ಶಾಸಕರ ಹುಟ್ಟುಹಬ್ಬ : ಅನ್ನ ಸಮರ್ಪಣೆ|

ಶಾಸಕರ ಹುಟ್ಟುಹಬ್ಬ : ಅನ್ನ ಸಮರ್ಪಣೆ|
ಶಾಸಕರು : ಅಬಿವೃದ್ಧಿ ಹರಿಕಾರ, ಕೊಡಗೈ ದಾನಿಯಾಗಿದ್ದಾರೆ :.. ಗುಂಡಪ್ಪ.
ಶಹಾಬಾದ : - ನಗರದ ಬಸ್ ನಿಲ್ದಾಣದ ಹತ್ತಿರ ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ಸೋಮವಾರ ಮಾದಿಗ ಸಮಾಜದ ವತಿಯಿಂದ ಶಾಸಕ ಬಸವರಾಜ ಮತ್ತಿಮಡು ಅವರ 45ನೇ ಹುಟ್ಟುಹಬ್ಬದ ದಿನದಂದು ಅನ್ನಸಂತರ್ಪಣೆ ಕಾರ್ಯಕ್ರಮ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಗುಂಡಪ್ಪ ಶಿರಡೋಣ ಮತ್ತು ಮಂಡಲದ ಎಸ್ಸಿ ಮೋರ್ಚದ ಅಧ್ಯಕ್ಷರಾದ ಅಮರ ಕೊರೆ ಮಾತನಾಡಿ, ಅಭಿವೃದ್ಧಿ ಹರಿಕಾರಕ, ಯುವ ಜನರಿಗೆ ಸ್ಪೂರ್ತಿ ಆದ ಬಸವರಾಜ ಮತ್ತಿಮಡು ಅವರು ಅಬಿವೃದ್ಧಿ ಪರ ಚಿಂತನೆ ಮಾಡುವ, ಬಡವರ ಬಂಧುಗಳಾಗಿ ಜನಸೇವೆ ಮಾಡುತ್ತಿದ್ದಾರೆ, ಹಾಗೆ ಕೊಡಗೈ ದಾನಿಯಾಗಿ ಕಾಮಧನು ಕಲ್ಪವೃಕ್ಷ ದಂತಿದ್ದಾರೆ, ಅವರ ಆಯಸ್ಸು, ಆರೋಗ್ಯ ಮತ್ತು ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಬೆಳಿಯಲಿ ಎಂದು ಹಾರೈಸಿ ಅವರ ಹುಟ್ಟು ಹಬ್ಬವನ್ನು ಆಚರಿಸಿತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಅಧ್ಯಕ್ಷ ವಿಕ್ರಂ ಮೂಲಿಮನಿ, ಮುಖಂಡ ರವಿ ಬೆಳಮಗಿ, ನಾರಾಯಣ ಕಂದಕೂರ, ಅನಿಲ ಮೈನಾಳಕರ, ಮಲ್ಲೇಶಿ ಸೈದಾಪುರ, ಭೀಮರಾಯ ಕನಗನಳ್ಳಿ, ಶರಣರಾಜ ಪೆಂಟರ್, ಪ್ರಮೋದ ಮಲ್ಲಾರ, ನಾಗರಾಜ ಮುದ್ನಾಳ, ಸಂತೋಷ್ ಹುಲಿ ಹಾಗೂ ಬಿಜೆಪಿ ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ 01: -ಶಹಾಬಾದ್ ಶಾಸಕ ಬಸವರಾಜ ಮತ್ತಿಮಡು ಹುಟ್ಟು ಹಬ್ಬದ ದಿನದಂದು ಮಾದಿಗ ಸಮಾಜದ ವತಿಯಿಂದ ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ಕಾರ್ಯಕ್ರಮ ಮಾಡಿದರು.
ಚಿತ್ರ 02 : -ಶಹಾಬಾದ್ ಶಾಸಕ ಬಸವರಾಜ ಮತ್ತಿಮಡು ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ನಗರದ ಸರ್ಕಾರಿ ಮಾದರಿ ಶಾಲೆಯ ಮಕ್ಕಳಿಗೆ ಪರೀಕ್ಷಾ ಸಾಮಗ್ರಿಗಳು ಪೆನ್ನು ಪುಸ್ತಕ ವಿತರಿಸಿದರು.
ಶಹಾಬಾದ್ ವರದಿ :- ನಾಗರಾಜ್ ದಂಡಾವತಿ