ವಿಶ್ವವಿದ್ಯಾಲಯದ ಏಳಿಗೆಗೆ ಒಗ್ಗೂಡಿ ಶ್ರಮಿಸಿ: ಪ್ರೊ ಶಶಿಕಾಂತ್ ಎಸ್ ಉಡಿಕೇರಿ

ವಿಶ್ವವಿದ್ಯಾಲಯದ ಏಳಿಗೆಗೆ ಒಗ್ಗೂಡಿ ಶ್ರಮಿಸಿ: ಪ್ರೊ ಶಶಿಕಾಂತ್ ಎಸ್ ಉಡಿಕೇರಿ

ವಿಶ್ವವಿದ್ಯಾಲಯದ ಏಳಿಗೆಗೆ ಒಗ್ಗೂಡಿ ಶ್ರಮಿಸಿ: ಪ್ರೊ ಶಶಿಕಾಂತ್ ಎಸ್ ಉಡಿಕೇರಿ

ಕಲಬುರಗಿ : ಮಾತಿಗಿಂತ ಕೃತಿ ಮುಖ್ಯ ಎಂಬ ಮಾತಿದೆ. ಮಾತಿಗಿಂತ ಕೆಲಸಗಳು ಮಾತಾಡಬೇಕು ಎಂಬುದು ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಏಳಿಗೆಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ. ಶಶಿಕಾಂತ್ ಎಸ್.ಉಡಿಕೇರಿ ಹೇಳಿದರು. 

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. 

ಕಲ್ಯಾಣ ಕರ್ನಾಟಕ ಪ್ರದೇಶ ವಿಶೇಷ ಸಂಸ್ಕೃತಿ ನೆಲ. ಇಲ್ಲಿನ ಜನರಿಗೆ ಎಲ್ಲರನ್ನು ಗೌರವಿಸುವ ಹಾಗೂ ಒಳಗೊಳ್ಳುವ ವಿಶೇಷ ಗುಣ ಮತ್ತು ಸ್ವಭಾವವಿದೆ. ನಾನು ಸಹ ಆಳಂದ ಕೃಷಿ ವಿದ್ಯಾಲಯ, ರಾಯಚೂರು, ಬಿಜಾಪುರ ಮತ್ತು ಧಾರವಾಡದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಸಮಸ್ಯೆಗಳಿರುವುದು ಸಹಜ, ಅವುಗಳಿಗೆ ಮೀರಿದ ಅಭಿವೃದ್ಧಿ ಕಾಯಕಲ್ಪದ ಕಡೆಗೆ ನಮ್ಮ ಕೆಲಸ ಮತ್ತು ಜವಾಬ್ದಾರಿ ಇರಬೇಕು. ಆದರಿಂದ ಎಲ್ಲಾ ಸಿಬ್ಬಂದಿಗಳ ಸಹಕಾರ, ಕರ್ತವ್ಯ ನಿಷ್ಠೆ ಮತ್ತು ಪ್ರೋತ್ಸಾಹದಿಂದ ವಿಶ್ವವಿದ್ಯಾಲಯದ ಸಾಧನೆಯನ್ನು ಉನ್ನತ ಮಟ್ಟಕ್ಕೆ ಕಂಡೋಯಬಹುದು ಎಂದರು.

ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಪ್ರಾಸ್ತವಿಕವಾಗಿ ಮಾತನಾಡಿ ಗುಲಬರ್ಗಾ ವಿಶ್ವಾವಿದ್ಯಾಲಯಕ್ಕೆ ಖಾಯಂ ಕುಲಪತಿಯಾಗಿ ಆಗಮಿಸಿರುವ ಪ್ರೊ. ಶಶಿಕಾಂತ್ ಉಡಿಕೇರಿ ಅವರು ಕೃಷಿ ವಿಜ್ಞಾನಿ ಆದರೂ ಉತ್ತಮ ಕೃಷಿ ತಜ್ಞರು ಹೌದು. ಬೋಧನೆ ಜೊತೆಗೆ ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಅಗಾದ ಜ್ಞಾನ ಬೆಳೆಸಿಕೊಂಡಿದ್ದಾರೆ. ಬಳ್ಳಾರಿ ಕೃಷ್ಣದೇವರಾಯ ವಿವಿಯಲ್ಲಿ ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿರುವ ಇವರು ಅಪಾರ ಆಡಳಿತ ಅನುಭವ ಜೊತೆಗೆ, ದಕ್ಷತೆ ಮತ್ತು ಪ್ರಾಮಾಣಿಕತೆ ಮೈಗುಡಿಸಿಕೊಂಡಿದ್ದಾರೆ. ಒಬ್ಬ ಕೃಷಿ ವಿಜ್ಞಾನಿ ವಿವಿಯ ಚುಕ್ಕಾಣಿ ಹಿಡಿದು ಮುನ್ನಡೆಸಲು ಆಗಮಿಸಿರುವುದು ನಮ್ಮ ನಿಮ್ಮೆಲ್ಲರ ಸುದೈವ ಎಂದರು.

ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ. ಎಚ್. ಟಿ. ಪೋತೆ ಮಾತನಾಡಿ ವಿಶ್ವಾವಿದ್ಯಾಲಯದ ಅಭಿವೃದ್ಧಿ ಸಾಧನೆಗೆ ಸಮಸ್ಯೆಗಳಿರುವುದು ಸಹಜ, ಅವುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸವಲಾಗಿದೆ. ಉನ್ನತ ಶಿಕ್ಷಣ ಈ ಭಾಗದ ಮಕ್ಕಳ ಉನ್ನತಿಗೆ ಉತ್ತಮ ಬೋಧನೆ, ಗುಣಮಟ್ಟದ ಸಂಶೋಧನೆಗೆ ಹೆಚ್ಚು ಮೌಲ್ಯ ಸಿಗಬೇಕಿದೆ. ಕಾಲಮಿತಿಯೊಳಗೆ ಶೈಕ್ಷಣಿಕ ಕಾರ್ಯಕ್ರಮಗಳ ಆರಂಭ, ಹುದ್ದೆಗಳ ಭರ್ತಿ, ವಿದ್ಯಾರ್ಥಿಗಳ ಭವಿಷ್ಯ ಸುಧಾರಣೆಗೆ ಒತ್ತು ನೀಡುವಂತಹ ನಿಟ್ಟಿನಲ್ಲಿ ಕುಲಪತಿಗಳು ನಿಗಾವಹಿಸಬೇಕಿದೆ. ಆ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳನ್ನು ಜೊತೆಗೂಡಿಸಿ ಮುನ್ನಡೆಯಲು ನಮ್ಮೆಲ್ಲರ ಸಹಕಾರವಿದೆ ಎಂದು ಹೇಳಿದರು. ಶ್ರೀಮತಿ. ಸುಧಾ ಉಡಿಕೇರಿ, ವಿತ್ತಾಧಿಕರಿ ಶ್ರೀಮತಿ.ಜಯಂಬಿಕಾ ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಅವರ ಕುಟುಂಭದ ಸದಸ್ಯರು, ಬಿಜಾಪುರ ಹಾಗೂ ಧಾರವಾಡ ಕೃಷಿ ವಿವಿಯ ಸಹುದ್ಯೋಗಿಗಳು ಭಾಗವಹಿಸಿದ್ದರು. 

ವ್ಯಕ್ತಿಗಿಂತ ವಿಶ್ವವಿದ್ಯಾಲಯದ ಸಾಧನೆ ಮುಖ್ಯ, ನಿಮ್ಮ ಸಹಕಾರದಿಂದ ವಿವಿಯ ಸಾಧನೆಯನ್ನು ಎತ್ತರಕ್ಕೆ ಬೆಳೆಸುವ ದ್ಯೇಯ ನಮ್ಮದಾಗಬೇಕು. ನನ್ನ ತಂದೆ ಒಬ್ಬ ಪ್ರಾಮಾಣಿಕ ಶಿಕ್ಷಕರಾಗಿದ್ದರು. ಶಾಲೆ ಕಲಿಕೆ ಜೊತೆಗೆ ಮನೆಯಲ್ಲಿ ಕೂಡಾ ನನ್ನ ತಂದೆ ತಾಯಿ ನನಗೆ ನೀಡಿದ ಸಂಸ್ಕಾರ ಮತ್ತು ಮಾರ್ಗದರ್ಶನ, ನನ್ನ ಕುಟುಂಭ ವರ್ಗದ ಕಾಳಜಿ ಮತ್ತು ಮುತುವರ್ಜಿಯೇ ಕುಲಪತಿ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ಹೇಳುತ್ತಾ ಕುಟುಂಬದ ವರ್ಗದವರನ್ನು ನೆನೆದು ಭಾವುಕ ರಾದರು.

ಕಲ್ಬುರ್ಗಿ ಸುದ್ದಿ ನಾಗರಾಜ್ ದಂಡಾವತಿ