ಪ್ರಭಾವತಿ ದೇಸಾಯಿ ಗಜಲ್

ಪ್ರಭಾವತಿ ದೇಸಾಯಿ ಗಜಲ್

ಸೌಜನ್ಯ ಶೀಲ ಕವಯತ್ರಿ:ಶ್ರೀಮತಿ ಪ್ರಭಾವತಿ ದೇಸಾಯಿ

  ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರು ಮಾಡಿದ ಸಾಧನೆ ಅನನ್ಯ. ಅವರು ಓದಿನ ಜೊತೆಗೆ ಮಕ್ಕಳು, ಗಂಡ,ಮನೆ ಸಂಸಾರ ಭಾರ ಹೊತ್ತು, ಉದ್ಯೋಗದಲ್ಲಿ ತೊಡಗಿಕೊಂಡರೆ ಅದನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಕೊಡಗಿನ ಗೌರಮ್ಮ,ತ್ರಿವೇಣಿ,ಜಾನಕ ಮ್ಮ,ಅನುಪಮಾ ನಿರಂಜನ,ಸಾವಿತ್ರಮ್ಮ,ಶಾಂತಾದೇ ವಿ ಮಾಳವಾಡ,ಜಯದೇವಿತಾಯಿ ಲಿಗಾಡೆ,ಸುನಂದ ಮ್ಮ,ಕಮಲಾ ಹಂಪನಾ,ವೈದೇಹಿ, ಶೈಲಜಾ ಉಡಚಣ, ಗೀತಾ ನಾಗಭೂಷಣ, ಮೊದಲಾದ ಹಿರಿಯ ತಲೆಮಾರಿ

ನ ಲೇಖಕಿಯರ ಮಧ್ಯ ಇರುವ ಪ್ರಭಾವತಿ ದೇಸಾಯಿ ಕೂಡಾ ಒಬ್ಬರು. ಅವರೊಬ್ಬ ಸೃಜನಶೀಲ ಲೇಖಕಿ.ಪ್ರತಿ ಭಾವಂತ ಬರಹಗಾರ್ತಿ. ಮನೆ,ವೃತ್ತಿ,ಸಂಸಾರ ನಿಭಾ ಯಿಸಿ ಸಾಹಿತ್ಯ ಲೋಕ ಪ್ರವೇಶಿಸಿದ ಅದಮ್ಯ ಸಾಹಿತಿ.

ಪರಿಸರ-ಹುಟ್ಟು:

      ಇವರು ಮೂಲತಃ ರಾಯಚೂರು ಜಿಲ್ಲೆಯವರು. ಅಲ್ಲಿಯ ಗಿರಿಮಲ್ಲಪ್ಪ ಅವರು ಅಕ್ಷರ ಸ್ವಲ್ಪ ಕಲಿತು ವ್ಯಾಪಾರ,ಮಾಡುತ್ತ ಬಂದವರು.ಸಿಂಧನೂರಿಗೆ ಬಂದು ಅಲ್ಲಿಂದ ರಾಯಚೂರಿನಲ್ಲಿ ನೆಲೆಸಿದರು.ಗಂಡು- ಹೆಣ್ಣಿ ನಲ್ಲಿ ಭೇದ ಮಾಡದೇ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲ ಬೇಕೆಂದು ಸದಾ ಜಾತೊರೆದು ಅದರಂತೆ ಕಲಿಸಿದ ರು ಮತ್ತು ಮಕ್ಕಳು ಕಲಿತರು.ಆ ಕಾಲದಲ್ಲಿ ಶಾಲೆ ಕಲಿಕೆ ದುಸ್ತರವಾದಗಲೂ ಕಲಿತದ್ದೇ ಪವಾಡ!.ತಂದೆ ಆಗಲೇ ಅನೇಕ ಕಾವ್ಯಗಳಾದ ಮಹಾಭಾರತ, ರಾಮಾಯಣ, ರಾಜಶೇಖರ ವಿಳಾಸ, ಸೋಮೇಶ್ವರ ಶತಕ,ಸರ್ವಜ್ಞ, ಶರಣರ ವಚನ,ಆಧುನಿಕ ಬೀಚಿ,ಕಟ್ಟಿಮನಿ,ಅನಕೃ, ಭೈರಪ್ಪ,ತ್ರಿವೇಣಿ, ಬೇಂದ್ರೆ, ವಿನಾಯಕ,ಕೆಎಸ್.ಎನ್.ರ ಕಾವ್ಯ,ಕಥೆ,ಕಾದಂಬರಿ ಓದುತ್ತಾ ಅಕ್ಕ ಶೈಲಜಾ ಉಡಚ ಣ ಅವರೊಂದಿಗೆ ಚರ್ಚಿಸುವ ಸಾಹಿತ್ಯ, ಸುಸಂಸ್ಕೃತತೆ 

