ರಾಷ್ಟ್ರೀಯ ಔದ್ಯೋಗಿಕ ಕ್ರಾಂತಿ ಪುರುಷ : ಲಿಂ.ಶ್ರೀ ಎಸ್.ಎಸ್.ಪಾಟೀಲರು
ರಾಷ್ಟ್ರೀಯ ಔದ್ಯೋಗಿಕ ಕ್ರಾಂತಿ ಪುರುಷ : ಲಿಂ.ಶ್ರೀ ಎಸ್.ಎಸ್.ಪಾಟೀಲರು (2ನೇ ವರ್ಷದ ಪುಣ್ಯ ಸ್ಮರಣೆ )
ಲೇಖಕರು:ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಕಲಬುರಗಿ
ಕಲ್ಯಾಣ ಕರ್ನಾಟಕದ ಪ್ರದೇಶದ ಕಲಬುರಗಿಗೆ ತನ್ನದೇ ಆದ ಐತಿಹಾಸಿಕ,ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ, ಸಾ ಹಿತ್ಯಿಕ,ಸಾಂಸ್ಕೃತಿಕವಾದ ಅನನ್ಯತೆ ಹೊಂದಿರುವುದರ ಜೊತೆಗೆ ರಾಷ್ಟ್ರದ ಆರ್ಥಿಕತೆ ಮತ್ತುವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ದೇಶ-ವಿದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿ ಕಲಬುರಗಿಯ ಆದಾನಿ-ಅಂಬಾನಿಯಾದ ವರು ಲಿಂ.ಶ್ರೀ ಎಸ್.ಎಸ್.ಪಾಟೀಲರು. ಅವರೊಬ್ಬ ವ್ಯಕ್ತಿ ಆಗಿರದೇ ಈ ಭಾಗದ ಶಕ್ತಿಯಾಗಿ ಇಡಿ ದೇಶದಲ್ಲಿ ಕಲಬುರಗಿ-ಕರ್ನಾಟಕದ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ದ ಧಾರ್ಮಿಕ ಸಮನ್ವಯದ,ಅಜಾತಶತ್ರು ಗಳಾಗಿ ಬಾಳಿ ಬೆಳಕಾದವರು.
ಶ್ರೀ ಎಸ್.ಎಸ್.ಪಾಟೀಲ ಅವರು ಮೂಲತಃ ಸೊಲ್ಲಾಪುರ ಜಿಲ್ಲೆಯ ವಡವಾಳ ಗ್ರಾಮದವರು.ಇವರ ಪೂರ್ವಜರು ಬರಗಾಲ ಬಿದ್ದು,ಅಪಾರ ಕೃಷಿಯಲ್ಲಿ ನಷ್ಟ ಅನುಭವಿಸಿ ಕೊನೆಗೆ ಕಲಬುರಗಿ ಜಿಲ್ಲೆಯ ಬೆಳ ಮಗಿ,ಬಾದನಳ್ಳಿಯ ಮೂಲಕ ಕಡಗಂಚಿಗೆ ಬಂದು ನೆಲೆಯೂರಿದರು.ಅಲ್ಲಿದ್ದ ಜೊಲ-ಮನೆ ಮಾರಿ ಬಂದಿ ರುವುದರಿಂದ ಅದೇ ಹಣದಲ್ಲಿ ಮನೆ,ಭೂಮಿ ಖರೀದಿ ಮಾಡಿ ಒಕ್ಕಲುತನ ಮಾಡಿ ಕಾಯಕ ನೇಗಿಲಯೋಗಿ ಯಾದವರು.ಇವರ ಮನೆತನದ ಪೂರ್ವಜರಲ್ಲಿ ಮೊದ ಲಿಗರಾಗಿ ಶ್ರೀ ಭೀಮರಾಮಗೌಡರೆಂದು ಹೆಸರು ಉಲ್ಲೇ ಖವಿದೆ.ಕೆಲವರ್ಷದಲ್ಲಿ ಊರಿಗೆ ಬೇಕಾದವರಾಗಿ ಗೌಡ ಕಿಗೆ ಇವರೇ ಮುಂದಾಗಿ ಜನರ ಕಷ್ಟ-ಸುಖಗಳಲ್ಲಿ ಭಾಗಿ ಯಾಗಿ ಊರ ಗೌಡರಾಗಿ ಜನಾನುರಾಗಿಗಳಾದರು.ಗೌ ಡಪ್ಪ,ಗುರಪ್ಪ,ರುದ್ರಪ್ಪ,ಮುಂತಾದವರು ಬಂದು ಹೋ ಗುತ್ತಾರೆ.ಕಡಗಂಚಿ ಸುತ್ತಲೂ ಊರ ಜನರ ಪ್ರೀತಿ ವಿಶ್ವಾಸಗಳಿಸಿದರು. ಈ ಮನೆತನದ ಶಿವಲಿಂಗಪ್ಪ ಮತ್ತು ಶ್ರೀಮತಿಸಂಗಮ್ಮರ ಮಗನಾಗಿ ೭-೦೯-೧೯೩೯ ರಂದು ಜನಿಸಿದರು.
