ಶರಣಬಸವೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಶರಣಬಸವೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಶರಣಬಸವೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಲಬುರಗಿ ಅವರ ಆಶ್ರಯದಲ್ಲಿ ಈಚೆಗೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಶರಣ-ಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

4X400 ಮೀಟರ್ ರಿಲೇಯಲ್ಲಿ ಚೇತನ, ತೇಜಸ್ವಿ, ವಿಷ್ಣು ಮತ್ತು ಪವನ ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ, ಬಾಲಕರ 100 ಮೀಟರ್ ಓಟ -ಒಮರ್ ದ್ವಿತೀಯ,

ಬಾಲಕಿಯರ 100 ಮೀಟರ್- ಪೂರ್ವಿ ದ್ವಿತೀಯ, ಬಾಲಕರ ವಾಲಿಬಾಲ್-ಚೇತನ, ಅಕ್ಷಯ.ಎಂ, ಪವನ, ಜೀವನ, ರೋಹಿತ, ರಾಮಕೃಷ್ಣ, ಲಾಳೆಮಶಾಕ್, ವೇದಾಂತ, ಪ್ರಜ್ವಲ, ಶಂಕರ, ಪಾರ್ಥ, ಮತ್ತು ವರುಣ ಅವರಿದ್ದ ತಂಡ- ಪ್ರಥಮ ಸ್ಥಾನ, ಬಾಲಕರ ಷಟಲ್ ಬ್ಯಾಡ್ಮಿಂಟ-ನ್‌ನಲ್ಲಿ ತೇಜಸ್, ವೈಭವ, ಸಂದೀಪ, ನಿತಿನ್ ಮತ್ತು ರೋಹಿತ್ ಅವರನ್ನೊಳ-ಗೊಂಡ ತಂಡ ಪ್ರಥಮ ಸ್ಥಾನ ಪಡೆದಿದೆ.

ಬಾಲಕಿಯರ ಷಟಲ್ ಬ್ಯಾಡ್ಮಿಂಟ-ನ್‌ನಲ್ಲಿ ಸಾಕ್ಷಿ, ಕಸ್ತೂರಿ ಭಾಗ್ಯಾ, ದೀಪಾ ರೆಡ್ಡಿ, ಹರ್ಷಿತಾ ಮತ್ತು ಸಿದ್ರಾಮ ಪ್ರಥಮ, ಬಾಲಕರ ಚೆಸ್‌ನಲ್ಲಿ- ರೆಹಾನ ಅಲಿ ಮತ್ತು ಶಶಾಂಕ ಪ್ರಥಮ, ಬಾಲಕಿಯರ ವಾಲಿಬಾಲ್‌ನಲ್ಲಿ ಸುಶ್ಮಿತಾ, ಸನಾ, ಆಕಾಂಕ್ಷ, ರುತುಜಾ, ಸಾಕ್ಷಿ ಮತ್ತು ಅಶ್ವಿನಿ -ದ್ವಿತೀಯ ಸ್ಥಾನ ಗಳಿಸಿದ್ದಾರೆ. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜ ಗುತ್ತೇದಾರ, ರಾಜು ಸದ್ದಾಪುರ, ಸಿದ್ದರಾಮ ಹಾಗೂ ಪೂಜಾ ಪವಾರ ಇದ್ದಾರೆ

ಕಲ್ಬುರ್ಗಿ ಸುದ್ದಿ : ನಾಗರಾಜ್ ದಂಡಾವತಿ