ಜಿ ಎಸ್ ಟಿ ಸರಳೀಕರಣಕ್ಕೆ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಅಭಿನಂದನೆ

ಜಿ ಎಸ್ ಟಿ ಸರಳೀಕರಣಕ್ಕೆ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಅಭಿನಂದನೆ

ಜಿ ಎಸ್ ಟಿ ಸರಳೀಕರಣಕ್ಕೆ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಅಭಿನಂದನೆ

ಭಾರತೀಯರಿಗೆ ಮೋದಿ ದೀಪಾವಳಿ ಗಿಫ್ಟ್

ಕಲಬುರಗಿ : ಪ್ರಧಾನಿನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಡವರು, ರೈತರು ರೋಗಿಗಳಿಗೆ ಅನುಕೂಲವಾಗುವಂತೆ ಜಿ ಎಸ್ ಟಿ ಬಗ್ಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ ಮತ್ತು ಭಾರತೀಯರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.

  ಕಲಬುರಗಿಯಲ್ಲಿ ಗುರುವಾರ (ಸೆಪ್ಟೆಂಬರ್ 4ರಂದು) ಸುದ್ದಿಗಾರರ ಜೊತೆ ಮಾತನಾಡಿ ಎಲ್ಲಾ ಕ್ಯಾನ್ಸರ್ ಔಷಧಿಗಳು ಸೇರಿದಂತೆ 33 ಜೀವ ರಕ್ಷಕ ಔಷಧಿಗಳು ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿರುವುದು ಬಡಬಗ್ಗರ,ರೈತರ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಮೋದಿ ಸರ್ಕಾರಕ್ಕಿರುವ ಕಾಳಜಿಯನ್ನು ತೋರಿಸುತ್ತದೆ. ಇದಕ್ಕಾಗಿ ಮಾಜಿ ಸಂಸದನಾಗಿ ಅಲ್ಲ ಒಬ್ಬ ವೈದ್ಯನಾಗಿ ಕೂಡಾ ಈ ಸರಳಿಕರಣ ತೆರಿಗೆ ವ್ಯವಸ್ಥೆಗೆ ನಾನು ತುಂಬಾ ಹರ್ಷ ವ್ಯಕ್ತಪಡಿಸುತ್ತೇನೆ ಹಾಗೂ ಪ್ರಧಾನ ಮಂತ್ರಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

   ಜನಸಾಮಾನ್ಯರು ಬಳಸುವ ಎಣ್ಣೆ ಸಾಬೂನು,ಟೂತ್ ಪೇಸ್ಟ್, ಶುಚಿತ್ವ ಉತ್ಪನ್ನ, ಪಾತ್ರೆಗಳು,ಸಿದ್ಧ ಉಡುಪುಗಳು, ಕರಿದ ಖಾರ ತಿಂಡಿಗಳು, ಪಾದರಕ್ಷೆಗಳು ಹೀಗೆ ಎಲ್ಲವುಗಳಿಗೆ ವಿನಾಯಿತಿ ನೀಡಿ ಬಡಬಗ್ಗರಿಗೆ ಮತ್ತು ಜನಸಾಮಾನ್ಯರಿಗೆ ಮೋದಿಯವರು ನೆರವು ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಸಾಮಾನ್ಯ ನಾಗರಿಕರ ಜೀವನ ಸುಧಾರಣೆಯತ್ತ ಸಾಗುವುದಲ್ಲದೆ ವ್ಯಾಪಾರೋದ್ಯಮಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ. ಶೇಕಡ 12 ಮತ್ತು ಶೇಕಡ 28 ಹೀಗೆ 2 ಜಿ ಎಸ್ ಟಿ ಸ್ಲಾಬ್ ಗಳನ್ನು ರದ್ದು ಮಾಡಿರುವುದರಿಂದ ಅಗತ್ಯ ಸಾಮಾನ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿತ ಉಂಟಾಗುವುದಲ್ಲದೆ ಸರಕುಗಳು ಹೆಚ್ಚು ಕೈಕೆಟ ಕುವಂತಾಗಿದೆ. ಜನಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದ ಈ.ಸಾಲೀಕರಣ ವಿಶೇಷ ಕ್ರಮ ಎಂದು ಡಾ.ಜಾಧವ್ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪರಿಸ್ಕೃತಗೊಂಡ ಜಿ ಎಸ್ ಟಿ ದರಗಳು ನವರಾತ್ರಿಗೆ ನೀಡಿದ ಕೊಡುಗೆಯಾಗಿದ್ದು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವುದರಿಂದ ಭಾರತೀಯರು ನವರಾತ್ರಿ ಮತ್ತು ದೀಪಾವಳಿ ಹಬ್ಬವನ್ನು ಸಂತಸದಿಂದ ಆಚರಿಸಲು ಮೋದಿ ಅವರು ನೀಡಿದ ದೊಡ್ಡ ಗಿಫ್ಟ್ ಎಂದು ಡಾ. ಉಮೇಶ್ ಜಾಧವ್ ಬಣ್ಣಿಸಿದರು.