ಇ-ಸಂಪನ್ಮೂಲಗಳ ಬಳಕೆ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿದೆ ಡಾ ಸೋಮರಾಯ ತಳ್ಳೋಳ್ಳಿ
ಇ-ಸಂಪನ್ಮೂಲಗಳ ಬಳಕೆ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿದೆ ಡಾ ಸೋಮರಾಯ ತಳ್ಳೋಳ್ಳಿ
ಕಲಬುರ್ಗಿ ನ 17: ಇ-ಸಂಪನ್ಮೂಲಗಳ ಬಳಕೆ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿದೆ ಎಂದು ವಿ ಟಿ ಯು ಬೆಳಗಾವಿಯ ಲೈಬ್ರರಿ ಸಂಚಾಲಕರಾದ ಡಾ ಸೋಮರಾಯ ತಳ್ಳೋಳ್ಳಿ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಲೈಬ್ರರಿ ವಿಭಾಗ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಜರುಗಿದ ವಿಟಿಯು ಕನ್ಸೋರಟಿಯಂ ಈ ರಿಸೋರ್ಸ್ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕನ್ಸೋರ್ಟಿಯಂ ಇ-ಸಂಪನ್ಮೂಲಗಳು ಸಂಶೋಧನೆ ಮತ್ತು ಶೈಕ್ಷಣಿಕ ಆಸಕ್ತಿಗಳಿಗೆ ಬಹಳ ಮುಖ್ಯವಾಗಿವೆ
ಇದು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮಾನದಂಡಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಸಂಬಂಧಿತ ವಿಭಾಗಗಳಿಗೆ ಸೇರಿದ ಇ-ಪುಸ್ತಕಗಳು ಮತ್ತು ಇ-ಜರ್ನಲ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಂಪನ್ಮೂಲಗಳಿಗೆ ಸುಲಭವಾಗಿ ಪ್ರವೇಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸದಸ್ಯರಿಗೆ ಜಾಗತಿಕ ಮತ್ತು ಕೈಗಾರಿಕಾ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ಜ್ಞಾನವನ್ನು ನವೀಕರಿಸಲು ವಿಶ್ವ ದರ್ಜೆಯ ಇ-ಜರ್ನಲ್‌ಗಳನ್ನು ಒದಗಿಸುತ್ತದೆ ಎಂದು ಹೇಳಿದರು. ಲೈಬ್ರರಿಗಳಿಗೆ ಪ್ರತ್ಯೇಕವಾಗಿ ಎಲ್ಲಾ ಸಂಪನ್ಮೂಲಗಳನ್ನು ಖರೀದಿಸುವ ಬದಲು, ಕನ್ಸೋರ್ಟಿಯಂ ಮೂಲಕ ರಿಯಾಯಿತಿ ದರದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರದ ಅಧ್ಯಕ್ಷರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಡಾ ಅನಿಲಕುಮಾರ ಪಟ್ಟಣ,ಡಾ ಕಿರಣ್ ದೇಶಮುಖ್ ಕಾರ್ಯಕ್ರಮದ ಸಂಘಟನಾ ಧಿಕಾರಿ ಡಾ ಮಲ್ಲಿಕಾರ್ಜುನ ವಡ್ಡನಕೇರಿ ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟೆ, ಡಾ ಭಾರತಿ ಹರಸೂರು, ಲೈಬ್ರರಿಯನ್ ಡಾ ಸಾವಿತ್ರಿ ಪಟ್ಟಣ. ಪ್ರಾಚಾರ್ಯರಾದ ಡಾ ಸಿದ್ಧರಾಮ ಪಾಟೀಲ್ ಸ್ವಾಗತಿಸಿದರು, ವಿಶ್ವನಾಥ ಪ್ರಾರ್ಥಿಸಿದರು ಪ್ರೋ ಕಾವೇರಿ ಕೋರಿ ,ಪ್ರೋ ಸೌಮ್ಯ ಗಾಯತೊಂಡೆ ಕಾರ್ಯಕ್ರಮ ನಿರೂಪಿಸಿದರು
