ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯಕೂಟಕ್ಕೆ ಕಲಬುರಗಿಯಲ್ಲಿ ಭವ್ಯ ಆರಂಭ
ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯಕೂಟಕ್ಕೆ ಕಲಬುರಗಿಯಲ್ಲಿ ಭವ್ಯ ಆರಂಭ
ಕಲಬುರಗಿ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಎರಡು ದಿನಗಳ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯಕೂಟವು ಭವ್ಯವಾಗಿ ಆರಂಭಗೊಂಡಿತು.
ಕರ್ತವ್ಯಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ವಿವಿಧ ಘಟಕಗಳಿಂದ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ತರಬೇತಿ ಪಡೆದ ಪೊಲೀಸ್ ಶ್ವಾನಗಳು ತಮ್ಮ ಕೌಶಲ್ಯ ಪ್ರದರ್ಶನದ ಮೂಲಕ ಗಮನ ಸೆಳೆದವು.
ಈ ಸಂದರ್ಭ ಹಿರಿಯ ಪೊಲೀಸ ಅಧಿಕಾರಿ ಶರಣಪ್ಪ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಸ್ತಿನ ಮೆರವಣಿಗೆ, ಶ್ವಾನ ಪಥಕದ ಪ್ರದರ್ಶನ, ಕರ್ತವ್ಯ ನೈಪುಣ್ಯ ಪರೀಕ್ಷೆ ಮುಂತಾದ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಎರಡು ದಿನಗಳ ಕಾಲ ಕಾರ್ಯಕ್ರಮ ಮುಂದುವರಿಯಲಿದೆ.
ಕರ್ತವ್ಯಕೂಟದ ಉದ್ದೇಶ ಪೊಲೀಸ್ ಸಿಬ್ಬಂದಿಯ ಶಾರೀರಿಕ ಸಾಮರ್ಥ್ಯ, ಶಿಸ್ತಿನ ನೈಪುಣ್ಯ ಹಾಗೂ ಕರ್ತವ್ಯ ಬದ್ಧತೆಯನ್ನು ಉತ್ತೇಜಿಸುವುದಾಗಿದೆ ಎಂದು ಆಯೋಜಕರು ತಿಳಿಸಿದರು.