ಸಾಂಸ್ಕೃತಿಕ ವಾತಾವರಣವನ್ನು ಹೀರಿಕೊಂಡು ಹುಟ್ಟಿ ದವರೇ ಪ್ರಭಾವತಿ ದೇಸಾಯಿ ಅವರು.ಶ್ರೀಮತಿ ಪಾರ್ವತಮ್ಮ ಗಿರಿಮಲ್ಲಪ್ಪ ಹಸ್ಮಕಲ್ ಅವರ ನಾಲ್ಕನೇ ಮಗಳಾಗಿ ದಿನಾಂಕ: ೦೨-೦೭-೧೯೪೭ರಲ್ಲಿ ಜನಿಸಿದ ರು.

ಅಕ್ಷರ ಕಲಿಕೆಯ ಜ್ಞಾನ ಸಂಪಾದನೆಯತ್ತ:

      ‌‌‌‌ಪ್ರಭಾವತಿಯವರು ರಾಯಚೂರಿನ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಕಲಿತರು.ಅದೇ ಹೊತ್ತಿಗೆ ಅವ್ವ ಪಾರ್ವತಮ್ಮರು ಲಿಂಗೈಕ್ಯರಾದರು.ಸಣ್ಣ ಹುಡು ಗಿಯಾದ್ದರಿಂದ ಅಕ್ಕ ಶೈಲಜಾ ಉಡಚಣರು ಕಲಬುರ ಗಿಗೆ ಕರೆ ತಂದು ಸರಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಯಲ್ಲಿ ಎಂಟನೆಯ ತರಗತಿಯಿಂದ ೧೦ ನೆಯ ತರಗತಿ ವರೆಗೆ ಕಲಿತರು.ಪಿಯುಸಿ ಶರಣಬಸವೇಶ್ಚರ ಕಾಲೇಜಿ ನಲ್ಲಿ ಕಲಿತರು.ಹುಬ್ಬಳ್ಳಿ ಮತ್ತು ವಿಜಯಪುರದಲ್ಲಿ ಇವ ರ ಇನ್ನೂಬ್ಬ ಅಕ್ಕರಾಜೇಶ್ವರಿ ಮೇಡಿಕಲ್ ಕಲಿಯುವ ಕೊನೆಯ ವರ್ಷದಲ್ಲಿ ಓದುತ್ತಿದ್ದರು.ಅಲ್ಲಿಯ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ದಲ್ಲಿ ಫ್ಯಾಷನ್ ಡಿಸೈನರ್ ಕಲಿತ ಅವರು ಅದೇ ಹೊತ್ತಿಗೆ ಅನೇಕ ಸಾಹಿತ್ಯ ಕೃತಿಗಳನ್ನು ಓದಿ ಮನನ ಮಾಡಿಕೊಂಡರು.ವೃತ್ತಿಯನ್ನು ನಿರ್ವಹಿ ಸುವಾಗಲೇ ಅಂಜುಮನ್ ಕಾಲೇಜಿನಲ್ಕಿ ಬಿ.ಎ.ಸಮಾ ಜ ಶಾಸ್ತ್ರ ಪದವಿ,ಎಸ್.ಎಸ್.ಮಹಿಳಾ ಕಾಲೇಜಿನಲ್ಲಿ ಹೋಮಸೈನ್ಸ ಮೇಜರ್ ತಗೆದುಕೊಂಡು ಬಿ.ಎ.ಮತ್ತು

ನಿವೃತ್ತರಾದ ಮೇಲೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾ ಲಯದಿಂದ ಎಂ.ಎ.ಕನ್ನಡ ಪದವಿ ಪಡೆದರು.

