ಜೋಳದಡಗಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿಂತಿರುವ ನೀರು- ಕ್ಯಾರೆ ಎನ್ನದ ಅಧಿಕಾರಿಗಳು

ಜೋಳದಡಗಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿಂತಿರುವ ನೀರು- ಕ್ಯಾರೆ ಎನ್ನದ ಅಧಿಕಾರಿಗಳು

( ವಡಗೇರಾ ತಾಲೂಕ ವರದಿಗಾರರು ಮಹಾದೇವಪ್ಪ ಗಂಗಣ್ಣೋರ್)

 ಜೋಳದಡಗಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿಂತಿರುವ ನೀರು- ಕ್ಯಾರೆ ಎನ್ನದ ಅಧಿಕಾರಿಗಳು 

 ಯಾದಗಿರ/ವಡಗೇರಾ : ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಜೋಳದಡಗಿ ಶಾಲೆಯ ಮೈದಾನದಲ್ಲಿ ಮತ್ತು ಅಡುಗೆ ಕೋಣೆಗಳಲ್ಲಿ ನೀರು ನಿಂತು ಮಕ್ಕಳು ನೀರಿನಲ್ಲಿ ತಿರುಗಾಡುವಂತಾಗಿದೆ. ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಮಕ್ಕಳಿಗೆ ಖಚ್ಚುವುದರಿಂದ ಕಾಲರ, ಡೆಂಗ್ಯು, ಮಲೇರಿಯದಂತ ರೋಗಗಳು ಹರಡುತ್ತವೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಿತ್ತ ಗಮನಹರಿಸಿ ಯಾವುದಾದರೂ ಯೋಜನೆಯಡಿಯಲ್ಲಿ ಮರಮ್ ಹಾಕಿಸಿ ಮಕ್ಕಳಿಗೆ ಶಾಲೆಗೆ ಬರಲು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ತಮ್ಮ ಹೆಸರೇಳಲಿಚ್ಚಿಸದ ಪೋಷಕರೊಬ್ಬರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.