ಕಡಗಂಚಿಯಲ್ಲಿ ಜನಿಸಿದ ಶಾಂತಲಿಂಗಪ್ಪರು ಒಬ್ಬರೇ ಗಂಡು ಮಗುವಾದ್ದರಿಂದ ಪ್ರೀತಿವಿಶ್ವಾಸ ವಾತ್ಸಲ್ಯದಿಂದ ಬೆಳೆಸಿದರು.ಇದೇ ಹೊತ್ತಿಗಾಗಲೇ ನಿಜಾಮನ ಆಡಳಿತ ಹೈದರಾಬಾದ್ ಕರ್ನಾಟಕ ಪ್ರದೇಶ ಹೊಂದಿತ್ತು.ಆಗ ಸ್ವಾತಂತ್ರ್ಯಗೊಂಡ ೧೯೪೭ರಲ್ಲಿ ಈ ಭಾಗ ಭಾರತ ದೊಂದಿಗೆ ವಿಲೀನವಾಗದೇ ಇದ್ದಾಗ ಈ ಪ್ರದೇಶದ ಜನ ದಂಗೆ ಎದ್ದರು.ರಜಾಕಾರರ ನೀತಿ ಖಂಡಿಸಿದರು.ಗಡಗಂ ಚಿಯಲ್ಲಿ ಪ್ರಾರಂಭಿಕ ಶಿಕ್ಷಣ ಪಡೆಯುವಾಗಲೇ ಈ ವಿ ಮೋಚನಾ ಚಳವಳಿಗಾಗಿ ಕಡಗಂಚಿ ಬಿಟ್ಟು ಶಿಗ್ಗಾಂವಗೆ (ಡಾ.ಮನು ಬಳಿಗಾರ್)ಊರಿಗೆ ಹೋದರು.ಇಲ್ಲಿ ಅವ ರ ಶಿಕ್ಷಣ ಪಡೆದರೂ ಮುಂದೆ ಬಿಜಾಪುರಗೆ ಹೋದರು.
ಮಿಡ್ಲಸ್ಕೂಲ್ ಗೆ ಕಲಬುರಗಿಯ ಅಸಫ್ಗೂಜ್ ದ ಸರಕಾ ರಿ ಹೈಸ್ಕೂಲ್ (ಎಂಪಿಎಚ್ಎಸ್) ಅಧ್ಯಯನ, ನಂತರ ಸರಕಾರಿ ಮಹಾವಿದ್ಯಾಲಯದಿಂದ ಬಿ.ಎ.ಪದವಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ೧೯೫೯ ಪಡೆದ ರು.ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಹುಬ್ಬಳ್ಳಿಯ ಜಗದ್ಗು ರು ಗಂಗಾಧರ ವಾಣಿಜ್ಯ ಕಾಲೇಜಿನಲ್ಲಿ ತಮ್ಮ ಓದು ಮುಗಿಸಿ ಬಿ.ಕಾಂ.ಪದವಿಯನ್ನು ಕರ್ನಾಟಕ ವಿಶ್ವವಿದ್ಯಾ ಲಯದಿಂದ ೧೯೬೯ರಲ್ಲಿ ಪಡೆದರು. ಕಲಬುರಗಿಯ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ್ ಶಂಕರಲಾಲ ಲಾಹೋರ ಕಾನೂನು ಕಾಲೇಜಿನಿಂ ದ ಎಲ್.ಎಲ್.ಬಿ.(೧೯೬೩),ಇಷ್ಟೆಲ್ಲ ಪದವಿ ಪಡೆದರು.ಮೆಡಿಕಲ್, ಚಾರ್ಟಡ ಅಕೌಂಟ್ ಆಗಲು ಬ ಬಳ್ಳಾರಿಯ ಕಂಪನಿಗೆ ಸೇರಿದರು.ಕಲಬುರಗಿಯ ಶ್ರೀ ಆರ್,ಎಸ್.ರಾಮಪುರೆ,ಅಬದುಲ ಆರ್ಜು ಹಿರಿಯ ವ ಕೀಲರಲ್ಲಿ ಪ್ರ್ಯಾಕ್ಟೀಸ್ ಮಾಡಿಸಲು ಹೋದರು ಇವ್ಯಾ ವುದನ್ನು ಲಕ್ಷಿಸದೇ ತಂದೆ ಶಿವಶರಣಪ್ಪಗೌಡರು ಬಹು ಬೇಗ ನಿರಾಕರಿಸಿದರು. ಮನೆತನದ ಮೂಲ ಉದ್ಯೋ ಗವನ್ನು ಮಾಡಬೇಕೆಂದು ಹಠ ಹಿಡಿದರು.ಕೃಷಿ,ಬೇಳೆ ಕಾರಖಾನೆ, ವ್ಯಾಪಾರ ಮಾಡುತ್ತ ಮುನ್ನಡೆದು ಜಗತ್ತಿನ ಪ್ರಮುಖ ವಾಣಿಜ್ಯೋದ್ಯಮಿಗಳಾದರು.