ವೃತ್ತಿಯಲ್ಲಿನಿಷ್ಠೆ- ಶ್ರದ್ಧೆ: ಪ್ರಭಾವತಿಯವರು ಬಹು ಶ್ರಮಜೀವಿಗಳು.ಸತತ ಅಧ್ಯಯನ, ಓದಿನ ಗ್ರಹಿಕೆ,ನಿಷ್ಠೆ ಯಿಂದಮಾಡಿದ ಅಧ್ಯಯನಕ್ಕೆತಕ್ಕಂತೆ ಇವರಿಗೆ ಸರಕಾ ರಿ ಹುದ್ದೆ ದೊರೆಯಿತು. ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದ ಹೊಲಿಗೆ ಯ ಮುಖ್ಯ ಬೋಧಕರಾಗಿ ವೃತ್ತಿ ಜೀವನಕ್ಕೆ ಡಿಸೆಂಬರ ೧೦೬೯ರಂದು ಕಾಲಿಟ್ಟರು. ಅಂದಿನಿಂದ ಸತತ ೨೦೦೫ ರವರೆಗೆ ಸುಮಾರು ಮೂವತ್ತಾರು ವರ್ಷ ಕಾಯಕ ನಿ ರ್ವಹಿಸಿದ್ದು ಸಾಮಾನ್ಯ ಮಾತಲ್ಲ.ಕಲಿಯಲು ಬಂದ ವಿ ದ್ಯಾರ್ಥಿನಿಯರು ಇವರಿಗಿಂತ ದೊಡ್ಡವರಿದ್ದರು ಪ್ರೀತಿ, ಗೌರವದಿಂದ ನೋಡಿಕೊಂಡವರು.ಎಂದು ವೃತ್ತಿಯಲ್ಲಿ

ಲಂಚ,ಭ್ರಷ್ಟಾಚಾರ, ಹಣ ದೋಚುವ,ಯಾವುದರ ಕಡೆ ಮುಖ ಮಾಡದೇ ಪ್ರಾಮಾಣಿಕತನದಿಂದ ಕರ್ತವ್ಯ ನಿರ್ವಹಿಸಿದ್ದು ಇತರರಿಗೆ ಮಾದರಿಯಾಗಿದೆ.

ಹವ್ಯಾಸಗಳು:ಪ್ರಭಾವತಿ ಮೇಡಂ ಅವರು ಬಹುಮು ಖ ವ್ಯಕ್ತಿತ್ವ. ಪ್ರಾಥಮಿಕ ಶಾಲಾದಿನಗಳಿಂದ ಡಿಗ್ರಿಯವ ರೆಗೆ ಅನೇಕ ಭಾಷಣ,ಚರ್ಚಾಸ್ಫರ್ಧೆ,ಆಶುಭಾಷಣದಲ್ಲಿ ಕ್ರೀಡೆಗಳಲ್ಲಿ ಭಾಗವಹಿ ಪ್ರಥಮ, ದ್ವೀತಿಯ ಸ್ಥಾನ ಪಡೆದವರು.ಆಗ ಸಾಹಿತ್ಯದ ಅನೇಕ ಕಾವ್ಯ, ಕಥೆ, ಕಾದಂಬರಿಗಳನ್ನು ಓದಿದವರು. ಅವಾಗಲೇ ಪ್ರಬಂಧ, ಲೇಖನ,ಕವನ,ಕಥೆಗಳು ಪ್ರಕಟವಾದವು.ಅಂದಿನ ಸ್ಥಳೀಯ ಪತ್ರಿಕೆ,ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.ಇಂತಹ ಅನೇಕ ಹವ್ಯಾಸವನ್ನು ಹೊಂದಿದ್ದರು.

