ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ರಾಜ್ಯಪಾಲರಿಗೆ ಮನವಿ

ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ರಾಜ್ಯಪಾಲರಿಗೆ ಮನವಿ

ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ರಾಜ್ಯಪಾಲರಿಗೆ ಮನವಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಅತ್ಯಾಚಾರ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳ ರವರ ಮುಖಾಂತರ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ಯಡ್ರಾಮಿ ತಾಲ್ಲೂಕಿನಲ್ಲಾದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಖಾಸಗಿ ಶಾಲೆಯ ಶಿಕ್ಷಕನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕಲಬುರಗಿ ಸಿಟಿಜನ್ ಮೈನಾರಿಟ ಮಹಿಳಾ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಮೂಲಕ ಗೌರವಾನ್ವಿತ ರಾಜ್ಯಪಾಲರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಯಡ್ರಾಮಿಯಲ್ಲಿ ೫ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಅತ್ಯಾಚಾರವು ಇಡೀ ಮಾನವ ಕುಲವೇ ಖಂಡಿಸಬೇಕಾಗಿದೆ. ಇಂತಹ ಹೀನ ಘಟನೆಯಿಂದ ಶಿಕ್ಷಕರು ಶಿಕ್ಷಣ ಇಲಾಖೆಯು ತಲೆತಗ್ಗಿಸುವಂತಾಗಿದೆ. ಹಾಗಾಗಿ ಈ ಘಟನೆಗೆ ಕಾರಣರಾದ ಆರೋಪಿ ಶಿಕ್ಷಕನ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮೈನಾರಿಟಿ ಮಹಿಳಾ ಒಕ್ಕೂಟ ಒತ್ತಾಯಿಸಿದೆ.

ಸಂತ್ರಸ್ತೆ ಮಗುವಿಗೆ ರೂ. ೨೫.೦೦ ಲಕ್ಷ ಪರಿಹಾರ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸರಕಾರವೇ ಭರಿಸಬೇಕು, ಎಲ್ಲಾ ತಹರದ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಆದೇಶ ಹೊರಡಿಸಬೇಕು. ಒಂದು ವೇಳೆ ಈ ನಿಯಮ ಪಾಲಿಸದೆ ಇದ್ದರೆ ಅವರ ಲೈಸನ್ಸ್ ಅನ್ನು ರದ್ದುಪಡಿಸಬೇಕೆಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.

ಅಧ್ಯಕ್ಷೆ ಗೌರಮ್ಮ ಮಾಕಾ, ಸಂಚಾಲಕಿ ರೇಣುಕಾ ಸರಡಗಿ, ಕಾರ್ಯದರ್ಶಿ ಶರಣು ಕಣ್ಣಿ, ಸಂಘಟನಾ ಸಂಚಾಲಕ ಶರಣು ಹಂಗರಗಿ, ಭಾಗ್ಯವಂತರಾವ ಕಾಂಬಳೆ, ದೇವಕ್ಕಿ ಗುಡಿ, ಕಲಾವತಿ ಸಂಗೋಳ್ಳಿಗಿ, ಸೀಮಾ, ಶಂಕರ ಸೇರಿದಂತೆ ಇತರರು ಇದ್ದರು.