ಬರಹ-ಭಾಷಣ:
ಪಾಟೀಲರು ಅರ್ಥಶಾಸ್ತ್ರ ದಲ್ಲಿ ಪಾಂಡಿತ್ಯ ಹೊಂದಿದ್ದರಿಂದ ಉಸ್ಮಾನಿಯಾ ವಿಶ್ವವಿ ದ್ಯಾಲಯದ ಚರ್ಚಾ - ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿ ದ್ದರು.ಮಹತ್ವದ ಲೇಖನಗಳನ್ನು ಬರೆದಿದ್ದಾರೆ.ಯುವ ಜನೋತ್ಸವದ ನಾಟಕಗಳಲ್ಲಿ ಅಭಿ ನಯಿಸಿದರು.ಕ್ರೀಡಾ ವಿಭಾಗದ ಕಾರ್ಯದರ್ಶಿ, ವಿದ್ಯಾ ರ್ಥಿ ಸಂಘದ ಉಪಾಧ್ಯಕ್ಷರಾಗಿ ತಮ್ಮದೇ ಕಾರ್ಯ ವೈಖರಿ ಬೆಳೆಸಿಕೊಂಡವರು.ಶಿಕ್ಷಕ, ಉಪನ್ಯಾಸಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಪಠ್ಯ-ಪಠ್ಯೇತರ ಚಟುವಟಿಕೆ ಗಳಲ್ಲಿ ಭಾಗವಹಿಸಿ ಯಶಸ್ಸು ಪಡೆದರು. ವಿದ್ಯಾರ್ಥಿ ದೆಸೆಯಿಂದ ಕ್ರೀಯಾಶೀಲತೆ ಅವರ ಕೊನೆಯವರೆಗೂ ಬತ್ತದ ಚಿಲುಮೆಯಂತೆ ಜೀವಿಸಿದವರು.
ಶರಣ ಮಾರ್ಗದಲಿ:
ಧರ್ಮದಲ್ಲಿ ಅಪಾರ ನಂಬುಗೆ ಹೊಂದಿದವರು.ಯಾವ ಧರ್ಮ ಕನಿಷ್ಠ ಶ್ರೇಷ್ಠ ಎಂದು ಭಾವಿಸಲಿಲ್ಲ.ಎಲ್ಲ ಧರ್ಮ,ಮತ,ಪಂಥ,ಶರಣರು,ಆಚಾರ್ಯ,ಸಂತರನ್ನು ಗೌರವದಿಂದ ಪೂಜಿಸಿದವರು.ವೀರಶೈವ- ಶರಣರನ್ನು
ಅರಿತ ತ್ರಿಕಾಲ ಪೂಜಾನಿಷ್ಠರಾದವರು.ಸರಳ ಜೀವನ ಸಾತ್ವಿಕ ಪಥದಲ್ಲಿ ನಡೆದವರು.