ದಾಂಪತ್ಯ ಜೀವನ:ಸುಸಂಸ್ಕೃತ ಹಸ್ಮಕಲ್ ಮನೆತನದಿಂದ ಬಂದ ಪ್ರಭಾವತಿಯವರು ಅಂತಹ ಮನೆತನದ ಹುಡುಗನ ಆಯ್ಕೆಗೆ ವರಾನ್ವೇಷಣೆ ನಡೆಯಿತು. ಕೊನೆಗೆ ಕಲಬುರಗಿ ಜಿಲ್ಲೆಯ ಅಫಜಲಪು ರ ತಾಲೂಕಿನ ಅರ್ಜುಣಗಿ ಗ್ರಾಮದ ದೇಸಾಯಿ ಮನೆತ ನದ ಶಾಂತಮಲ್ಲಪ್ಪ ಸಂಗಪ್ಪ ದೇಸಾಯಿ ಎಂಬುವರು ಕಮಲಾಪುರದಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿದ್ದರು. ಅವ ರು ಬಿ ಎಸ್ಸಿ, ಬಿಇಡಿ ಪಡೆದ ಅವರು ಆದರ್ಶ ಶಿಕ್ಷಕ. ಮೃದುಮನಸ್ಸಿನ ವ್ಯಕ್ತಿ. ಸರಳ,ಸಾದಾ ಜೀವನ ನಡೆಸಿ ತಮ್ಮ ಮನೆ ಕುಟುಂಬ ಶಾಲೆ ಬಿಟ್ಟು ಬೇರೆ ಕಡೆ ಏನು ಮಾಡದ ಮಾನವ ಪ್ರೇಮಿ. ಇವರೊಂದಿಗೆ ಕಲಬುರಗಿ ಯಲ್ಲಿ ೧೯೭೩ರಲ್ಲಿ ವಿವಾಹವಾದರು. ಇವರಿಗೆಮೂರು ಮಕ್ಕಳು ಒಬ್ಬ ಹೆಣ್ಣು ಮಗಳು,ಇಬ್ಬರ ಗಂಡು ಮಕ್ಕಳು

ಸೊಸೆ,ಅಳಿಯ,ಮೊಮ್ಮಕ್ಕಳು ಜೊತೆಗೆ ಸೇರಿ ತುಂಬು ಆದರ್ಶ ಕುಟುಂಬವಾಗಿದೆ. 

       ಇದರ ನಡುವೆ ೨೦೦೦ರಲ್ಲಿ ತಂದೆ ಗಿರಿಮಲ್ಲಪ್ಪನ ವರು ಲಿಂಗೈಕ್ಯರಾದರು.೨೦೧೦ರಲ್ಲಿ ಅಕ್ಕ ಶೈಲಜಾ ಉಡಚಣ ಲಿಂಗೈಕ್ಯರಾದದ್ದು ಇವರ ಮನಸು ಘಾಷಿ ಗೊಂಡಿತು.ಆದರೂ ಚೇತರಿಸಿಕೊಂಡು ಸಾಹಿತ್ಯ ದತ್ತ ಮುಖ ಮಾಡಿದರು.

ಸಾಹಿತ್ಯ ರಚನೆಗೆ ಕೂಡಿದ ಕಾಲ: 

 ಬಾಲ್ಯದಿಂದ ಪ್ರಾಥಮಿಕ ಹಂತದಿಂದ ಸಾಹಿತ್ಯ ರಚನೆ ಗೆ ತೊಡಗಿದರೂ ಬರಹ ಪ್ರಕಟವಾಗಿ ಕೃತಿ ರೂಪದಲ್ಲಿ ಬಂದಿದ್ದು ೨೦೦೫ರಿಂದ!. ಮೌನ ಕೋಗಿಲೆ ಕಾವ್ಯ, ಹನಿ ಗವಮ,ವಚನ,ಪ್ರಬಂಧ, ಕಥೆ,ಪ್ರವಾಸ ಕಥನ, ಲೇಖನ ಬರೆದು ಪ್ರಕಟಿ ಸಿದರು. ಆದರೆ ಅವರಿಗೆ ಒಲಿದು ಹೆಸ ರು ತಂದಿರುವುದು ಗಜಲ್ ಕ್ಷೇತ್ರದಲ್ಲಿ!.

