ಅರಿವು ಶಿಕ್ಷಣ ಕೇಂದ್ರದಲ್ಲಿ ಸಾವಿತ್ರಿಬಾಯಿ ಫುಲೆ 195ನೇ ಜಯಂತಿ ಅದ್ಧೂರಿ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿ ಸಾವಿತ್ರಿಬಾಯಿ ಫುಲೆ 195ನೇ ಜಯಂತಿ ಅದ್ಧೂರಿ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿ ಸಾವಿತ್ರಿಬಾಯಿ ಫುಲೆ 195ನೇ ಜಯಂತಿ ಅದ್ಧೂರಿ ಆಚರಣೆ

ಕಲಬುರ್ಗಿ: ಅರಿವು ಶಿಕ್ಷಣ ಕೇಂದ್ರದಲ್ಲಿ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರ 195 ನೇ ಜಯಂತೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಛಲವಾದಿ ಮಹಾಸಭಾ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಮಹಾದೇವ ಮೋಘಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ್ ವಾಲಿ, ಡಾ. ಶಿವಪ್ಪ ಭೂಸ್ನೂರ್ ಪ್ರಥಮ ದರ್ಜೆ ಕಾಲೇಜು, ಆಳಂದದ ಅತಿಥಿ ಉಪನ್ಯಾಸಕರಾದ ರಮೇಶ್, ಡಾ. ಸುರೇಶ್ ಚಂದ್ರಪ್ಪ ಅವರು ಉಪಸ್ಥಿತರಿದ್ದರು.

 ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಿವಪ್ಪ ಭೂಸ್ನೂರ್ ಅವರು, ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಹಾಗೂ ಮಹಿಳಾ ಶಿಕ್ಷಣಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು  ಮಹಾದೇವ ಮೋಘಾ ಮಾತನಾಡಿ, ಮಕ್ಕಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಇಂತಹ ಮಹಾಪುರುಷರ ಜಯಂತಿಗಳನ್ನು ಆಚರಿಸುವುದು ಅತ್ಯಂತ ಅಗತ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರಿವು ಶಿಕ್ಷಣ ಕೇಂದ್ರದ ಸಂಸ್ಥಾಪಕರಾದ ಮಲ್ಲಿಕಾರ್ಜುನ ಶೃಂಗೇರಿ, ಶಿಕ್ಷಕಿಯರಾದ ಪ್ರಿಯಾ ಜ್ಯೋತಿ, ಪಂಚಶೀಲ, ಅಮಿತ್ ಶೃಂಗೇರಿ, ಕೈಲಾಸ ಹಿರಿನಾಯಕ್, ಅಶೋಕ್ ಶೃಂಗೇರಿ, ಶಿವರಾಜ್ ಹಿರಿನಾಯಕ್, ಸಂಜು ಕುಮಾರ್, ಆಶಾ, ನಿಶಾ, ವಿನುತಾ ಹಾಗೂ ಅರಿವು ಶಿಕ್ಷಣ ಕೇಂದ್ರದ ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಂಕೇತ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪೃಥ್ವಿರಾಜ್ ಸ್ವಾಗತಿಸಿ, ಗೌತಮ್ ಶೃಂಗೇರಿ ವಂದಿಸಿದರು.

ವರದಿ: ಡಾ. ಅವಿನಾಶ ಎಸ್. ದೇವನೂರ