ಹೈ. ಕ. ಶಿ. ಸಂಸ್ಥೆ ಕಲಬುರಗಿ ಹಾಗೂ ಝೈನ್ ಗ್ಲೋಬಲ್ (UK) ಲಿಮಿಟೆಡ್ ಸಂಸ್ಥೆಯು ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಒಪ್ಪಂದ
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಕಲಬುರಗಿ ಹಾಗೂಝೈನ್ ಗ್ಲೋಬಲ್ (UK) ಲಿಮಿಟೆಡ್ ಸಂಸ್ಥೆಯು ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಒಪ್ಪಂದ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಕಲಬುರ್ಗಿ ಹಾಗೂ ಝೈನ್ ಗ್ಲೋಬಲ್ UK ಸಂಸ್ಥೆಗಳ ನಡುವೆ ಇಂದು ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಒಪ್ಪಂದ ಏರ್ಪಟ್ಟಿತು. ಈ ಎರಡು ಸಂಸ್ಥೆಗಳ ಸಹಕಾರದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಶೈಕ್ಷಣಿಕ ಕಾರ್ಯ ಉತ್ತೇಜಿಸುವುದು, ಇದರ ಉದ್ದೇಶವಾಗಿದೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಶಿಕ್ಷಣ ಅವಕಾಶಗಳನ್ನು ಸುಲಭವಾಗಿ ಮತ್ತು ಉತ್ತಮವಾಗಿ ಒದಗಿಸಲು ಈ ಒಪ್ಪಂದ ಅನುಕೂಲ ಒದಗಿಸಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಹೇಳಿದರು
ಈ ಒಪ್ಪಂದದಿಂದಾಗಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಅವಕಾಶಗಳು ಸಿಗುತ್ತವೆ ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಜಾಗತೀಕ ಮಟ್ಟದಲ್ಲಿ ಪೈಪೋಟಿ ನೀಡಲು ಅನೂಕೂಲವಾಗುತ್ತದೆ ಹಾಗೂ ಕಲಬುರ್ಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಅನಕೂಲವಾಗಲಿದೆ. ಜಾಗತೀಕ ಕ್ಷೇತ್ರದಲ್ಲಿ ನಮ್ಮ ವಿಧ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಸ್ಕಾಲರ್ಷಿಪ್ ಗಳು ದೊರೆಯಲಿದ್ದು ಉನ್ನತ ಶಿಕ್ಷಣಕ್ಕೆ ಅನೂಕೂಲವಾಗಲಿದೆ ಆದ್ದರಿಂದ ನಾನು ಇಂದು ಅತ್ಯಂತ ಸಂತೋಷದಿಂದ ಈ ಒಪ್ಪಂದಕ್ಕೆ ನಾನು ಸಹಿ ಹಾಕಿರುವೆ ಎಂದು ಹೇಳಿದರು. ಝೈನ ಗ್ಲೋಬಲ್ ಯುಕೆ ಲಿಮಿಟೆಡ್ ನ ಶ್ರೀ ಶಜ್ಧುಲ್ ಇಸ್ಲಾಂ ಹಾಗೂ ನಿರ್ದೆಶಕರು ಎರಡು ಸಂಸ್ಥೆಗಳು ಪರಸ್ಪರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕೂಲ ಒದಗಿಸಲಿದೆ ಎಂದು ಹೇಳಿದರು. ಒಪ್ಪಂದದ ಕರಾರು ಪತ್ರಗಳನ್ನು ಪರಸ್ಪರ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಶ್ರೀ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ ಮಹಾದೇವಪ್ಪ ರಾಂಪೂರೆ, ಡಾ ಶರಣಬಸಪ್ಪ ಹರವಾಳ, ಶ್ರೀ ಸಾಯಿನಾಥ ಪಾಟೀಲ್,ಡಾ ಅನಿಲಕುಮಾರ ಪಟ್ಟಣ, ಡಾ ಕಿರಣ್ ದೇಶಮುಖ್, ಶ್ರೀ ನಿಶಾಂತ್ ಎಲಿ, ಪಿಡಿಎ ಇಂಜಿನಿಯರಿಂಗ್ ಕಾಲೇಜು ಕಲಬುರ್ಗಿ, ಸರ್ ಎಂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ರಾಯಚೂರು, ಮಾತೋಶ್ರೀ ತಾರಾ ಬಾಯಿ ರಾಂಪೂರೆ ಫಾರ್ಮಸಿ ಕಾಲೇಜು, ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯ ಹಾಗೂ ನರ್ಸಿಂಗ್ ಕಾಲೇಜಿನ ಮುಖ್ಯಸ್ಥರು ಈ ಒಡಂಬಡಿಕೆ ಒಪ್ಪಂದ ಕಾರ್ಯದಲ್ಲಿ ಭಾಗವಹಿಸಿದ್ದರು