ಕಲಬುರಗಿ ದೂರದರ್ಶನ ಕೇಂದ್ರ ಮುಚ್ಚದಂತೆ ಪ್ರಯತ್ನ:ಜಾಧವ್ ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್ ಭೇಟಿಗೆ ಸಿದ್ಧತೆ

ಕಲಬುರಗಿ ದೂರದರ್ಶನ ಕೇಂದ್ರ ಮುಚ್ಚದಂತೆ ಪ್ರಯತ್ನ:ಜಾಧವ್  ಕೇಂದ್ರ ವಾರ್ತಾ ಸಚಿವ ಅಶ್ವಿನಿ  ವೈಷ್ಣವ್ ಭೇಟಿಗೆ ಸಿದ್ಧತೆ

ಕಲಬುರಗಿ ದೂರದರ್ಶನ ಕೇಂದ್ರ ಮುಚ್ಚದಂತೆ ಪ್ರಯತ್ನ:ಜಾಧವ್

ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್ ಭೇಟಿಗೆ ಸಿದ್ಧತೆ

ಕಲಬುರಗಿ: ಕಲಬುರಗಿ ದೂರದರ್ಶನ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಹದಂತೆ ಪ್ರಯತ್ನ ಮಾಡಲಾಗುವುದು ಹಾಗೂ ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಜೊತೆ ಮಾತುಕತೆ ಮಾಡುವುದಾಗಿ ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಭರವಸೆ ನೀಡಿದರು.

    ಕರ್ನಾಟಕ ಜಾನಪದ ಪರಿಷತ್ತು ಹಾಗೂ ಈಗ ಸಂಘಟನೆಗಳ ಸದಸ್ಯರು ಹಾಗೂ ಸಾಹಿತಿಗಳು ಡಾ. ಜಾಧವ್ ಅವರನ್ನು ಭೇಟಿ ಮಾಡಿ ಕಲಬುರ್ಗಿ ದೂರದರ್ಶನ ಕೇಂದ್ರವು ಸುಮಾರು 50 ವರ್ಷಗಳ ಇತಿಹಾಸವಿರುವ ಕೇಂದ್ರವಾಗಿದ್ದು ಇಲ್ಲಿ ಕಾರ್ಯಕ್ರಮ ಸಿದ್ಧಪಡಿಸುವ ಸೌಲಭ್ಯವನ್ನು ಇದೇ ಜುಲೈ 24 ರಿಂದ ಸ್ಥಗಿತಗೊಳಿಸಿರುವುದು ಖೇದಕರ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಕಲಬುರಗಿ ಜಿಲ್ಲಾಧ್ಯಕ್ಷರಾದ ಸಿ.ಎಸ್ ಮಾಲಿ ಪಾಟೀಲ್, ಸಾಹಿತಿಗಳಾದ ಡಾ.ಗವಿಸಿದ್ದಪ್ಪ ಪಾಟೀಲ್, ಡಾ. ರಾಜಕುಮಾರ್ ಮಾಳಗೆ, ಶಿವಾನಂದ ಮಠಪತಿ, ಡಾ.ಸದಾನಂದ ಪೆರ್ಲ, ಬಿಜೆಪಿ ಹಿರಿಯ ಮುಖಂಡರಾದ ಶಿವಕಾಂತ ಮಹಾಜನ ಮತ್ತಿತರರ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗವು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಾ. ಜಾಧವ್ ಅವರು ಮಾತನಾಡಿ 1977ರಲ್ಲಿ ಎಲ್ ಕೆ ಅಡ್ವಾಣಿಯವರು ಕೇಂದ್ರದ ವಾರ್ತಾ ಮತ್ತು ಪ್ರಕಾರ ಖಾತೆಯ ಸಚಿವರಾಗಿದ್ದಾಗ ಪ್ರಾರಂಭಿಸಿದ ಈ ದೂರದರ್ಶನ ಕೇಂದ್ರವು ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ನಿರ್ಮಿಸಿ, ಈ ಭಾಗದ ಸಾಹಿತಿ, ಕಲಾವಿದರು ರೈತರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಅವಕಾಶ ಕಲ್ಪಿಸಿ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. 48 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ನಿರ್ಮಾಣ ಮಾಡುತ್ತಿದ್ದ ಕೇಂದ್ರವನ್ನು ಮುಚ್ಚುವುದು ಸರಿಯಲ್ಲ ಈ ಬಗ್ಗೆ ಶೀಘ್ರದಲ್ಲೇ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅಶ್ವಿನ್ ವೈಷ್ಣವ ಹಾಗೂ ಪ್ರಸಾರ ಭಾರತೀಯ ಮುಖ್ಯಸ್ಥರನ್ನು ಭೇಟಿ ಮಾಡಲಾಗುವುದು. ಮತ್ತೆ.ಯಥಾವತ್ತಾಗಿ ಕಾರ್ಯಕ್ರಮ ಪುನರಾರ ರಂಭಿಸಲು ಸಕಲ ವ್ಯವಸ್ಥೆಯನ್ನು ಕಲ್ಪಿಸಲು ಸೌಕರ್ಯ ಒದಗಿಸುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಡಾ. ಜಾಧವ್ ನಿಯೋಗಕ್ಕೆ ಭರವಸೆ ನೀಡಿದರು.