ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವಕ್ಕೆ ಆನ್‌ಲೈನ್ ಚಾಲನೆ

ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವಕ್ಕೆ ಆನ್‌ಲೈನ್ ಚಾಲನೆ

ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವಕ್ಕೆ ಆನ್‌ಲೈನ್ ಚಾಲನೆ

ಜನವರಿ 5ರಂದು ಕಲಬುರಗಿಯಲ್ಲಿ ಕಾರ್ಯಕ್ರಮ

ಕಲಬುರಗಿ: ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವಕ್ಕೆ ಆನ್‌ಲೈನ್ ಮುಖಾಂತರ ಚಾಲನೆ ನೀಡುವ ಕಾರ್ಯಕ್ರಮವನ್ನು ದಿನಾಂಕ 05-01-2026 ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಮಾದಿಗ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ, ಸಮಾಜದ ಸಬಲೀಕರಣ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಕರ್ನಾಟಕ ಮಾದರ ಮಹಾಸಭೆಯನ್ನು ರಾಜ್ಯಮಟ್ಟದಲ್ಲಿ ಎಲ್ಲಾ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ಬೆಳವಣಿಗೆ, ಸಮಾಜ ಎದುರಿಸುತ್ತಿರುವ ಕುಂದುಕೊರತೆಗಳು ಹಾಗೂ ಇನ್ನಿತರ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳು, ನಗರ ಹಾಗೂ ಬಡಾವಣೆಗಳಿಂದ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು, ಸಂಘಟನೆಗಳ ನಾಯಕರು, ವಿದ್ಯಾರ್ಥಿಗಳು, ಉದ್ಯೋಗಸ್ಥರು, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು, ಸಮಾಜದ ಮುಖ್ಯಸ್ಥರು ಸೇರಿದಂತೆ ಸಮಸ್ತ ಸಮಾಜಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಗೋಪಾಲ್ರಾವ್ ಕಟ್ಟಿಮನಿ, ಸಮಾಜ ಮುಖಂಡರಾದ ಶ್ಯಾಮ್ ನಾಟೇಕರ್,ಲಿಂಗರಾಜ ತಾರಫೈಲ್,ರಾಜು ವಾಡೆಕರ್,ದಶರಥ್ ಕಲಗುರತಿ,ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ವರದಿ ಚಂದ್ರಶೇಖರ್ ಕಲ್ಯಾಣ ಕಹಳೆ