ಸಾರಿಗೆ ನೌಕರರ ಚಳವಳಿಯ ಸಿದ್ಧತಾ ಸಮಾವೇಶ 27ರಂದು

ಸಾರಿಗೆ ನೌಕರರ ಚಳವಳಿಯ ಸಿದ್ಧತಾ ಸಮಾವೇಶ

27ರಂದುಕಲಬುರಗಿ: ರಾಜ್ಯ ರಸ್ತೆ ಸಾರಿಗೆ ನೌಕರರ ಕಲ್ಯಾಣ ಕರ್ನಾಟಕ ಸಮಿತಿಯಿಂದ ಆಗಸ್ಟ್ 27ರಂದು ನಗರದ 

 ಭವನದಲ್ಲಿ ಸಾರಿಗೆ ನೌಕರರ ಚಳವಳಿಯ ಸಿದ್ಧತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕಲ್ಯಾಣ ಕರ್ನಾಟಕ ಸಮಿತಿ ಅಧ್ಯಕ್ಷ ಚಂದ್ರಕಾಂತ ಗದ್ದಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರಿಗೆ 38 ತಿಂಗಳ ಹಿಂಬಾಕಿ ವೇತನದ ಹಣ ಬಂದಿಲ್ಲ. 2024ರ ಜನವರಿಯಿಂದ ವೇತನ ಪರಿಷ್ಕರಣೆಯಾಗಬೇಕಿತ್ತು. ಅದೂ ಆಗಿಲ್ಲ. ರಜೆ ನಗದೀಕರಣ, ಭವಿಷ್ಯ ನಿಧಿ ಬಾಕಿ ಹಣ, ನಿವೃತ್ತ ನೌಕರರ ಉಪಧನ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಒಟ್ಟು ₹4,927 ಕೋಟಿ ಹಣ ಸಂದಾಯವಾಗಬೇಕು. ಶಕ್ತಿ ಯೋಜನೆಯ ₹1,500 ಕೋಟಿ ಬಿಡುಗಡೆಯಾಗಬೇಕು. ಹೀಗಾಗಿ ಸೆ.12ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸಾರಿಗೆ ನೌಕರರು ಧರಣಿ ಹಮ್ಮಿಕೊಂಡಿದ್ದಾರೆ ಎಂದರು.

ಸೆ.12ರ ಚಳವಳಿಯ ಸಿದ್ಧತಾ ಸಮಾವೇಶವನ್ನು ಆ.27ರಂದು ಕಲಬುರಗಿಯಲ್ಲಿ, ಆ.28ರಂದು ಹುಬ್ಬಳ್ಳಿಯಲ್ಲಿ ನಡೆಸಲಾಗುತ್ತಿದೆ ಎಂದರು.

 ಕೆಎಸ್‌ಆರ್‌ಟಿಸಿ ಸ್ಟಾಫ್‌ & ವರ್ಕರ್ಸ್‌ ಫೆಡರೇಷನ್‌ ಕಾರ್ಯಾಧ್ಯಕ್ಷ ಸಿದ್ದಪ್ಪ ಪಾಲ್ಕಿ, ರಾಮಚಂದ್ರ ಹೈಯಾಳಕರ್‌, ಬಸವರಾಜ ಖಂಡಿ, ಖಲೀಲ್‌ ಅಹ್ಮದ್‌ ಇದ್ದರು.