ಜನತೆಗೆ ಕೆಂಪೇಗೌಡರು ಸ್ಫೂರ್ತಿಯ ಸೆಲೆ: ನಿಶ್ಚಲಾನಂದನಾಥ ಸ್ವಾಮೀಜಿ

ಜನತೆಗೆ ಕೆಂಪೇಗೌಡರು ಸ್ಫೂರ್ತಿಯ ಸೆಲೆ: ನಿಶ್ಚಲಾನಂದನಾಥ ಸ್ವಾಮೀಜಿ
ಬೆಂಗಳೂರು.ಪ್ರಸ್ತುತ ಒಂದೂವರೆ ಕೋಟಿಗೂ ಅಧಿಕ ಜನತೆ ಬೆಂಗ ಳೂರಿನಲ್ಲಿ ಆಶ್ರಯ ಪಡೆದು ಜೀವನ ಕಟ್ಟಿಕೊಂಡಿ ರುವುದಕ್ಕೆ ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಯಿಂದ ನಗರ ನಿರ್ಮಿಸಿದ್ದೇ ಕಾರಣವಾಗಿದ್ದು, ನಿತ್ಯ ಕೆಂಪೇಗೌಡ ಅವರನ್ನು ಸ್ಮರಿಸಿಕೊಳ್ಳಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ನಾಡಪ್ರಭು ಶ್ರೀ ಕೆಂಪೇಗೌಡ ವಿಚಾರ ವೇದಿಕೆ ಭಾನುವಾರ ವಿಜಯನಗರದ ಆದಿಚುಂಚನಗಿರಿ ಸಭಾಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ 516ನೇ ಜಯಂತ್ಯುತ್ಸವ, ಸಾಧಕರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ದೇಶ, ವಿದೇಶದ ಜನತೆ ತರಹೇವಾರಿ ಉದ್ಯೋಗ ಮಾಡಿಕೊಂಡು ಇಲ್ಲಿ ನೆಲೆಸಿದ್ದಾರೆ. ಕೆಂಪೇಗೌಡರು ಬೆಂಗಳೂರನ್ನು ಕಟ್ಟದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇಂದು ಎಲ್ಲರ ಆಶ್ರಯಕ್ಕೆ ಆಶ್ರಯಕ್ಕೆ ಅವರೇ ಕಾರಣ. ಹೀಗಾಗಿ ಅವರನ್ನು ನಿತ್ಯ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಇಡೀ ನಾಡಿನ ಜನತೆಗೆ ಕೆಂಪೇಗೌಡ ಅವರು ಸ್ಫೂರ್ತಿಯ ಸೆಲೆ. ಬೆಂಗಳೂರಿನವರು ಎಂದರೆ ನಾವು ಭಾರತೀಯರು ಎಂಬ ಭಾವನೆ ಎಲ್ಲೆಡೆ ಬರುತ್ತದೆ, ಸ್ಪೂರ್ತಿಯ ಸೆಲೆಯಾಗಿರುವ ನಾಡಪ್ರಭು ಕೆಂಪೇ ಗೌಡರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಣಾಮ ಕಾರಿಯಾಗಿ ತಿಳಿಸಬೇಕಿದೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ, ಡಾ.ಟಿ.ಎಚ್. ಅಂಜನಪ್ಪ ಮಾತನಾಡಿ ದರು. ಶಾಸಕ ಎಂ. ಕೃಷ್ಣಪ್ಪ ಸಮುದಾಯದ ಸಾಧಕ ರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು. ಕಸಾಪ ಬೆಂಗಳೂರು ಮಾಜಿ ಅಧ್ಯಕ್ಷ ಸಿ.ಕೆ. ಶ್ರೀ ಸಿ.ಕೆ. ರಾಮೇಗೌಡ ಇದ್ದರು.