ಮನೆ ಗೆದ್ದು ಮಾರುಗೆದ್ದವರು:
ತಮ್ಮ ಮನೆತನಕ್ಕೆ ತಕ್ಕ ಪತ್ನಿ ಬೇಕು.ಜೊತೆಗೆ ತಂದೆ ತಾಯಿ ಆರಾಧಿಸುವವರು ಇರಬೆರಕೆಂಬ ಧೃಡ ಸಂಕಲ್ಪ ಕ್ಕೆ ತಕ್ಕಂತೆ ಸೇಡಂ ತಾಲೂಕಿನ ನೀಲಹಳ್ಳಿಯ ಪಾಟೀಲ ಮನೆತನದ ಶ್ರೀ ಚಂದ್ರಶೇಖರ ಪಾಟೀಲ ಅವರ ಸುಪು ತ್ರಿಯನ್ನು ದಿನಾಂಕ: ೦೪-೦೫-೧೯೬೪ರಲ್ಲಿ ವಿವಾಹ ವಾದರು.ಇಷ್ಟಲಿಂಗ ಪೂಜಾ ನಿಷ್ಠ, ಅತ್ತೆ-ಮಾವ,ಮನೆ ಯನ್ನು ತುಂಬಾ ಅಚ್ಚುಕಟ್ಟುತನದಿಂದ ಮುನ್ನಡೆಸಿ ಕೊಂಡು ಬಂದರು.ಸಮರಸ ಜೀವನ ಕಂಡವರು. ಸತಿ ಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಅನ್ನುವ ಹಾಗೆ ದಾಂಪತ್ಯ ಜೀವನ ಸಾಗಿಸಿದವರು.ಡಾ. ಶೋಭಾ,ಶ್ರೀ ಲಿಂಗರಾಜ,ಶ್ರೀಮತಿ ಶೈಲಜಾ,ಶ್ರೀಮತಿ ನಂದಾ ಮತ್ತು ಶ್ರೀಸಿದ್ಧಲಿಂಗ ಐದು ಜನ ಮಕ್ಕಳು, ಸೊಸೆ,ಅಳಿಯ,ಮೊಮ್ಮಕ್ಕಳೊಂದಿಗೆ ಸೇರಿ ತುಂಬು ಕುಟುಂಬ ನಿರ್ವಹಿಸಿದವರು.ಹೀಗಾಗಿ ಮನೆಗೆದ್ದು ಮಾರು ಗೆದ್ದ ಅಪೂರ್ವ ಸಾಂಸಾರಿಕ ಬದುಕು ಕಳೆದವ ರು.ಶಾಂತಲಿಂಗಪ್ಪಗೌಡ ಶಿವಶರಣಪ್ಪಗೌಡ ಪಾಟೀಲ ಎಸ್.ಎಸ್.ಪಾಟೀಲ ಎಂದೇ ಪ್ರಖ್ಯಾತರಾದರು.
ಕಲಬುರಗಿಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ:
ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸಲಹೆಯ ಮೇರೆಗೆ ಕಲಬುರಗಿಯಲ್ಲಿ ವಿದ್ಯುತ್ ಸಿಮೆಂಟ್ ಪೋಲ್ಸ ಕಾರಖಾನೆಯನ್ನು ೧೯೬೫ರಲ್ಲಿ ಪ್ರಾರಂಭಿಸಿದ ರು.ಒಕ್ಕಲುತನ ತೋಟಪಟ್ಟಿ,ಎಸ್.ಆರ್.ಪಾಟೀಲ ಅಡತ ಅಂಗಡಿ,ಸಿದ್ಧಲಿಂಗೇಶ್ವರ ದಾಲ್ ಮಿಲ್ಲ,ಸಂಗ ಮ ಚಿತ್ರ ಂಮದಿರ,ತ್ರಿವೇಣಿ ಚಿತ್ರ ಮಂದಿರ, ಎಸ್.ಎ ಸ್.ಪಾಟೀಲ ಗ್ರುಪ್ ಆಫ್ ಇಂಡಸ್ಟ್ರೀಸ್, ಸಿಮೆಂಟ್ ಸ್ಟನ್ ಪೈಪ್ ಮ್ಯಾನ್ಯೊ ಫ್ಯಾಕ್ಟರಿ, ಸಿಮೆಂಟ್ ಅಂಡ್ ಲೊಕ್ವಡ್ ಪ್ರಾಡಕ್ಟ್ ಫ್ಯಾಕ್ಟರಿ, ಮೈಸೂರು ಟ್ರೆಡಿಂಗ್,ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ,ರೈಲು,ವಿಮಾನ,ಟೂರ್ಸ,ಎಂಡ್ ಟ್ರಾವೆಲ್ ಅಲ್ಲದೇ ಹಲವಾರ ವಿದೇಶಗಳಲ್ಲಿ ತಮ್ಮ ಸಂದರ್ಶನ, ಔದ್ಯೋಗಿಕ ಕ್ರಾಂತಿ ಮಾಡಿದ್ದಾರೆ.
