ಅತ್ಯಾಚಾರ ಮತ್ತು ಹತ್ಯೆಗೆ ನ್ಯಾಯಕ್ಕಾಗಿ ಅಹೋರಾತ್ರಿ ಹೋರಾಟಕ್ಕೆ ಕರೆ‌ – ಗಲ್ಲು ಶಿಕ್ಷೆ ಕಾಯಂ ಮಾಡುವಂತೆ ಒತ್ತಾಯ

ಅತ್ಯಾಚಾರ ಮತ್ತು ಹತ್ಯೆಗೆ ನ್ಯಾಯಕ್ಕಾಗಿ ಅಹೋರಾತ್ರಿ ಹೋರಾಟಕ್ಕೆ ಕರೆ‌ – ಗಲ್ಲು ಶಿಕ್ಷೆ ಕಾಯಂ ಮಾಡುವಂತೆ ಒತ್ತಾಯ

ಅತ್ಯಾಚಾರ ಮತ್ತು ಹತ್ಯೆಗೆ ನ್ಯಾಯಕ್ಕಾಗಿ ಅಹೋರಾತ್ರಿ ಹೋರಾಟಕ್ಕೆ ಕರೆ‌ – ಗಲ್ಲು ಶಿಕ್ಷೆ ಕಾಯಂ ಮಾಡುವಂತೆ ಒತ್ತಾಯ

ಕಲಬುರಗಿ: ಚಿತ್ರದುರ್ಗ, ಹಿರಿಯೂರು ತಾಲ್ಲೂಕು:ಹಿರಿಯೂರಿನ ಕೊವೆರಹಟ್ಟಿ ಗ್ರಾಮದ 19 ವರ್ಷದ ಪರಿಶಿಷ್ಟ ಮಾದಿಗ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ ವರ್ಷಿತಾ ಮೇಲೆ ಅತ್ಯಾಚಾರ ಮಾಡಿ ಬೆಂಕಿ ಹಚ್ಚಿ ಕೊಲೆ ಮಾಡಿದ ಕ್ರೂರ ಘಟನೆಯ ವಿರುದ್ಧ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆ ಚೇತನ ಎಂಬಾತ ಈ ಅಮಾನುಷ ಕೃತ್ಯ ಎಸಗಿದ್ದು, ಅವನನ್ನು ಕೂಡಲೇ ಬಂಧಿಸಿ ಗಲ್ಲಿಗೇರಿಸಲು ಸರ್ಕಾರ ಎದುರು ನೋಡದೆ ತ್ವರಿತ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ವರ್ಷಿತಾ ಚಿತ್ರದುರ್ಗದಲ್ಲಿ ವಾಸವಿದ್ದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ನೆಟ್ಟಿಗೆ ತನ್ನ ಗ್ರಾಮಕ್ಕೆ ಹೋಗುವಾಗ ಈ ದುಷ್ಕರ್ಮಿಯು ಅತ್ಯಾಚಾರ ಮಾಡಿ ಆಕೆಯನ್ನು ಬೆಂಕಿಗೆ ಆಹ್ತು ಮಾಡಿದ್ದಾನೆ. ಇಂಥ ಕ್ರೂರ ವರ್ತನೆ ಮಾಡಿರುವ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ ಕೂಡ, ಸರ್ಕಾರ ಅವನನ್ನು ಉಳಿಸಬಾರದು ಎಂದು ಆಗ್ರಹ ವ್ಯಕ್ತವಾಗಿದೆ.

ಪರಿಹಾರದ ಪ್ಯಾಕೇಜ್‌ಗಾಗಿ ಆಗ್ರಹ:

* ಮೃತಳ ಕುಟುಂಬಕ್ಕೆ ಕನಿಷ್ಠ ₹1 ಕೋಟಿ ಪರಿಹಾರ ಘೋಷಿಸಬೇಕು

* ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕುಟುಂಬಕ್ಕೆ ಹಸ್ತಾಂತರಿಸಬೇಕು

* 5 ಎಕರೆ ಜಮೀನು ಹಾಗೂ ಮನೆಯೊಂದನ್ನು ಕೊಡಬೇಕು

* ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು

ಈ ಘಟನೆ ಬೆನ್ನಲ್ಲೇ ಸಾರ್ವಜನಿಕರು, ಸಮಾಜ ಸಂಶೋಧಕರು ಮತ್ತು ಎಲ್ಲ ಪ್ರಜ್ಞಾವಂತ ನಾಗರಿಕರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನ್ಯಾಯ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಂಘಟನಾಪರ ನೆತರು ಎಚ್ಚರಿಸಿದ್ದಾರೆ.

ಸೋಷಿತ ಜನ ಜಾಗೃತಿ ವೇದಿಕೆ ಕಲ್ಬುರ್ಗಿ ಪ್ರತಿಪಾದಿಸಿದವರು ರಾಜು ಕಟ್ಟಿಮನಿ, ಲಕ್ಕಪ್ಪ ಎಸ್. ಜವಳಿ, ಬಸವರಾಜ ಜವಳಿ, ಪರಶುರಾಮ ನಾಟಕರ, ರಂಜಿತ ಮೂಲಿಮನಿ, ಜಗದೇವಿ ಮತ್ತು ಮತ್ತಿತರರು ಉಪಸ್ಥಿತರಿದ್ದರು.