ಇವರ ಪ್ರಕಟಿತ ಕೃತಿಗಳು 

.೧.ಮೌನ ಕೋಗಿಲೆ.(ಕವನ ಸಂಕಲನ ).೨.ಮುಂಗಾರು ಹನಿ (ಹನಿಗವನ ಸಂಕಲನ ).೩.ರಂಗಸ್ಪಂದನ ಸ್ಪಂದನ (ಸಂಪಾದಿಸುವ ಕೃತಿ ).೪.ಮೌನ ಇಂಚರ( ಕನ್ನಡ ಗಜಗಳು ).೫.ಮೊಬೈಲ್ ಪ್ರಯಾಣ ಹಾಗೂ ಇತರ ಪ್ರಬಂಧಗಳು (ಪ್ರಬಂಧ ಸಂಕಲನ)೬. ಶಾಂತ ಪ್ರಭೆಯ ನವ ವಚನಗಳು (ಆಧುನಿಕ ವಚನಗಳು ) ೭.ಮಧುಸಾರ( ಹನಿಗವನಗಳು,) ೮. ಮುಸ್ಸಂಜೆ (ಕಥಾಸಂಕಲನ ) ೯.ವಚನ ಪ್ರಭೆ ( ಆಧುನಿಕ ವಚನಗಳು ) ೧೦.ಮಿಡಿತ (ಕನ್ನಡ ಗಜಲ್ ಗಳು ) ೧೧.ಪಕ್ಷಿನೋಟ ಲಂಡನ್ (ಪ್ರವಾಸ ಕಥನ ) ೧೨.ಸ್ವಚ್ಛ ಭಾರತ ಹಾಗೂ ಇತರ ಪ್ರಬಂಧಗಳು (ಪ್ರಬಂಧ ಸಂಕಲನ )೧೩.ಮಿಶ್ರ ಕಾವ್ಯ (ಕವನ ಸಂಕಲನ );೧೪ ವಚನ ಮಿಂಚು (ಆಧುನಿಕ ವಚನಗಳು),೧೫. ನೀನಾದ ( ಗಜಲ್ ಗಳು ) ೧೬.ಕಪ್ಪು ಹಣ ಹಾಗೂ ಇತರ ಪ್ರಬಂಧಗಳು (ಪ್ರಬಂಧ ಸಂಕಲನ) ೧೭.ಭಾವಗಂಧಿ (ಕನ್ನಡ ಗಜಲ್ ಗಳು) ೧೮. ನಿನ್ನ ಹೆಜ್ಜೆಗೆ ನನ್ನ ಹೆಜ್ಜೆ (ತರಹಿ ಗಜಲ್ ಗಳು ) ೧೯.ಒಲವ ಹಾಯ್ ದೋಣಿ .(ಕನ್ನಡ ಗಜಲ್ ಗಳು) ೨೦.ಜೀವ ಭಾವದ ಉಸಿರು (ಕನ್ನಡ ಜುಗಲ್ ಬಂದಿ ಗಜಲ್ ಗಳು ) ೨೧. ಒಳನೋಟ ( ೪೦ ಗಜಲ್ ಕೃತಿಗಳ ವಿಶ್ಲೇಷಣೆಯ ಸಂಕಲನ) ಹೀಗೆ ಒಟ್ಟು 2೧ ಸಂಕಲನಗಳು ಇಲ್ಲಿಯವರೆಗೆ ಪ್ರಕಟವಾಗಿವೆ. ೨೨.ಸೆರಗಿಗಂಟಿದ ಕಂಪು( ಗಜಲ್ ಸಂಕಲನ ಅಚ್ಚಿನಲ್ಲಿದೆ,) ೨೩.ಬೆಸೆದ ಭಾವಕೆ ಒಲವ ನಾದ(ಜುಗಲ್ ಬಂದಿ ಗಜಲ್ ಸಂಕಲನ ಅಚ್ಚಿನಲ್ಲಿದೆ) ೨೪..ಪಿಸುಮಾತು(ದ್ವಿಪದಿಗಳು ಅಚ್ಚಿನಲ್ಲಿದೆ) ಇವರ ಮೊದಲ ಗಜಲ್ ಸಂಕಲನ "ಮೌನ ಇಂಚರ" ಮರು ಮುದ್ರಣವಾಗಿದೆ.

ಇವರಿಗೆ ಬಂದ ಪ್ರಶಸ್ತಿಗಳು 

೧. ವಿಜಯಪುರ ಜಿಲ್ಲಾ ಆಡಳಿತವು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. .

೨.ಕರ್ನಾಟಕ ಸರಕಾರ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗೈದವರಿಗೆ ನೀಡುವ ರಾಜ್ಯಮಟ್ಟದ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ನೀಡಿ ಗೌರವಿಸಿದ್ದಾರೆ .

