ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಲಬುರಗಿ 8ನೇ ಜಿಲ್ಲಾ ಸಮ್ಮೇಳನ
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಲಬುರಗಿ 8ನೇ ಜಿಲ್ಲಾ ಸಮ್ಮೇಳನ
ಅಕ್ಟೋಬರ್-14,15 2024 ರಂದು ಕಲಬುರಗಿ ನಗರದ ಶಮ್ಸ್ (ಜೆಕೆ) ಫಂಕ್ಷನ್ ಹಾಲ್‌ನಲ್ಲಿ ಎರಡು ದಿನ ನಡೆದಿದ್ದು, ಸದರಿ ಸಮ್ಮೇಳನ ಈ ಕೆಳಕಂಡ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗಿಕರಿಸಿದೆ.
ಕಾರ್ಮಿಕರನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ದತಿ ಮೂಲಕ ನೇಮಕ ಮಾಡಿಕೊಳ್ಳುತ್ತಿರುವುದನ್ನು ಕೂಡಲೇ ನಿಲ್ಲಿಸಿ, ನೇರ ನೇಮಕಾತಿ ಮೂಲಕ ನೇಮಕ ಮಾಡಬೇಕು.
ಸರ್ಕಾರಿ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು.
ಕಲಬುರಗಿ ಜಿಲ್ಲೆಯಲ್ಲಿ ಬಂದ್ ಆಗಿರುವ ಸಿಮೆಂಟ್ ಕೈಗಾರಿಗಳನ್ನು ಪುನಃ ಪ್ರಾರಂಭ ಮಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಾಮಾಣ ಕ ಪ್ರಯತ್ನ ಮಾಡುವ ಮೂಲಕ ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರೂ. 15000.00 ಗೌರವ ಧನ ಪಾವತಿ ಮಾಡಬೇಕು.
ಅಕ್ಷರ ದಾಸೋಹ ಬಿಸಿ ಊಟ ತಯಾರಕ ಕಾರ್ಯಕರ್ತೆಯರಿಗೆ ರೂ. 10,000.00 ಗೌರವ ಧನ ಪಾವತಿ ಮಾಡಬೇಕು.
ರಾಜ್ಯ ಸರ್ಕಾರದ ಕನಿಷ್ಠ ವೇತನ ನಿಯಮಗಳಂತೆ ಕಾರ್ಮಿಕರಿಗೆ ವೇತನ ಜಾರಿಗೊಳಿಸಬೇಕು.
ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಬೇಡಿಕೆಗಳನ್ನು ಕೂಡಲೇ ಜಂಟಿ ಕ್ರಿಯಾ ಸಮಿತಿಯೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಬೇಕು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹೊಸ ಕಾರ್ಡ್ ವಿತರಣೆ ಹಾಗೂ ಕಾರ್ಡ್ ನವೀಕರಣ ನಿಯಮಗಳನ್ನು ಸರಳೀಕರಣಗೊಳಿಸಬೇಕು.
ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೇಶನ/ಮನೆ ಮಂಜೂರಿ ಮಾಡಬೇಕು.
ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಸಂಘಟಿಸಿ ಸಾಮಾಜಿಕ ಭದ್ರತೆಗಾಗಿ ಚಳುವಳಿ ಮಾಡಲು ಈ ಸಮಾವೇಶದಲ್ಲಿ ಮೇಲಿನ ಎಲ್ಲಾ ನಿರ್ಣಯಗಳನ್ನು ಅಂಗೀಕರಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ತೀರ್ಮಾನಿಸಲಾಯಿತು.
ಅಧ್ಯಕ್ಷರು : ಕಾಂ. ಎಚ್.ಎಸ್. ಪತಕಿ
ಉಪಾಧ್ಯಕ್ಷರು : ಕಾಂ. ಚಂದ್ರಮೋಹನ, ಕಾಂ. ಮಾನಪ್ಪ ಇಜೇರಿ ಹಾಗೂ ಕಾಂ. ಮಹ್ಮದ್ ಉಬೇದುಲ್ಲಾ
ಪ್ರಧಾನ ಕಾರ್ಯದರ್ಶಿ : ಕಾಂ. ಪ್ರಭುದೇವ ಯಳಸಂಗಿ
ಕಾರ್ಯದರ್ಶಿ : ಕಾಂ. ಹಣಮಂತ್ರಾಯ ಅಟ್ಟೂರ, ಕಾಂ. ಶಿವಲಿಂಗಮ್ಮ ಲೇಂಗಟಿಕರ್, ಕಾಂ. ವಿಶಾಲ ನಂದೂರಕರ್
ಖಜಾAಚಿ : ಕಾಂ. ಸಿದ್ದಪ್ಪ ಪಾಲ್ಕಿ ಹಾಗೂ 18 ಜನ ಜಿಲ್ಲಾ ಸಮಿತಿ ಸದಸ್ಯರನ್ನು ಒಳಗೊಂಡಂತೆ ಸರ್ವಾನುಮತದಿಂದ ಸಮಿತಿ ಚುನಾಯಿಸಲಾಯಿತು.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಚಳುವಳಿ ತೀವ್ರಗೊಳಿಸಲು ನಿರ್ಣಯ ಅಂಗಿಕರಿಸಲಾಯಿತು.
ಜಿಲ್ಲಾ ಸಮಿತಿ ಪರವಾಗಿ
ಎಚ್.ಎಸ್ ಪತಕಿ ಪ್ರಭುದೇವ ಯಳಸಂಗಿ ಸಿದ್ದಪ್ಪ ಪಾಲ್ಕಿ
ಜಿಲ್ಲಾ ಅಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಖಜಾಂಚಿ
ಮೊ: 94837 11882 ಮೊ: 9448778506 ಮೊ: 86605 24270
ಹಣಮಂತ್ರಾಯ ಅಟ್ಟೂರ ಶಿವಲಿಂಗಮ್ಮ ಲೇಂಗಟಿಕರ ವಿಶಾಲ ನಂದೂರಕರ್
ಜಿಲ್ಲಾ ಕಾರ್ಯದರ್ಶಿ ಅಧ್ಯಕ್ಷರು ಕಲಬುರಗಿ ನಗರ ಅಧ್ಯಕ್ಷರು, ಚಿತ್ತಾಪೂರ
ಮೊ: 70190 98776 & ಕಲಬುರಗಿ ತಾಲೂಕ ಸಮಿತಿ & ಶಹಾಬಾದ ತಾಲೂಕ ಸಮಿತಿ ಮೊ: 76248 97718 ಮೊ: 99805 78826