ಕಲ್ಯಾಣ ಕರ್ನಾಟಕದ ಶಿಕ್ಷಣದ ಕ್ರಾಂತಿಸೂರ್ಯ ; ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ : ಜಗದ್ಗುರು ಪೂಜ್ಯ ಜಗದ್ಗುರು ಸಾರಂಗಧರ ಶ್ರೀ
ಕಲ್ಯಾಣ ಕರ್ನಾಟಕದ ಶಿಕ್ಷಣದ ಕ್ರಾಂತಿಸೂರ್ಯ ; ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ : ಜಗದ್ಗುರು ಪೂಜ್ಯ ಜಗದ್ಗುರು ಸಾರಂಗಧರ ಶ್ರೀ
ಕಲಬುರಗಿ, ಆಗಸ್ಟ್ 28 ಬಸವಣ್ಣನವರ ತತ್ವ ಹಾಗೂ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿವುದರೊಂದಿಗೆ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಸೂರ್ಯ ಲಿಂ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಎಂದು ಜಗದ್ಗುರು ಪೂಜ್ಯ ಡಾ ಸಾಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.
ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಲಿಂ ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಅವರ ನುಡಿ ಪುಷ್ಪಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಪೂಜ್ಯರು ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿಯವರು ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಹಾಗೂ ಶ್ರೀ ಶರಣಬಸವೇಶ್ವರರ ತ್ರಿವಿಧ ದಾಸೋಹಗಳನ್ನು ಪರಿಪಾಲಿಸಿ ಸಮಾಜಕ್ಕೆ ದಾರಿದೀಪವಾಗಿ ದ್ದಾರೆ ಎಂದು ಸ್ಮರಿಸಿದರು.
ಪೂಜ್ಯ ಮಾತೋಶ್ರೀ ಡಾ. ರಾಕ್ಷಾಯಣಿ ಅವ್ವಾಜಿ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು 30 ಮಕ್ಕಳಿಂದ ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು 35,000 ಮಕ್ಕಳವರೆಗೆ ವಿಸ್ತರಿಸಿದ್ದು, ಕೆ.ಜಿ. ಇಂದ ಪಿ.ಜಿ. ವರೆಗೆ ಮತ್ತು ಪಿ ಎಚ್, ಡಿ ವರೆಗೆ ವಿದ್ಯಾಭ್ಯಾಸ ನಡೆಯುತ್ತಿದೆ, ತ್ರಿವಿಧ ದಾಸೋಹದ ಜೊತೆಗೆ ಮಹಿಳಾ ಸಬಲೀಕರಣ ಹೆಚ್ಚಿನ ಒತ್ತು ನೀಡಿ ವಿದ್ಯಾ ಮಹಿಳೆಯರ ಶಿಕ್ಷಣಕ್ಕೆ ನಾಂದಿ ಹಾಡಿದ್ದರು. ಶರಣ ಸಂಸ್ಥಾನದ ಭಕ್ತರೆ ನನ್ನ ಮಕ್ಕಳೆಂದು ಭಾವಿಸಿ ಪೂಜ್ಯ ಅಪ್ಪಾಜಿ ಅವರ ಕನಸು ನನಸು ಮಾಡಲು ನನ್ನ ಜೀವನವನ್ನು ಮುಡಿಪಾಗಿಡುವೆ ಎಂದು ಪೂಜ್ಯ ಹೇಳಿದರು.
ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ನುಡಿ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿ, ಶರಣ ಸಂಸ್ಥಾನ ಹಾಗೂ ಭಕ್ತರ ಏಳಿಗೆಗಾಗಿ ನನ್ನ ಜೀವನವನ್ನೇ ಸಮರ್ಪಿತವಾಗಿಡುತ್ತೇನೆ ಎಂದು ಅಭಯ ನೀಡಿದರು.
ಈ ವೇಳೆ ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಅಪ್ಪಾಜಿ ಯವರ ಸುಪುತ್ರಿಯರಾದ ಭವಾನಿ, ಶಿವಾನಿ ಮತ್ತು ಮಹೇಶ್ವರಿ ಅವರು “ಅಪ್ಪಾ ಐ ಲವ್ ಯು ಪಾ” ಎಂಬ ಹಾಡು ಹಾಡುವ ಮೂಲಕ ತಂದೆಯನ್ನು ಸ್ಮರಿಸಿ ಭಾವುಕರಾಗಿ ಕಣ್ಣೀರು ಸುರಿಸತ್ತಾ ನುಡಿ ಪುಷ್ಪಾಂಜಲಿ ಅರ್ಪೀಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಆರ್. ಪಾಟೀಲ ಅವರು ಮಾತನಾಡಿ , ನಾನು ಶರಣಬಸವೇಶ್ವರ ಸಂಸ್ಥೆಯಲ್ಲಿ ಓದಿದ್ದು, ನನಗೆ ಹೆಮ್ಮೆ ಎನಿಸುತ್ತಿದೆ. ಅಪ್ಪಾಜಿ ಯವರು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಂಡವರು ಎಂದು ಸ್ಮರಿಸಿದರು.
ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ ಮಾತನಾಡಿ, ತ್ರಿವಿಧ ದಾಸೋಹದ ಮೂಲಕ ಅಪ್ಪಾಜಿ ಸಾವಿರಾರು ಜನರ ಬಾಳಿಗೆ ಬೆಳಕಾದವರು ಎಂದು ನುಡಿದರು.
ಮಾಜಿ ಸಂಸದ ಡಾ ಉಮೇಶ್ ಜಾದವ್ ಮಾತನಾಡಿ, ಪೂಜ್ಯ ಅಪ್ಪಾಜಿ ಅವರು ವಿಶ್ವ ಕಂಡ ಶ್ರೇಷ್ಠ ಮಹಾ ಮಾನವತಾವಾದಿ ಎಂದು ಗುಣಗಾನ ಮಾಡಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ನುಡಿ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿ, ಅಪ್ಪಾಜಿ ಅವರು ನಡೆದು ಬಂದ ಬದುಕೇ ನಮಗೆ ದಾರಿದೀಪವಾಗಿದೆ. ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ನುಡ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿ, ಅಪ್ಪಾಜಿಯವರು ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಮಾಡಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿದವುದರ ಮೂಲಕ ಶೈಕ್ಷಣಿಕ ಕ್ರಾಂತಿ ಮಹಾನ್ ಸಂತ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಅಪ್ಪಾಜಿ ಅವರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಬೆಳಕಾದರು ಎಂದು ನುಡಿದರು.
ವೈದ್ಯೆ ಡಾ.ಭಾಗ್ಯಶ್ರೀ ಶರಣಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಅಪ್ಪಾಜಿಯವರು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿಕೊಟ್ಟ ಮಹಾನ್ ದಾರ್ಶನಿಕ ಎಂದು ನುಡಿ ನಮನ ಸಲ್ಲಿಸಿದರು.
ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಕಲಂ ೩೭೧ (ಜೆ) ಜಾರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.
ಚೌದಾಪರಿ ಸಂಸ್ಥಾನ ಮಠದ ಪೂಜ್ಯ ಡಾ ರಾಜಶೇಖರ ಶಿವಾಚಾರ್ಯರು, ಬೆಳಗುಂಪಿಯ ಅಭಿನವ ಪರ್ವತಲಿಂಗ ಶಿವಾಚಾರ್ಯರು ಶರಣಬಸಪ್ಪ ನಿಷ್ಠಿ , ಬಸವರಾಜ ಭೀಮಳ್ಳಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಡಾ.ಭೀಮಾಶಂಕರ್ ಬಿಲಗುಂದಿ, ಶಾಸಕ ಮಾರುತಿರಾವ ಮೂಳೆ, ಬಸವರಾಜ ಮತ್ತಿಮಡು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ
ಸಾಹಿತಿ ಎಂ.ಎಸ್. ಹಿರೇಮಠ, ಅಪ್ಪಾರಾವ ಅಕ್ಕೊಣಿ, ವೀರಶೈವ ಸಮಾಜದ ಅಧ್ಯಕ್ಷರಾದ ಅರುಣಕುಮಾರ್ ಪಾಟೀಲ ಕೊಡಲಹಂಗರಗಾ, ಸೇರಿದಂತೆ ಅನೇಕರು ಅಪ್ಪಾಜಿಯವರ ಸೇವಾ ತತ್ವಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ನುಡಿ ಪುಷ್ಪಾಂಜಲಿ
ಪೂಜ್ಯ ಅಪ್ಪಾಜಿ ಅವರ ನುಡಿ ಪುಷ್ಪಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ದೇಶಮುಖ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶರಣಬಸವೇಶ್ವರರ ಸಂಸ್ಥಾನದ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ದೇಶಮುಖ ಅವರು ಅಪ್ಪಾಜಿ ಯವರ ಜೀವನ ಕುರಿತು ಸಂಪಾದಿಸಿದ *ತ್ರಿವಿಧ ದಾಸೋಹದ ದೃಶ್ಯಾವಳಿ* ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಸದ್ಭಕ್ತರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿತ್ತು.
