ಅಪಾಯದಲ್ಲಿದ್ದ ನವಜಾತ ಶಿಶುವಿಗೆ ಸೂಕ್ತ ಚಿಕಿತ್ಸೆ ನೀಡಿ ಅಮೂಲ್ಯ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು
ಅಪಾಯದಲ್ಲಿದ್ದ ನವಜಾತ ಶಿಶುವಿಗೆ ಸೂಕ್ತ ಚಿಕಿತ್ಸೆ ನೀಡಿ ಅಮೂಲ್ಯ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು
ಜೀವನ್ಮರಣದ ಹೋರಾಟದಲ್ಲಿದ್ದ ನವಜಾತ ಶಿಶುವಿಗೆ ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿ ಪುನರ್ಜನ್ಮ ನೀಡಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಚಿಕ್ಕ ಮಕ್ಕಳ ವೈದ್ಯ ಸಿಬ್ಬಂದಿ.
ನವಜಾತ ಶಿಶು ವೊಂದು ಉಸಿರಾಟದ ತೊಂದರೆ ಹಾಗೂ ಅತಿಯಾದ ಜೊಲ್ಲು ಸೋರುವಿಕೆಯ ತೊಂದರೆಯಿಂದ ಬಳಲುತ್ತಿದ್ದ ನವಜಾತ ಶಿಶು ಬಸವೇಶ್ವರ ಆಸ್ಪತ್ರೆಗೆ ದಾಖಲಾಯಿತು. ಇದನ್ನು ಗಮನಿಸಿದ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಡಾ ಶರಣ ಗುಬ್ಬಿ, ಡಾ ರೂಪಾ ಮಂಗಶೆಟ್ಟಿ ಡಾ ಪ್ರತಿಮಾ ಎನ್ ಜೀವನ್ಮರಣದ ಹೋರಾಟದಲ್ಲಿದ್ದ ಮಗುವಿಗೆ ಚಿಕಿತ್ಸೆ ಮುಂದಾಗಿ ನವಜಾತ ಶಿಶುವಿನ ತೊಂದರೆಯನ್ನು ಟಿಇಎಪ್ ನೊಂದಿಗೆ ಅನ್ನನಾಳದ ರೋಗವನ್ನು ಸರಿಯಾಗಿ ಗುರುತಿಸಿ ತಕ್ಷಣ ವೆಂಟಿಲೇಟರ್ ನಲ್ಲಿ ಇರಿಸಿ ಅತ್ಯಂತ ಸೂಕ್ಷ್ಮವಾದ ಮತ್ತು ಕಠಿಣ ಶಸ್ತ್ರ ಚಿಕಿತ್ಸೆ ಮಾಡಿ ಜೀವನ್ಮರಣದ ಹೋರಾಟದ ನವಜಾತ ಶಿಶುವನ್ನು ರಕ್ಷಿಸಿ ಅಮೂಲ್ಯ ಜೀವ ಉಳಿಸಿ ಸಾಧನೆ ಮಾಡಿದ್ದಾರೆ.
ಮಗುವನ್ನು ಎಬಿ ಎ ಆರ್ ಕೆ ಯೋಜನೆಯಲ್ಲಿ ದಾಖಲಿಸಿಕೊಂಡು ಉಚಿತ ಚಿಕಿತ್ಸೆ ನೀಡಲಾಯಿತು.
ಈ ವೈದ್ಯರ ವಿಶೇಷ ಸಾಧನೆಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್, ಆಸ್ಪತ್ರೆಯ ಸಂಚಾಲಕರಾದ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್ ಹಾಗೂ ಆಡಳಿತ ಮಂಡಳಿ ಸದಸ್ಯರು ವೈದ್ಯ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.