ಜನರ ಆಸ್ತಿ ರಕ್ಷಣೆಯಲ್ಲಿ ಬಳಸಲಾಗುವ ಕಣ್ಗಾವಲು : ಐಜಿಪಿ ಅಜಯ ಹಿಲೋರಿ
ಜನರ ಆಸ್ತಿ ರಕ್ಷಣೆಯಲ್ಲಿ ಬಳಸಲಾಗುವ ಕಣ್ಗಾವಲು : ಐಜಿಪಿ ಅಜಯ ಹಿಲೋರಿ
ಕಮಲನಗರ: ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳು ಜನರು ಮತ್ತು ಆಸ್ತಿಗಳ ರಕ್ಷಣೆಯಲ್ಲಿ ಬಳಸಲಾಗುವ ಕಣ್ಗಾವಲು ಸಾಮಥ್ರ್ಯಗಳನ್ನು ಒದಗಿಸುತ್ತವೆ ಎಂದು ಐಜಿಪಿ ಅಜಯ ಹಿಲೋರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನೂತನವಾಗಿ ಅಳವಡಿಸಿದ ಸಿಸಿ ಕ್ಯಾಮೆರಾ ವೀಕ್ಷಣೆ ಕೋಣೆಗೆ ಅವರು ಚಾಲನೆ ನೀಡಿ ಮಾತನಾಡಿದರು.
ಅಡೆತಡೆಗಳು, ಒಳನುಗ್ಗುವಿಕೆ ಪತ್ತೆ ಮತ್ತು ಪ್ರವೇಶ ನಿಯಂತ್ರಣಕ್ಕಾಗಿ ವಿಡೀಯೊ ಕವರೇಜ್ ಮತ್ತು ಭದ್ರತಾ ವ್ಯವಸ್ಥೆಗಳನ್ನು ಬೆಂಬಲಿಸಲು ನಿರ್ಣಾಯಕ ಅಂಶಗಳ ಆಧಾರದ ಮೇಲೆ ನೀವು ಈ ಸಿಸಿ ಕ್ಯಾಮೆರಾ ವ್ಯವಸ್ಥೆ ಸ್ಥಾಪನೆಗೊಳಿಸಿದ್ದು ಶ್ಲಾಘನೀಯವಾಗಿದೆ ಎಂದರು.
ನಂತರ ಗಡಿ ರಾಜ್ಯ ಮಹಾರಾಷ್ಟ್ರದಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾದ ಹಿನ್ನಲೆ ಸೋಲಾಪುರ, ಉಸ್ಮಾನಾಬಾದ್, ನಾಂದೇಡ್, ದೇಗಲೂರು, ಉದಗೀರ, ದೇವಣಿ, ಔರಾದ್(ಎಸ್) ನಮ್ಮ ಕರ್ನಾಟಕ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿವೆ. ಹೀಗಾಗಿ ರಾಜ್ಯಕ್ಕೆ ಬರುವ-ಹೋಗುವ ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಕಟ್ಟೆಚ್ಚರ ವಹಿಸುವಂತೆ ಸಲಹೆ ನೀಡಿದರು.
ಸಿಪಿಐ ಅಮರೆಪ್ಪ ಶಿವಬಲ ಮಾತನಾಡಿ, ಠಾಣೆಯ ಪ್ರಗತಿ ಕುರಿತು ಸಂಪೂರ್ಣ ಮಾಹಿತಿ ಪ್ರಸ್ತೂತ್ ಪಡಿಸಿದರು.
ಈ ಸಂದರ್ಭ ಭಾಲ್ಕಿ ಡಿವೈಎಸ್‍ಪಿ ಶಿವಾನಂದ ಪವಾಡ್‍ಶೇಟ್ಟಿ, ಪಿಎಸ್‍ಐ ಚಂದ್ರಶೇಖರ್ ನಿರ್ಣೆಕರ್, ಅಪರಾಧ ವಿಭಾಗದ ಪಿಎಸ್‍ಐ ಬಾಲಾಜಿ ಬೆಳಕಟ್ಟೆ, ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು.
{ಕಮಲನಗರ ಠಾಣೆಯಲ್ಲಿ ಗುರುವಾರ ಸಿಸಿ ಕ್ಯಾಮೇರಾ ವೀಕ್ಷಣೆ ಕೋಣೆಗೆ ಐಜಿಪಿ ಅಜಯ ಹಿಲೋರಿ ಚಾಲನೆ ನೀಡಿದರು. ಡಿವೈಎಸ್‍ಪಿ ಶಿವಾನಂದ ಪವಾಡ್‍ಶೇಟ್ಟಿ, ಸಿಪಿಐ ಅಮರೆಪ್ಪ, ಪಿಎಸ್‍ಐ ಚಂದ್ರಶೇಖರ ಮತ್ತು ಬಾಲಾಜಿ ಇದ್ದರು.}