ಈ ವೇಳೆ ಹಿರಿಯ ಸಾಹಿತಿ ಶಕುಂತಲಾ ಪಾಟೀಲ್ ಜವಳಿ ಹಾಗೂ ಕವಿಯತ್ರಿ ರೇಣುಕಾ ಡಾಂಗೆ ಅವರು ಪೂಜ್ಯ ಅಪ್ಪಾಜಿ ಅವರ ಕುರಿತು ಕವನ ವಾಚನ ಮಾಡಿ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಅನಿಲ್ ಬಿಡವೆ, ಸಹ ಕುಲಪತಿ ಪ್ರೊ ವಿ ಡಿ ಮೈತ್ರಿ, ಡೀನ್ ಡಾ ಲಕ್ಷ್ಮಿ ಪಾಟೀಲ್ ಮಾಕಾ, ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶಂಕರಗೌಡ ಹೊಸಮನಿ,ಬಸವ ಸಮಿತಿಯ ಅಧ್ಯಕ್ಷೆ ಡಾ ವಿಲಾಸವತಿ ಖುಬಾ, ಖ್ಯಾತ ಮಕ್ಕಳ ಸಾಹಿತಿ ಎ ಕೆ ರಾಮೇಶ್ವರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ, ಪತ್ರಕರ್ತ ಹಣಮಂತರಾವ ಭೈರಾಮಡಗಿ,ಮನೋಜಕುಮಾರ್ ಗುದ್ದಿ, ಡಾ ಶಿವರಂಜನ್ ಸತ್ಯಂಪೇಟ್ , ಭೀಮಾಶಂಕರ ಫೀರೋಜಾಬಾದ, ರಮೇಶ್ ಮೇಳಕುಂದಿ, ರಾಜು ಉದನೂರ್, ಅಶೋಕ ಪಾಟೀಲ, ಮಹಾನಗರ ಪಾಲಿಕೆ ಪೂಜ್ಯ ಮಹಾಪೌರ ವರ್ಷಾ ಜಾನೆ, ಉಪಮಹಾಪೌರ ತೃಪ್ತಿ ಅಲ್ಲದ ಲಾಖೆ,
ಪತ್ರಕರ್ತ, ಸಾಹಿತಿ ಹಾಗೂ ಶರಣ ಚಿಂತಕರಾದ ಶರಣಗೌಡ ಪಾಟೀಲ್ ಪಾಳಾ, ಶರಣ ಚಿಂತಕ ಹಾಗೂ ಲೇಖಕರಾದ ಪ್ರೊ ಯಶವಂತರಾಯ ಅಷ್ಠಗಿ, ಡಾ ಆನಂದ್ ಸಿದ್ದಾಮಣಿ, ಪ್ರೊ ಆರ್ ಕೆ ಹುಡುಗಿ, ಸುಜಾತಾ ಜಂಗಮಶೆಟ್ಟಿ,
ಶರಣ ಸಂಸ್ಥಾನದ ಗೋದಾವರಿ ಭೀಮಳ್ಳಿ, ಕುಮಾರ ಬಸವರಾಜ ದೇಶಮುಖ, ಗಿರೀಶಗೌಡ ಪಾಟೀಲ್, ಡಾ ಶ್ವೇತಾ ಅಲ್ಲಮಪ್ರಭು ದೇಶಮುಖ,
ಸಮಾಜ ಸೇವಕರಾದ, ಮಂಜು ರೆಡ್ಡಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರ್ಷಾನಂದ್ ಗುತ್ತೇದಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸುರಜ ತಿವಾರಿ
ಕಜಾಪ ಅಧ್ಯಕ್ಷರಾದ ಸಿ ಎಸ್ ಮಾಲಿಪಾಟೀಲ, ಡಾ ಸುಮಂಗಲಾ ರೆಡ್ಡಿ, ಚಿದಾನಂದ ಚಿಕ್ಕಮಠ, ಶಿವಕುಮಾರ್ ರಾಚೋಟಿ, ನಾಗಲೀಂಗಯ್ಯ ಮಠಪತಿ, ಡಾ ಶ್ರೀಶೈಲ ಬಿರಾದಾರ್, ಕಲ್ಯಾಣರಾವ ಪಾಟೀಲ್ ಮಳಖೇಡ, ಕಲಬುರಗಿ ಎಪಿಎಂಸಿ ಉಪಾಧ್ಯಕ್ಷ ಹಾಗೂ ಶರಣ ಚಿಂತಕ ರಾಜಕುಮಾರ್ ಕೋಟೆ, ಚಿತ್ತಾಪುರ ಎಪಿಎಂಸಿ ಮಾಜಿ ಅಧ್ಯಕ್ಷರಾದ, ಸಿದ್ದು ಗೌಡ ಅಫಜಲಪುರ, ಸಾಹಿತಿ ಸದಾನಂದ ಪೆರ್ಲ ,ಪ್ರಾಚಾರ್ಯ ಸುರೇಶ್ ನಂದಗಾಂವ, ಡಾ ಶಿವರಾಜ್ ಶಾಸ್ರೀ ಹೇರೂರ , ಸೇರಿದಂತೆ
ಸಾವಿರಾರು ಭಕ್ತರು, ಸಾಹಿತಿಗಳು, ಶರಣ ಚಿಂತಕರು ಗಣ್ಯರು, ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಅವರ ಬಂಧು ಬಳಗದವರು ಹಾಜರಿದ್ದರು. ಬಂದ ಭಕ್ತರಿಗೆ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಶರಣಬಸವೇಶ್ವರ ಸಂಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ ನೀಲಾಂಬಿಕಾ ಪೋಲಿಸ್ ಪಾಟೀಲ್ ಸ್ವಾಗತಿಸಿದರು, ಪ್ರಾಚಾರ್ಯ ಡಾ ದಯಾನಂದ ನಿರುಪಿಸಿದರು, ಡಾ ಆನಂದ ಸಿದ್ದಾಮಣಿ ವಂದಿಸಿದರು.