಿಗೆ ತರಬೇಕಾದರೆ ಒಂದು ದೇಶ, ಒಂದು ಸಂವಿಧಾನ, ಒಂದು ಕಾನೂನು ಜಾರಿಗೆ ಯಾಗಲೇ ಬೇಕು ಎಂದು ಬಿಜೆಪಿಯ ಕಲಬುರಗಿ ನಗರ ಓಬಿಸಿ ಮೋರ್ಚಾದ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಒತ್ತಾಯಿಸುತ್ತಾ ಎಲ್ಲಾ ಧರ್ಮದವರು, ಜಾತಿ ಮತ, ಪಂತ ಎನ್ನದೇ ಎಲ್ಲಾ ನಾಗರಿಕರು ಬೆಂಬಲಿಸಬೇಕು ಎಂದು ಕೋರಿದ್ದಾರೆ.