ಬಾ ಗೆಳತಿ ಜೊತೆಯಾಗು ಈ ಜೀವಕ್ಕೆ

ಬಾ ಗೆಳತಿ ಜೊತೆಯಾಗು ಈ ಜೀವಕ್ಕೆ

ಬಾ ಗೆಳತಿ ಜೊತೆಯಾಗು ಈ ಜೀವಕ್ಕೆ

ಬಾ ಗೆಳತಿ…

ಜೀವನ ಪಯಣಕ್ಕೆ,

ಸಾಯುವವರೆಗೂ ಜೊತೆಯಾಗು,

ಸರಿ–ತಪ್ಪುಗಳಲಿ ತಿದ್ದಿ ಹೇಳುವ

ಆತ್ಮೀಯ ಸಂಗಾತಿಯಾಗು.

ನೀನು ಅಂದುಕೊಂಡಷ್ಟು

ನಾನು ಒಳ್ಳೆಯವನು ಅಲ್ಲವೆಂದು ತಿಳಿದರೂ,

ನಿನ್ನನ್ನು ಕೈ ಬಿಡುವ ಕನಸೇ ನನಗಿಲ್ಲ;

ಈ ಹೃದಯವು ಮೊದಲೇ ತೀರ್ಮಾನಿಸಿದೆ,

ಈ ಬದುಕಿಗೆ ನೀನೇ ಒಡತಿ.

ಪ್ರೀತಿ ಹೇಳುವೆನು ನಿನಗೆ,

ಆದರೆ ಹೇಗೆ ಪ್ರೀತಿಸಬೇಕು ಎಂಬ ಪಾಠ

ನನಗಿಲ್ಲ ಗೊತ್ತಿಲ್ಲ,

ಆ ಪಾಠ ಹೇಳುವ ಗುರುವಾಗು ನೀನೆ.

ಸಿಗುವೆಯೋ ನೀನು,

ಸಿಗುವುದಿಲ್ಲವೋ ಗೊತ್ತಿಲ್ಲ ನನಗೆ;

ಆದರೂ ಬರೆದಿಟ್ಟಿದ್ದೇನೆ ಮನದ ಪುಸ್ತಕದಲ್ಲಿ

ನಮ್ಮ ಭವಿಷ್ಯದ ಕನಸುಗಳು.

ಒಮ್ಮೆ ನೀನು ಒಪ್ಪಿದರೆ,

ಈ ಜನ್ಮದಲ್ಲಿ ಕೈ ಹಿಡಿದರೆ,

ಸಂತೋಷ–ದುಃಖ, ಸುಖ–ಕಷ್ಟ ಎಲ್ಲದರಲ್ಲೂ

ಜೊತೆಯಾಗಿದ್ದರೆ…

ಆಗ ನೀನು ಕೇವಲ ಮಡದಿ ಅಲ್ಲ,

ನನ್ನ ತಾಯಿ, ನನ್ನ ಜೀವಾಳ.

ಲೇಖಕ -ಜೀವನ್ ಸುರೇಶ ಗಾಯಕವಾಡ 

            ಪರತಾಪೂರ, ಬಸವಕಲ್ಯಾಣ, ಬೀದರ