ಜಿಲ್ಲೆಯಾದ್ಯಂತ ಸಂವಿಧಾನ ಪೀಠಿಕೆ ಫಲಕ ಅಳವಡಿಕೆ: ಸಂಗೊಳ್ಳಿ ಸೋಮಣ್ಣ

ಜಿಲ್ಲೆಯಾದ್ಯಂತ ಸಂವಿಧಾನ ಪೀಠಿಕೆ ಫಲಕ ಅಳವಡಿಕೆ: ಸಂಗೊಳ್ಳಿ ಸೋಮಣ್ಣ

ಜಿಲ್ಲೆಯಾದ್ಯಂತ ಸಂವಿಧಾನ ಪೀಠಿಕೆ ಫಲಕ ಅಳವಡಿಕೆ: ಸಂಗೊಳ್ಳಿ ಸೋಮಣ್ಣ

ಕಲಬುರಗಿ; ರಾಜ್ಯಾದ್ಯಂತ ಸಹಕಾರ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ಸಂವಿಧಾನ ಪೀಠಿಕೆ ಭಾವಚಿತ್ರವನ್ನು ಅಳವಡಿಸುವ ಅಭಿಯಾನವನ್ನು ಕಲ್ಬುರ್ಗಿ ಜಿಲ್ಲೆ ಸುಭಾಷ್ ಚಂದ್ರ ಬೋಸ್ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ

ರಾಜ್ಯ ಕಾರ್ಯದರ್ಶಿ ಸಂಗೊಳ್ಳಿ ಸೋಮಣ್ಣ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದಿಂದ ಆರಂಭವಾದ ಈ ಅಭಿಯಾನ ಈಗಾಗಲೇ 27 ಜಿಲ್ಲೆಗಳನ್ನು ಪೂರ್ಣಗೊಳಿಸಲಾಗಿದ್ದು, ಇಂದಿನಿಂದ ಕಲಬುರ್ಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಭೇಟಿನೀಡಿ

ಸಂವಿಧಾನ ಪೀಠಿಕೆ ಫಲಕವನ್ನು ಅಳವಡಿಸುವುದಾಗಿ ತಿಳಿಸಿದರು.

ಕಲ್ಬುರ್ಗಿ ಜಿಲ್ಲಾಧಿಕಾರಿಗಳು ಅವರು ಸಂವಿಧಾನ ಪೀಠಿಕೆಯ ಫಲಕವನ್ನು ಅನಾವರ ಣಗೊಳಿಸಿದ್ದು, 2020 ರಿಂದಲೇ ಕೆಂದ್ರಸರ್ಕಾರ ನಮ್ಮ ಸೇವಾ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಂವಿಧಾನ ಪೀಠಿಕೆ ಅಳವಡಿಸಲು ಆದೇಶಿಸಿದ್ದು, ಈಗ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಪತ್ರವನ್ನು ನೀಡಿದ್ದಾರೆ ಎಂದರು.

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಅಭಿಯಾನಕ್ಕೆ ಚಾಲನೆ ನೀಡಿಲಾಗುವುದು. 1400 ಪೀಠಿಕೆಗಳನ್ನು ನೀಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುರೇಶ ಕೆ ಮೈಸೂರ, ಜೆಡಿಎಸ್ ಮುಖಂಡ ತಿಪ್ಪಣ್ಣ ಸರಡಗಿ, ಲಕ್ಷ್ಮಣ ಆನೂರ್, ಅಶೋಕ ಕೆರಕ್ನಳ್ಳಿ, ಜೈ ಭೀಮ ಉಪಸ್ಥಿತರಿದ್ದರು.