ಹಾರಕೂಡ ಶ್ರೀ ಮಠದ ಪ್ರಶಸ್ತಿಗೆ- ಸನ್ಮಾನ ವಿದ್ವತ್ ವಲಯದ ವಿದ್ವಾಂಸರು:ಡಾ.ಎಸ್.ಎಂ.ಹಿರೇಮಠರು-ಡಾ.ಗವಿಸಿದ್ಧಪ್ಪ ಪಾಟೀಲ

ಹಾರಕೂಡ ಶ್ರೀ ಮಠದ ಪ್ರಶಸ್ತಿಗೆ- ಸನ್ಮಾನ ವಿದ್ವತ್ ವಲಯದ ವಿದ್ವಾಂಸರು:ಡಾ.ಎಸ್.ಎಂ.ಹಿರೇಮಠರು-ಡಾ.ಗವಿಸಿದ್ಧಪ್ಪ ಪಾಟೀಲ
ಕಲಬುರಗಿ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದವರು.ಜೊತೆಗೆ ಶಾಸ್ತ್ರ, ಮೀಮಾಂಸೆ, ವಿಮರ್ಶೆ,ಸಂಶೋಧನೆ, ಕಾವ್ಯ,ವಚನ,ವೀರಶೈವ ಸಾಹಿತ್ಯ
ಚರಿತ್ರೆಯಲ್ಲಿ ಸಾಕಷ್ಟು ಸಾಧನೆ ಮಾಡಿ ೩೩೦ ಕ್ಕೂ ಅಧಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ವಿದ್ವತ್ ವಲಯದ ವಿದ್ವಾಂಸರು ಡಾ.ಎಸ್.ಎಂ.ಹಿರೇಮಠ ಎಂದು ಸಾಹಿತಿ- ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ಸರಸ್ವತಿ ಪುರದ ಕಲಾತಪಸ್ವಿ ನಿವಾಸದಲ್ಲಿ ಅವರಿಗೆ ಹಾರಕೂಡ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನದ
ಪ್ರತಿಷ್ಠಿತ ಶ್ರೀ ಚನ್ನ ರೇಣುಕ ಬಸವ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು ಅವರೊಬ್ಬ ಉತ್ತಮ ಆದರ್ಶ ಪ್ರಾಧ್ಯಾಪಕರು, ಚಿಂತಕರು ಅವರ ಸೇವೆಗೆ ಸಂದ ಗೌರವ ಎಂದರು.ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯ ದೇವಿ ಗಾಯಕವಾಡ ಅವರು ನಮಗೆ ವಿದ್ಯಾಗುರುಗಳಾಗಿ ಬೋಧಿಸಿದ ಪಾಠ,ನೀತಿಗಳು ಬದುಕಿದೆ ದಾರಿ ದೀಪವೆಂದ ರು.ಅವರ ಸಾಹಿತ್ಯ ಕನ್ನಡ ನಾಡಿಗೆ ಅಪೂರ್ವ ಅವರಿಗೆ ಈ ರಾಜ್ಯ ಮಟ್ಟದ ಪ್ರಶಸ್ತಿ ೨ ಲಕ್ಷ ರೂಪಾಯಿ ನಗದು,೨ ತೊಲ ಚಿನ್ನದ ಪದಕ ಪ್ರಶಸ್ತಿ ಫಲಕ ಹೊಂದಿದೆ.
ಡಾ.ರಾಜಕುಮಾರ ಮಾಳಗೆ ಪಾಠ,ಪ್ರವಚನ,ವಿದ್ಯಾರ್ಥಿ ಗಳಿಗೆ ಪ್ರೇರಣೆ. ಇಂದು ವಿಶ್ವವಿದ್ಯಾಲಯ ಮೌಲ್ಯ ಕಳೆದು ಹೋಗುತ್ತಿವೆ ಅದಕ್ಕೆ ಅಪವಾದ ಹಿರೇಮಠರು ಎಂದರು.
ರಹಳಕಟ್ಟಿ ರಾಷ್ಟ್ರೀಯ ಬಳಗ ತಾಲೂಕಾಧ್ಯಕ್ಷ ಆಕಾಶ ತೆಗನೂರು ಇದ್ದರು.
ಡಾ.ಸಿದ್ಧಪ್ಪ ಹೊಸಮನಿ ಸ್ವಾಗತಿಸಿದರು, ಡಾ.ಶೀಲಾದೇವಿ ಬಿರಾದಾರ, ನಿರೂಪಿಸಿದರು ಡಾ.ಪೀರಪ್ಪ ಸಜ್ಜನ ವಂದಿಸಿದರು
ವರದಿ ಡಾ .ಅವಿನಾಶ S ದೇವನೂರ