ಬುಡಗಟ್ಟು ಸಮುದಾಯದ ಜನರಿಗೆ ಗೌರವ ಧನ , ಮೀಸಲಾತಿಗಾಗಿ ಪ್ರತಿಭಟನೆ

ಬುಡಗಟ್ಟು ಸಮುದಾಯದ ಜನರಿಗೆ ಗೌರವ ಧನ , ಮೀಸಲಾತಿಗಾಗಿ ಪ್ರತಿಭಟನೆ

ಕಲಬುರಗಿ: ನಾಡಿನಾದ್ಯಂತ ಇರುವ ಬುಡಗಟ್ಟು ಸಮುದಾಯದ ಜನರಿಗೆ ಗೌರವ ಧನ, ಮೀಸಲಾತಿ ಸೌಲಭ್ಯ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಬುಡಗಟ್ಟು ಸಮುದಾಯಗಳ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತಿನಿಂದ ಜಗತ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಿದರು. 

ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಾಹಿತ್ಯ ಪರಿಶತ್ (ರಿ) ಕಲಬುರಗಿ. ತಲೆತಲಾಂತರದಿAದ ನಾಡಿನಾದ್ಯಂತ ಬುಡಕಟ್ಟು ಸಮುದಾಯಗಳಲ್ಲಿ ಬರುವ ಬೆಸ್ತ ಕೋಲಿ ಟೋಕರಿ ಕೋಲಿ, ನಾಯ್ಕಡು, ಕಬ್ಬಲಿಗ, ಕೋಲಿ ಜನಾಂಗದ ವಾಲಿಕಾರ, ತಳವಾರ, ಜಮಾದಾರ, ಹೆಸರಿನ ಇವರು ಮಾತ್ರ ಜೋಕುಮಾರನ ಆರಾಧನೆ ನಾಡಿನಾದ್ಯಂತ ಈ ಸಮುದಾಯದ ಹೆಣ್ಣು ಮಕ್ಕಳು ಬುಟ್ಟಿಯಲ್ಲಿ ಇಟ್ಟು ಜೋಕುಮಾರ ಸ್ವಾಮಿಯನ್ನು ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಇವರ ರ‍್ಥಿಕ ಪರೀಸ್ಥಿತಿ ಹದಗೆಟ್ಟಿದೆ ಅದಕ್ಕಾಗಿ ಈ ಜೋಕುಮಾರ ಸ್ವಾಮಿಯ ಸಂಪ್ರದಾಯ ಪರಂಪರೆಯನ್ನು ಕಾಪಾಡುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. 

ಇವರಿಗೆ ರ‍್ಷಿಕ ಪ್ರತಿ ಗ್ರಾಮಗಳಿಗೆ ತಲಾ ರೂ.51,000/- ರೂಪಾಯಿ ಆಚರಣೆ ಮಾಡುವ ಗ್ರಾಮಗಳಿಗೆ ಗೌರವ ಧನ ಸರಕಾರದಿಂದ ಕೊಡಬೇಕು, ಈ ಜನಾಂಗಕ್ಕೆ ಸಂವಿಧಾನ ಬದ್ಧವಾಗಿ ಅಗತ್ಯವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯ ಯಾವುದೇ ಅಡೆ ತಡೆ ಇಲ್ಲದೆ ಸಿಗುವಂತೆ ಸರಕಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಬೇಕು, ಬುಡಕಟ್ಟು ಸಮುದಾಯದ ಈ ಜನಾಂಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕುಲಕಸುಬಿನ ಕಲೆ, ನೃತ್ಯ, ಜಾನಪದ ಹಾಡುಗಾರರಿಗೆ ಪ್ರೋತ್ಸಾಹಿಸಲು ಪ್ರತಿ ತಿಂಗಳು ಮಾಸಾಸನ ಕೊಡಬೇಕು, ಈ ಜನಾಂಗದ ನಾಡಿನಾದ್ಯಂತ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಈ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಯಾವುದೇ ಪಟಭದ್ರ ಶಕ್ತಿಗಳಿಗೆ ಸರಕಾರ ಕಿವಿ ಕೊಡದೇ ಮುಕ್ತವಾಗಿ ರಾಜ್ಯದಲ್ಲಿ ಈ ಬುಡಕಟ್ಟು ಸಮುದಾಯಗಳಲ್ಲಿ ಬರುವ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಕೊಡಬೇಕು. ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ದೊಡ್ಲಾ ಪಂಡರಿ, ಡಾ. ಟಿ.ಡಿ ರಾಜ್, ಜಯಶ್ರೀ ಕಟ್ಟಿಮನಿ, ದಶರಥ ತಳವಾರ, ರವಿಕುಮಾರ ತಳವಾರ, ಅರ್ಜುನ ಬಿರಾದಾರ, ಶರಣಪ್ಪ ತಳವಾರ, ಸೂರ್ಯಕಾಂತ ತಳವಾರ, ಸಾಬಣ್ಣ ತಳವಾರ, ಇಂದುಬಾಯಿ, ಹೊನ್ನಮ್ಮ ಸಮುದಾಯದವರು ಸೇರಿದಂತೆ ಇನ್ನಿತರರಿದ್ದರು.