ಡಿಗ್ಗಿ ಬಿಜೆಪಿ ಬೂತ ಅಧ್ಯಕ್ಷರಾಗಿ ಸಂದೀಪ ಡಿ. ಪಾಟೀಲ ಅವಿರೋಧ ಆಯ್ಕೆ

ಡಿಗ್ಗಿ ಬಿಜೆಪಿ ಬೂತ ಅಧ್ಯಕ್ಷರಾಗಿ ಸಂದೀಪ ಡಿ. ಪಾಟೀಲ ಅವಿರೋಧ ಆಯ್ಕೆ

ಡಿಗ್ಗಿ ಬಿಜೆಪಿ ಬೂತ ಅಧ್ಯಕ್ಷರಾಗಿ ಸಂದೀಪ ಡಿ. ಪಾಟೀಲ ಅವಿರೋಧ ಆಯ್ಕೆ

ಮಲ್ಲಮ್ಮ ನುಡಿ ವಾರ್ತೆ(ಪರಮೇಶ ರಾಂಪುರೆ)

ಕಮಲನಗರ:ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ರವಿವಾರ ನಡೆದ ಬಿಜೆಪಿ ಗ್ರಾಮ ಘಟಕದ ಸಭೆಯಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರ ಒಪ್ಪಿಗೆ ಮೇರಿಗೆ ಡಿಗ್ಗಿ ಬೂತ 147 ರ ಅಧ್ಯಕ್ಷರಾಗಿ ಸಂದೀಪ ದೇವೇಂದ್ರ ಪಾಟೀಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪಕ್ಷದ ಹಿರಿಯ ಮುಖಂಡ ಕಮಲನಗರ ಬಿಜೆಪಿ ಚುನಾವಣೆ ಅಧ್ಯಕ್ಷ ರಂಗರಾವ ಜಾಧವ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಬೂತ ಮಟ್ಟದ ಸಂಘ ತಳಪಾಯದಂತೆ, ಬಹಳ ಮಹತ್ವದ ಕೆಲಸ ಸಂದೀಪ ಪಾಟೀಲ ಅವರು ಎಲ್ಲರ ವಿಶ್ವಾಸತೆಗೆದುಕೊಂಡು ಮಾಡಬೇಕು ಎಂದು ಸಲಹೇ ನೀಡಿದರು.

ಕಮಲನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಬಂಟಿ ರಾಂಪುರೆ ಮಾತನಾಡಿ, ಪಕ್ಷ ನಿಷ್ಠೆನಿಂದ ಕೆಲಸ ಮಾಡಿದರೆ ಮುಂಬರುವ ದಿನಗಳಲ್ಲಿ ನಿಮ್ಮಗೆ ಉನ್ನತ ಸ್ಥಾನ ಪಕ್ಷ ಖಂಡಿತ ನೀಡುತ್ತದೆ. ನಮ್ದು ಕಾರ್ಯಕರ್ತರ ಪಕ್ಷ ಎಂದು ಹೇಳಿದರು.

ನೂತನ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಪಕ್ಷ ನನ್ನ ಮೇಲೆ ವಿಸ್ವಾಸ ಇಟ್ಟು ನನ್ನ ಹೆಗಲ ಮೇಲೆ ಜವಾಬ್ದಾರಿ ನೀಡಿದೆ, ಹಾಗಾಗಿ ಪಕ್ಷ ನಿಷ್ಠೆ ಮತ್ತು ಸಾಮಾಜಿಕ ಸೇವೆಯನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತೆನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಪಾಟೀಲ, ಹಿರಿಯರಾದ ಗುರುಬಸಪ್ಪ ರಾಂಪುರೆ, ಯುವರಾಜ ಚಾಂಡೇಶ್ವರೆ,ಸತೀಶ ರಾಂಪುರೆ, ಉಮಾಕಾಂತ ಸ್ವಾಮಿ,ಯುವರಾಜ ರಾಂಪುರೆ,ಕಾಶೀನಾಥ ಕುಂಬಾರಗಿರೆ, ಸಂತೋಷ ಬನವಾಸೆ, ಅವಿನಾಶ ಹರಪಾಳೆ,ಸುಭಾಷ ಬಿರಾದಾರ, ರಾಜಶೇಖರ ರಾಂಪುರೆ, ಚನ್ನಬಸವ ಕುಂಬಾರಗಿರೆ, ಅಭಿಜಿತ ರಾಂಪುರೆ, ಸುನಿಲ ಚಾಂಡೇಶ್ವರೆ, ನಾಗರಾಜ ಸ್ವಾಮಿ ಸೇರಿದಂತೆ ಇನ್ನಿತರ ಇದ್ದರು.