ಬೋಧಕೇತರ ಸಿಬ್ಬಂದಿಗೆ ಗಣರಾಜ್ಯೋತ್ಸವದ ಸಿಹಿ ಸುದ್ದಿ ನೀಡಿದ ಶಶೀಲ್ ಜಿ ನಮೋಶಿ

ಬೋಧಕೇತರ ಸಿಬ್ಬಂದಿಗೆ ಗಣರಾಜ್ಯೋತ್ಸವದ ಸಿಹಿ ಸುದ್ದಿ ನೀಡಿದ ಶಶೀಲ್ ಜಿ ನಮೋಶಿ

ಬೋಧಕೇತರ ಸಿಬ್ಬಂದಿಗೆ ಗಣರಾಜ್ಯೋತ್ಸವದ ಸಿಹಿ ಸುದ್ದಿ ನೀಡಿದ ಶಶೀಲ್ ಜಿ ನಮೋಶಿ 

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಮಸ್ಥ ಬೋಧಕೇತರ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವದ ಶುಭ ದಿನದಂದು ಪರಿಷ್ಕೃತ ವೇತನ ಶ್ರೇಣಿ ಜಾರಿ ಮಾಡುವ ಐತಿಹಾಸಿಕ ನಿರ್ಧಾರವನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಪ್ರಕಟಿಸಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೇಂದ್ರ ಧ್ವಜಾರೋಹಣವನ್ನು ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲ ನೇರವೇರಿಸಿ ಮಾತನಾಡುತ್ತಿದ್ದರು. ನಮ್ಮ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜು ನಮ್ಮ ಸಂಸ್ಥೆಗೆ ತಂದೆಯ ಸ್ಥಾನದಲ್ಲಿ ಇದೆ

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯವು ಕರ್ನಾಟಕದಲ್ಲಿ ಪ್ರತಿಷ್ಠಿತ ಕಾಲೆಜುಗಳಲ್ಲಿ ಒಂದಾಗಿದ್ದು ಈಗ ಸ್ನಾತಕ ವೈದ್ಯಕೀಯ ಪದವಿ ಪ್ರವೇಶ 150 ಇದ್ದು ಅದನ್ನು ಈಗಿನ ಆಡಳಿತ ಮಂಡಳಿಯ ಸಹಕಾರದಿಂದ 250 ಕ್ಕೆ ಹೆಚ್ಚಿಸಲು ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ವಿಭಾಗದಲ್ಲಿ 44 ಹೆಚ್ಚುವರಿಯಾಗಿ ಪ್ರವೇಶಗಳನ್ನು ಪಡೆಯಲು ಅಳವಡಿಸಿಕೊಳ್ಳಲು ನಿರ್ದರಿಸಲಾಗಿದೆ.

ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯು ಇಡಿ ಸಂಸ್ಥೆಗೆ ತಾಯಿಯಾಗಿ ನಮ್ಮ ಸಂಸ್ಥೆಯ ಪ್ರತಿಯೊಬ್ಬರನ್ನು ಸಲುಹಿತ್ತಿದೆ ಈಗ ಆಸ್ಪತ್ರೆಯಲ್ಲಿ ಹಲವಾರು ವಿಶೇಷ ಮಹತ್ವವುಳ್ಳ ಸಾರ್ವಜನಿಕರಿಗೆ ಅನೂಕೂಲವಾಗುವ ಅನೇಕ ವಿಭಾಗಗಳನ್ನು ಕೆಲವೆ ತಿಂಗಳುಗಳಲ್ಲಿ ಪ್ರಾರಂಬಿಸಿ ಈ ಭಾಗದಲ್ಲಿಯೆ ಅತ್ಯಂತ ಶ್ರೇಷ್ಠ ಮಾದರಿಯಾದ ಆಸ್ಪತ್ರೆಯನ್ನು ಮಾಡಿ ಈ ಭಾಗದ ಜನರ ಆರೋಗ್ಯದ ರಕ್ಷಣೆಗೆ ಗಮನ ಕೊಡಲಾಗುವದು ಎಂದು ಹೇಳಿದರು. ಈಗಾಗಲೇ ಆಸ್ಪತ್ರೆಯ ವೈದ್ಯರು ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿದ್ದು ಪ್ರತಿಯೊಬ್ಬರು ಆಸ್ಪತ್ರೆಯ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿದರು. ವೈದ್ಯಕೀಯ ಕಾಲೇಜಿನ ಸ್ಥಾಪನೆಗಾಗಿ ಹಿಂದಿನ ಮುಖ್ಯಮಂತ್ರಿಗಳಾದ ದಿವಂಗತ ಎಸ್ ನಿಜಲಿಂಗಪ್ಪನವರು ನಮ್ಮ ಸಂಸ್ಥೆಗೆ ಬಹಳಷ್ಟು ಸಹಾಯ ಮಾಡಿದರು ಇದರಿಂದಾಗಿ ಅವರ ಹೆಸರನ್ನು ನಮ್ಮ ದಂತ ವೈದ್ಯಕೀಯ ಕಾಲೇಜಿಗೆ ಇಡಲಾಗಿದೆ ಆದರೆ ಪ್ರಸ್ತುತ ಆಡಳಿತ ಮಂಡಳಿಯು ಅವರ ಪುತ್ಥಳಿಯನ್ನು ನಿರ್ಮಿಸಿ ಸದಾ ಅವರ ಸಹಾಯವನ್ನು ಸ್ಮರಿಸಲಾಗುವದು ಎಂದು ಹೇಳಿದರು.

ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜು ಹಾಗೂ ಇನ್ನೂ ಹಲವಾರು ಶಾಲಾ ಕಾಲೇಜುಗಳು ಅನೇಕ ಸಾಧನೆ ಮಾಡಿದ್ದು ಮುಂದೆ ಕನಿಷ್ಠ ನಮ್ಮ ಶಾಲಾ ಕಾಲೇಜುಗಳು ತಮ್ಮ ಸಿಬ್ಬಂದಿಗೆ ತಮ್ಮ ಶಾಲಾ ಕಾಲೇಜುಗಳಿಂದಲೆ ವೇತನ ಆಗುವಂತೆ ಕಾರ್ಯ ನಿರ್ವಹಿಸಬೇಕು ಹಾಗೂ ಶಿಸ್ತು,ಸಮಯ ಪ್ರಜ್ಞೆ, ದಕ್ಷತೆಯನ್ನು ಮೈಗೂಡಿಸಿಕೊಂಡು ಸಂಸ್ಥೆಯನ್ನು ಉತ್ತುಂಗಕ್ಕೇರಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಕಲಬುರ್ಗಿಯವರೆ ಆದ ಕ್ಯಾನ್ಸರ್ ತಜ್ಞೆ ಡಾ ವಿಜಯಲಕ್ಷ್ಮಿ ದೇಶಮಾನೆಯವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತ ಪ್ರಯುಕ್ತ ಸಂಸ್ಥೆಯ ಅವರನ್ನು ಪ್ರಶಂಸಿಸಿ ಅವರು ಸಹೋದರಿ ಇಂಜಿನಿಯರಿಂಗ್ ಕಾಲೇಜಿನ ಇಂದುಮತಿ ದೇಶಮಾನೆಯವರನ್ನು ಅಧ್ಯಕ್ಷರು ಸನ್ಮಾನಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಪ್ರಾಚಾರ್ಯರಾದಡಾ ಎಸ್ ಆರ್ ಪಾಟೀಲ್ ಉಪಪ್ರಾಚರಾದ ಡಾ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ ವೇದಿಕೆ ಮೇಲೆ ಉಪಸ್ಥಿತರಿದ್ದರು, ಸಂಸ್ಥೆಯ ಎಲ್ಲಾ ಕಾಲೇಜುಗಳ ಮುಖ್ಯಸ್ಥರು ಸಿಬ್ಬಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಪ್ರಾಧ್ಯಾಪಕಿ ಡಾ ಸುಜಾತಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳದಾ ಅಖಿಲೇಶ್ ಹಾಗೂ ಮಾಧುರಿ ಪ್ರಾರ್ಥಿಸಿದರು.