ಡಿಗ್ಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ
ಡಿಗ್ಗಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ
ಕಮಲನಗರ:ತಾಲೂಕಿನ ಡಿಗ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಶೂ ಹಾಗೂ ಸಾಕ್ಸ್ ವಿತರಣಾ ಸಮಾರಂಭ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮ ಉದ್ಘಾಟಕ್ಕಾರಾಗಿ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಸ್ವಿಕೃತ ಪ್ರೊ. ಎಸ್. ಎಸ್. ರಾಂಪುರೆ ಮಾತನಾಡಿ, ಇಂದಿನ ಯುಗದಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣವಷ್ಟೇ ಅಲ್ಲದೆ, ಅವರ ಉತ್ತಮ ನಡಿಗೆ ಮತ್ತು ಆರೋಗ್ಯಕ್ಕೆ ಪೂರಕವಾದ ಸೌಲಭ್ಯಗಳು ಅಗತ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಸರಕಾರದ ಅನೇಕ ಯೋಜನೆಯಲ್ಲಿ ಉಚಿತ ಶೂ ಹಾಗೂ ಸಾಕ್ಸ್ ವಿತರಣೆ ಒಂದಾಗಿದೆ ಎಂದು ಹೇಳಿದರು.
ನಾನು ಇದೆ ಶಾಲೆಯಲ್ಲಿ ಅಂದಿನ ಕಷ್ಟ ದಿನಮಾನಗಳಲ್ಲಿ ಕಲಿತು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವೆ, ಬಡ ಮಕ್ಕಳು ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿದು, ಶಿಕ್ಷಣಕ್ಕೆ ಯಾವುದಾದರು ಮಕ್ಕಳಿಗೆ ಹಣದ ತೊಂದರೆ ಆಗುತ್ತಿದ್ದರೆ ಅಂತಹ ಮಕ್ಕಳನ್ನು ನನ್ನ ಗಮನಕ್ಕೆ ತನ್ನಿ ಅವರಿಗೆ ಸಹಾಯ ಹಸ್ತ ನೀಡುತ್ತೇನೆ ಎಂದು ಶಾಲಾ ಆಡಳಿತ ಮಂಡಳಿಯರಿಗೆ ತಿಳಿಸಿದ್ದರು.
ಸರಕಾರ ಪ್ರತಿನಿಧಿಯಾಗಿ ಸ್ಥಳೀಯ ಸಿ.ಆರ್.ಪಿ. ಶಿವಕುಮಾರ ಹೊನ್ನಾಳೆ ಮಾತನಾಡಿ, ತಾಲೂಕಿನ ಪ್ರಮುಖ ಶಾಲೆಯಲ್ಲಿ ಡಿಗ್ಗಿ ಶಾಲೆ ಒಂದಾಗಿದು, ಮಕ್ಕಳು ಸರಕಾರದಿಂದ ಬರುವ ಎಲ್ಲಾ ಸೌಲಭ್ಯ ಲಾಭ ತೆಗೆದುಕೊಂಡು ಉತ್ತಮ ಸಾಧನೆ ಮಾಡಬೇಕೆಂದು ತಿಳಿಸಿದ್ದರು ಮತ್ತು ಮುಂಬರುವ ದಿನಗಳಲ್ಲಿ ಶಾಲೆಯ ಸರ್ವೋತೋಮುಖ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿ ನಿವೃತ್ತ ಶಿಕ್ಷಕರಾದ ಮಡಿವಾಳಪ್ಪ ಮುರ್ಕೆ ಮಾತನಾಡಿ,ಶಿಕ್ಷಣಕ್ಕೆ ಪ್ರೋತ್ಸಾಹಕ್ಕಾಗಿ ಸರಕಾರ ಹತ್ತು ಹಲವು ಯೋಜನೆ ನೀಡುತ್ತಿದೆ. ಸರಕಾರಿ ಶಾಲೆಯಲ್ಲಿ ನೂರಿತ ಶಿಕ್ಷಕರಿಂದ ಶಿಕ್ಷಣ ನೀಡಲಾಗುವುದು, ಮಕ್ಕಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಂತೋಷ ಬನವಾಸೆ ಮಾತನಾಡಿದರು.ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿಗೆ ಪಾತ್ರರಾದ ಪ್ರೊ. ಎಸ್. ಎಸ್. ರಾಂಪುರೆ ಅವರಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ ಅಧಿಕಾರಿ ಸೂರ್ಯಕಾಂತ ಬಿರಾದಾರ, ಶೂ ಕಂಪನಿ ಪ್ರತಿನಿಧಿ ರಾಜಕುಮಾರ ಕಾಂಬ್ಳೆ,ಮುಖ್ಯಗುರು ಸಂತೋಷ ಬಿರಾದಾರ, ವಿಜಯಲಕ್ಷ್ಮಿ ಪಾಟೀಲ, ಸತೀಶ ಕುಲಾಲ, ಮಂಗಲಾ ಸೇನ,
ಪಾಲಕರದ ದಯಾನಂದ, ಪಿಂಟು, ಪತ್ರಕರ್ತ ಪರಮೇಶ ರಾಂಪುರೆ ಸೇರಿದಂತೆ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