ಕೊಡುಗೈ ದಾನಿ:
ವಸತಿಶಾಲೆ,ಅರವಿಂದ ಧ್ಯಾನ ಮಂದಿರ,ಗುಲ್ಬರ್ಗಾ ವಿಶ್ವವಿದ್ಯಾಲಯದ ಎನ್.ರುದ್ರಯ್ಯ ಸಂಶೋಧನಾ ಸಂಸ್ಥೆ, ಎಸ್.ಆರ್.ಪಾಟೀಲ ಪ್ರತಿಷ್ಠಾನ, ಸಾಹಿತಿ,ವಿವಿ ಧ ಕ್ಷೇತ್ರದಲ್ಲಿ ಸಾಧಕರಿಗೆ ಪ್ರಶಸ್ತಿ, ವಿಶೇಷ ಉಪನ್ಯಾಸ, ಆಶುಭಾಷಣ,ಪ್ರಬಂಧ,ಚರ್ಚಾಸ್ಪರ್ಧೆ, ಕಾಯಕಯೋ ಗಿ( ಎಸ್.ಆರ್.ಪಾಟೀಲ), ವಚನ ಸಾಹಿತ್ಯ ಡಾ.ಜ.ಅನ್ನದಾನೇಶ್ವರ ಸ್ವಾಮಿಗಳು,ವೀರಶೈವ ಧರ್ಮ- ಡಾ.ಮೂಜಗಂ,ಮೊದಲಾದ ಗ್ರಂಥ ಪ್ರಕಟಣೆ.
ಅಲ್ಲದೇ ಹೋದ ವರ್ಷದಿಂದ ನಾಡೋಜ ಡಾ.ಮನು ಬಳಿಗಾರ ಅವರು ಪ್ರಥಮ ಲಿಂ.ಎಸ್ಎಸ್.ಪಾಟೀಲ ಅವರ ಸ್ಮರಣೆಗಾಗಿ ಪ್ರಶಸ್ತಿ ಪ್ರದಾನ ಅಚ್ವುಕಟ್ಟಾಗಿ ನಡೆಯಿತು.
ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಕಾರ್ಯ ಚಟುವಟಿ ಕೆಯ ಮೂಲಕ ಲಿಂ. ಶ್ರೀ ಎಸ್.ಎಸ್.ಪಾಟೀಲರು ಬಹುಮುಖ ವ್ಯಕ್ತಿತ್ವ.ಅವರೊಬ್ಬ ಕಾಯಕ, ದಾಸೋಹ ಮೂಲಕ ಕನ್ನಡ ನಾಡಿನ ಹಾಗೂ ದೇಶದ- ಅಂತರಾ ಷ್ಟ್ರೀಯ ಮಟ್ಟದ ವಾಣಿಜ್ಯೋದ್ಯಮಿಯಾಗಿ ಮನೆ ಮಾತಾದ ಸಹೃದಯ ಜೀವಿ.ಸಿರಿವಂತಿಕೆ,ಹಣ ಅಧಿಕಾರ ಎಲ್ಲವೂ ಇದ್ದರೂ ತೋರಗೊಡದ ನಿಸ್ಪ್ರಹ ಜೀವಿ.ಸದಾ ಕಾಲ ಒಳಿತು ಬಯಸುವ ಮಹಾ ಶರಣ ಪಥಿಕ-ಔದ್ಯೋಗಿಕ ಮಹಾ ಪಥಿಕ.ಈಗ ಬದುಕಿದ್ದರೆ ಎಂಬತ್ತೈದರಲ್ಲಿರುತ್ತಿದ್ದರು.ಅವರ ದ್ವಿತೀಯ ಪುಣ್ಯ ಸ್ಮರಣೆ.ಅವರ ಜೀವನ ನಂದಾದೀಪ.ಅನೇಕ ಕುಟುಂಬ,ಸಮುದಾಯ,ಮನೆತನಕ್ಕೆ ಆಶ್ರಯ ದೀಪವಾಗಿದ್ದವರು.
(ದಿನಾಂಕ: ೨೩-೦೮-೨೦೨೪ರಂದು ಲಿಂ.ಎಸ್. ಎಸ್. ಪಾಟೀಲರ ದ್ವೀತಿಯ ಪುಣ್ಯಸ್ಮರಣೆ ನಿಮಿತ್ಯ ಲೇಖನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಯಲ್ಲಿ ಜರುಗುಲಿದೆ)..
ಡಾ.ಗವಿಸಿದ್ದಪ್ಪ.ಪಾಟೀಲ ಚಿತ್ರ