ಮಹಿಳೆಯರು ಸ್ವಾವಲಂಬಿಗಳಾಗಬೇಕು ರೇಣುಕಾ.
ಮಹಿಳೆಯರು ಸ್ವಾವಲಂಬಿಗಳಾಗಬೇಕು ರೇಣುಕಾ.
ಶಹಾಪುರ : ಧರ್ಮಸ್ಥಳ ಮಂಜುನಾಥ ಸಂಘದ ವತಿಯಿಂದ ಮಹಿಳೆಯರು ಸಾಲ ಪಡೆದು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕಾರ್ಯಕ್ರಮದ ಸಂಯೋಜಕಿ ರೇಣುಕಾ ಹೇಳಿದರು.
ನಗರದ ಚಿಕ್ಕಮಠ ಶಿಕ್ಷಣ ಸಂಸ್ಥೆಯಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಜರುಗಿದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ದಿನನಿತ್ಯದ ಖರ್ಚು ಕಡಿಮೆ ಮಾಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಹಣ ಉಳಿತಾಯ ಮಾಡುವುದಲ್ಲದೆ ಮುಂದಿನ ನಮ್ಮ ಜೀವನಕ್ಕೆ ಪೂರಕವಾಗಿ ಮತ್ತು ಆರೋಗ್ಯಕರ ಸಮಾಜಕ್ಕಾಗಿ ವಿನಯೋಗಿಸುವಂತೆ ಉಳಿಸಿಕೊಳ್ಳಬೇಕು.ಎಂದು ನುಡಿದರು
ಈ ಸಂದರ್ಭದಲ್ಲಿ ಸಂಘದ ಮೇಲ್ವಿಚಾರಾದ ಸವಿತಾ ಟೋಕಾಪುರ, ನೀಲಮ್ಮ ಚೌದ್ರಿ,ಸಂಸ್ಥೆಯ ಅಧ್ಯಕ್ಷರಾದ,ಮಹಾನಂದ ಚಿಕ್ಕಮಠ, ಗಂಗಾ ಹಾಗೂ ಇನ್ನಿತರರು ಜೊತೆಗಿದ್ದರು.