೩.ಅಖಿಲ ಭಾರತ ಕವಿತ್ರಿಯರ ಸಮಾವೇಶನದವರು" ಮೌನ ಇಂಚರ "ಗಜಲ್ ಸಂಕಲನಕ್ಕೆ ರಾಷ್ಟ್ರಮಟ್ಟದ ಮಾ. ಶಾರದಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ .

೪.ಅಖಿಲ ಭಾರತ ಕವಿತ್ರಿಯರ ಸಮಾವೇಶ (ಯುಪಿ )ಯವರು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಡಾಕ್ಟರ್ ಪ್ರವೀಣ್ ಬಾನು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

೫.ರಾಜ್ಯಮಟ್ಟದ ಸಿದ್ದಿ ಸಿರಿ ಪ್ರಶಸ್ತಿಯನ್ನು ಯರನಾಳ ವಿರಕ್ತ ಮಠದ ಶ್ರೀ ಸಂಗನಬಸವ ಸ್ವಾಮೀಜಿಯವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ.

೬. ಇವರ " ಕಪ್ಪು ಹಣ ಹಾಗೂ ಇತರ ಪ್ರಬಂಧಗಳು" ಎಂಬ ಪ್ರಬಂಧ ಸಂಕಲನಕ್ಕೆ ಮಾಣಿಕ್ಯ ಪ್ರಕಾಶನ ಹಾಸನ ಇವರು ರಾಜ್ಯಮಟ್ಟದ ಎನ್ ಶೈಲಜಾ ಹಾಸನ್ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ .

೭.ದಲಿತ ಸಾಹಿತ್ಯ ಪರಿಷತ್ತು ರಾಜ್ಯಘಟ್ಟಕ ಗದಗ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಗದಗ ಇವರು" ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ"ಯನ್ನು ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ .

೮.ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲು ನಾಡು ಪ್ರಕಾಶನ ಕಲಬುರ್ಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದು ಗುರುತಿಸಿ" ಸಾಧಕ ಶ್ರೀ ಪ್ರಶಸ್ತಿ- ೨0೨೩ "ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ .

೯.ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಅನೇಕ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.ರಾಜ್ಯ ಮಟ್ಟದ ಸಂಕ್ರಮಣ ಸಾಹಿತ್ಯ ಸ್ಪದೆ೯. ,ಶ್ರೀ ಗೌರಿ ಪ್ರಕಾಶನ ಮುದ್ದೇಬಿಹಾಳ ಇವರು ನಡೆಸುವ ರಾಜ್ಯ ಮಟ್ಟದ ಸಾಹಿತ್ಯ ಸ್ಪದೆ೯ ಯಲ್ಲಿ ಮೂರು ಸಾರೆ ಬಹುಮಾನ ಪಡೆದ್ದಾರೆ. ಸರದಾರ ದಿ.ಡಾ ಬಸವರಾಜ ನಾಗೂರ ಇವರ ಸ್ಮರಣಾರ್ಥ ವಾಗಿ ಹಮ್ಮಿಕೊಂಡ ಸಾಹಿತ್ಯ ಸ್ಪದೆ೯ಯಲ್ಲಿ ಭಾಗ ವಹಿಸಿ ‌ಬಹುಮಾನವನ್ನು ಪಡೆದಿದ್ದಾರೆ. ಆದರೆ ಈಗ ಪ್ರಶಸ್ತಿ ಗಳು ಮಾರಾಟಕ್ಕೆ ಇಟ್ಟಂತಾಗಿವೆ.

