ಕಲಬುರಗಿ|ಪೋಲಿಸ್ ಅಧಿಕಾರಿ ತೆರವು ಸರಿಯಲ್ಲ

ಕಲಬುರಗಿ : ನ.11'ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ಮುಗಿಯುವ ಮೊದಲೇ ಆರೋಪಿತ 10 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅಮಾನತು ಆದೇಶ ತೆರವುಗೊಳಿಸಿ ಸೇವೆಗೆ ನಿಯುಕ್ತಿಗೊಳಿಸಿದ ಸರ್ಕಾರದ ನಡೆ ಖಂಡಿಸಿ' ಕನ್ನಡ ಸೈನ್ಯದ ಪದಾಧಿಕಾರಿಗಳು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಘಟನೆಯ ಪದಾಧಿಕಾರಿಗಳು, 'ಪ್ರಕರಣದಲ್ಲಿ 113ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಅವರನ್ನು ಅಮಾನತು ಮಾಡಲಾಗಿತ್ತು. ಈಗ ವಿಚಾರಣೆ ಹಂತದಲ್ಲಿಯೇ 10 ಜನರ ಅಮಾನತು ಆದೇಶ ತೆರವುಗೊಳಿಸಲಾಗಿದೆ. ಅವರನ್ನು ಸೇವೆಗೆ ನಿಯುಕ್ತಿ ಮಾಡಲಾಗಿದೆ. ಸರ್ಕಾರದ ಈ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ' ಎಂದರು

10 ಜನರ ಮರು ನಿಯುಕ್ತಿ ಆದೇಶ ರದ್ದುಪಡಿಸಬೇಕು. ಬಂಧನಕ್ಕೊಳಗಾದ ಅಧಿಕಾರಿಗಳನ್ನು ವಜಾ ಮಾಡಬೇಕು' ಎಂದರು. ಕನ್ನಡ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಎಲ್.ಕಟ್ಟಿಮನಿ, ರಾಜಶೇಖರ ಕಟ್ಟಿಮನಿ, ಶ್ರೀಧರ ಕಟ್ಟಿಮನಿ, ಶಂಕರ ಕಟ್ಟಿಮನಿ, ಬಸವರಾಜ, ಜೈರಾಜ್, ಅಕ್ಷಯ್ ಗುತ್ತೇದಾರ, ಶರಣು ಹಂಗರಗಿ,ಕವಿರಾಜ ಕೋರಿ, ಲೋಹಿತ್ ಗೋಳಾ ಭಾಗವಹಿಸಿದ್ದರು.