ಕಾಂ ಸೀತಾರಾಮ ಯಚೂರಿಯವರ ಶ್ರದ್ಧಾಂಜಲಿ ಸಭೆ
ಕಾಂ ಸೀತಾರಾಮ ಯಚೂರಿಯವರ ಶ್ರದ್ಧಾಂಜಲಿ ಸಭೆ
ಕಲಬುರಗಿ: ಸೌಹಾರ್ದ ಭಾರತ ಕಲಬುರಗಿ ವೇದಿಕೆಯಿಂದ ನಗರದ ಕನ್ನಡ ಭವನದಲ್ಲಿ ಕಾಂ ಸೀತಾರಾಮ ಯಚೂರಿಯವರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಪ್ರಾರಂಭದಲ್ಲಿ ಮೌನಾಚರಣೆ ಮಾಡಿ ಕಾಂ ನೀಲಾ ಕೆ ಅವರು ಯೆಚೂರಿ ಯವರ ವ್ಯಕ್ತಿತ್ವವನ್ನು ಕುರಿತು ವಿವರಿಸಿದರು. ರಾಷ್ಟ್ರದ ರಾಜಕಾರಣದಲ್ಲಿ ಯೆಚೂರಿವರು ಬಹು ದೊಡ್ಡ ಪಾತ್ರವನ್ನು ನಿಭಾಯಿಸಿದ್ದಾರೆ. ವಿದ್ಯಾರ್ಥಿ ಜೀವನದಿಂದಲೂ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಯೆಚೂರಿ ತುರ್ತುಪರಿಸ್ಥಿತಿ ಯಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧೀಯವರನ್ನೆ ನಡುಗಿಸಿದರು. ಮೊನ್ನಿನ ಚುನಾವಣೆಯಲ್ಲಿ ಮಹಾಘಟಬಂಧನ ಅಸ್ತಿತ್ವಕ್ಕೆ ಬರುವಲ್ಲಿ ಯೆಚೂರಿ ಪಾತ್ರವನ್ನು ಇತಿಹಾಸ ಮರೆಯಲಾರದು. ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷವು ಯೆಚೂರಿಯವರ ಫ್ಯಾಸಿಸ್ಟ್ ಮುಕ್ತ ಭಾರತ ಎಂಬ ಸಂಕಲ್ಪವನ್ನು ಸಾಕಾರಗೊಳಿಸಲು ನಿರಂತರ ಕೆಲಸ ಮಾಡುತ್ತದೆ. ಕಮ್ಯೂನಿಸ್ಟ್ ರು ತಮ್ಮ ಲಕ್ಷದಿಂದ ವಿಚಲಿತರಾಗುವುದಿಲ್ಲ ಎಂದರು.
ಪ್ರೋ ಆರ್ ಕೆ ಹುಡಗಿಯವರು ಮಾತನಾಡುತ್ತ ಕಾಂ ಸೀತಾರಾಮ ಮುತ್ಸದ್ದಿ ರಾಜಕಾರಣ ಮಾತ್ರವಲ್ಲ ಒಬ್ಬ ಪ್ರಶ್ನಾತೀತ ಹೋರಾಟಗಾರ. ಮುಂದಾಲೋಚನೆಯುಳ್ಳ ನಾಯಕ ಎಂದು ವಿವರಿಸಿದರು. ನಂತರ ಕಾಂ ಮಹೇಶ ರಾಠೋಡ, ಪ್ರೊ ಶ್ರೀಶೈಲ ಘೂಳಿ, ಕಾಂ ಶರಣಬಸಪ್ಪ ಮಮಶೆಟ್ಟಿ, ಕಾಂ ಮೌಲಾ ಮುಲ್ಲಾ, ಕಾಂ ಶ್ರೀಮಂತ ಬಿರಾದಾರ, ಸಮುದಾಯದ ದತ್ತಾತ್ರಯ ಇಕ್ಕಳಿಕಿಯವರು ಯೆಚೂರಿಯವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುತ್ತ ನುಡಿ ನಮನ ಸಲ್ಲಿಸಿದರು. ಡಾ ಮೀನಾಕ್ಷಿ ಬಾಳಿ ನಿರೂಪಿಸಿದರು. ಲವಿತ್ರ ವಸ್ತ್ರದ ಮತ್ತು ಎಸ್ ಎಫ್ ಆಯ್ ಸಂಘಟನೆಯ ಮಕ್ಕಳು ಕ್ರಾಂತಿಗೀತೆಗಳನ್ನು ಹಾಡಿದರು. ಸಭಿಕರೆಲ್ಲರೂ ಪುಷ್ಪಾಂಜಲಿಯೊAದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.