ಇವರ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ ಆತ್ಮಾನು ಸಂಧಾನ ನಮ್ಮನ್ನು ನಾವು ಅರಿತುಕೊಳ್ಳುವುದು . ಲೌಕಿಕ ಪ್ರೀತಿಯಿಂದ ಅಧ್ಯಾತ್ಮಿಕ ಪ್ರೀತಿಯಲ್ಲಿ ಕೊನೆಗೊಳ್ಳುವುದು . ನಿರಾಕಾರನಾದ ಭಗವಂತನೊಂದಿಗೆ ಮಾತನಾಡುವುದು ಮನದ ಭಾವನೆಯನ್ನು ನಿವೇದಿಸಿಕೊಳ್ಳುವುದು ಶರಣ ಸತಿ ಲಿಂಗ ಪತಿ ಭಾವ ಮೈತಾಳುವುದು ,ಮೀರಾ ಮಾಧವನ ಭಕ್ತಿಯಂತೆ ,ರಾಧಾಕೃಷ್ಣರ ಪ್ರೀತಿಯಂತೆ ,ಅಕ್ಕಮಹಾದೇವಿ ಮಲ್ಲಿಕಾರ್ಜುನನ್ನು ಧ್ಯಾನಿಸಿದಂತೆ . ಗಜಲ್ ಎಂದರೆ ಮೃದು, ಮಧುರ ಭಾವನೆಗಳನ್ನು ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಹೇಳುವ ಕಾವ್ಯ . ಗೇಯತೆ ಲಯ,ಮಾಧುರ್ಯ ಉಳ್ಳ ಕಾವ್ಯ ಪ್ರಕಾರವಾಗಿದೆ .ಆತ್ಮವು ತನ್ನ ನೋವು ನಲಿವುಗಳನ್ನು ತನ್ನ ಸುತ್ತ ಹೆಣೆದುಕೊಳ್ಳುವ ಮೋಹಕವಾದ ಇನಿ ದನಿಯ ಪ್ರೇಮಿಗಳ ಪಿಸುಮಾತುಗಳಾಗಿರುತ್ತವೆ . ಗಜಲ್ ಒಂದು ಶಕ್ತಿ, ಗಜಲ್ ದ ಸ್ಥಾಯಿಗುಣವೇ ,ಪ್ರೀತಿ ,ಪ್ರೇಮ, ವಿರಹ ,ಕಾಯುವಿಕೆ ,ಅನುರಾಗ ,ಮೋಹ ,ವ್ಯಾಮೋಹ ಆಧ್ಯಾತ್ಮಿಕವಾಗಿದ್ದು ಈ ವಿಷಯಗಳ ಮೇಲೆ ಮೊದಲು ಗಜಲ್ ಗಳನ್ನು ರಚನೆ ಮಾಡುತಿದ್ದರು ಈಗ ಎಲ್ಲಾ ವಿಷಯಗಳ ಮೇಲೆ ಗಜಲ್ ಗಳು ರಚನೆಯಾಗುತ್ತಿವೆ.ವಿಷಯ ಯಾವುದೇ ಇದ್ದರೂ ಸಹ ಗಜಲ್ ದ ಛಂದಸ್ಸು ಮತ್ತು ಮೃದು ಭಾಷೆ ಬಳಿಸಿ ಗಜಲ್ ರಚಿಸುವುದು ಉತ್ತಮವೆಂದು ಹೇಳುತ್ತಾರೆ

ಕನ್ನಡ ಗಜಲ್ ಬರೆಯುವವ ಸಂಖ್ಯೆ ಈಗ ಹೆಚ್ಚಾಗಿದೆ ವಯಸ್ಸಿನ ಅಂತರವಿಲ್ಲದೆ ಎಲ್ಲಾ ವಯಸ್ಸಿನವರು ಬರೆಯುತ್ತಿದ್ದಾರೆ. ಹೊಸದಾಗಿ ಗಜಲ್ ಬರೆಯುವವರು ಗಜಲ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿನ ಗಜಲ್ ದ ಛಂದಸ್ಸು ಜೊತೆಗೆ ಅಂತರಾತ್ಮದಲ್ಲಿ ಭಾವತೀವ್ರತೆಯನ್ನು ತುಂಬ ಬೇಕು ಅಂದರೆ ಗಜಲ್ ಸೊಗಸಾಗಿ ಓದುಗರ ಮನ ಗೆದ್ದು ಬಹುಕಾಲ ಉಳಿಯುತ್ತದೆಂದು ಪ್ರಭಾವತಿ ದೇಸಾಯಿ ಅವರು ಹೇಳುತ್ತಾರೆ.

ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ,   ಕಲಬುರಗಿ

( ಇಂದು ದಿನಾಂಕ: ೨೫-೦೮-೨೦೨೪ ರಂದು ಕಲಬುರ ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಪ್ರಥಮ ರಾಜ್ಯ ಮಟ್ಟದ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಪ್ರಭಾವತಿ ದೇಸಾಯಿ ಅವರ ಪರಿಚಯ)